ಒಮ್ಮನಸ್ಸಿನ ಕೊರತೆ ನೀಗಿಸಲು ಸಕಾಲ
Team Udayavani, Aug 29, 2017, 8:45 AM IST
ಉಡುಪಿ: ನಮ್ಮ ದೇಶ ಈಗಾಗಲೇ ಬಹಳಷ್ಟು ಎತ್ತರಕ್ಕೆ ಏರಬೇಕಾಗಿತ್ತು. ಒಮ್ಮನಸ್ಸಿನ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಆ ಕೊರತೆಯನ್ನು ನಾವು ಇನ್ನಾದರೂ ಭರ್ತಿ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಎಲ್ಲಿ ಹೋದರೂ ನಮ್ಮ ದೇಶಕ್ಕೆ ಗೌರವ ಇದೆ. ದೇಶ ನಿಧಾನವಾಗಿ ಹೆಜ್ಜೆ ಮುಂದೆ ಇಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯ ದರ್ಶಿ ಸಂತೋಷ್ ಹೇಳಿದರು.ಅವರು ಸೋಮವಾರ ಕಡಿಯಾಳಿ ಕಾತ್ಯಾಯನೀ ಮಂಟಪದಲ್ಲಿ ಕಡಿಯಾಳಿಯ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 51ನೇ ವರ್ಷದ ಗಣೇಶೋತ್ಸವ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸನಾತನವಾದ ಧರ್ಮ ನಮ್ಮದು. ಗಣಪತಿಯ ಲಕ್ಷಣವೇ ಸೃಜನ ಶೀಲತೆ. ಜಗತ್ತಿನ ವಿವಿಧೆಡೆ ಪೂಜಿಸಲ್ಪಡುವ ದೇವ ಗಣಪತಿಯಾಗಿದ್ದಾನೆ ಎಂದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ. ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಘುಪತಿ ಭಟ್, ಭಾರತ್ ವಿಕಾಸ್ ಪರಿಷತ್ ಭಾರ್ಗವ ಶಾಖೆ ಅಧ್ಯಕ್ಷ ಕೆ. ರಘುಪತಿ ಉಪಾಧ್ಯ ಉಪಸ್ಥಿತರಿದ್ದರು. ಆಸರೆಯ ಚೆಕ್ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು.
ಪ್ರ. ಕಾರ್ಯದರ್ಶಿ ರಾಘವೇಂದ್ರ ಕಿಣಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್ ಕುಲಾಲ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.