ನೂತನ ಸಿಜೆಐ ಆಗಿ ನ್ಯಾ|ದೀಪಕ್ ಮಿಶ್ರಾ ಅಧಿಕಾರ ಸ್ವೀಕಾರ
Team Udayavani, Aug 29, 2017, 6:25 AM IST
ಹೊಸದಿಲ್ಲಿ: ಸಿನೆಮಾ ಹಾಲ್ಗಳಲ್ಲಿ ಕಡ್ಡಾಯ ರಾಷ್ಟ್ರಗೀತೆ ಗಾಯನ, ದಿಲ್ಲಿ ಗ್ಯಾಂಗ್ರೇಪ್ ಆರೋಪಿಗಳಿಗೆ ಗಲ್ಲುಶಿಕ್ಷೆ ತೀರ್ಪು ನೀಡಿದ ಖ್ಯಾತಿಯ ನ್ಯಾ|ದೀಪಕ್ ಮಿಶ್ರಾ ಅವರು ಸುಪ್ರೀಂ ಕೋರ್ಟ್ನ 45ನೇ ಮುಖ್ಯ ನ್ಯಾಯ ಮೂರ್ತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನ್ಯಾ.ಮಿಶ್ರಾ (64) ಅವರಿಗೆ ಪ್ರಮಾಣ ವಚನ ಬೋಧಿಸಿದರು. ಭಾನುವಾರ ವಷ್ಟೇ ಹಿಂದಿನ ಸಿಜೆಐ ನ್ಯಾ.ಖೆಹರ್ ನಿವೃತ್ತರಾಗಿ ದ್ದರು. ನ್ಯಾ|ಮಿಶ್ರಾ ಅವರ ಅಧಿಕಾರಾವಧಿ 2018 ಅ.2ರವರೆಗೆ ಇರಲಿದೆ. ಈ ಹಿಂದಿನ ಪದ್ಧತಿಯಂತೆ ನ್ಯಾ.ಖೆಹರ್ ಅವರು ನ್ಯಾ.ಮಿಶ್ರಾ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಸೂಚಿಸಿದ್ದರು.
ನ್ಯಾ|ಮಿಶ್ರಾ ಅವರು ಈ ಹಿಂದೆ ಪಾಟ್ನಾ ಮತ್ತು ದಿಲ್ಲಿ ಹೈಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2011 ರಲ್ಲಿ ಸುಪ್ರೀಂ ನ್ಯಾಯಮೂರ್ತಿಯಾಗಿ ನಿಯುಕ್ತಿಗೊಂಡಿದ್ದರು. ಸದ್ಯ ಇವರು ಕಾವೇರಿ, ಕೃಷ್ಣಾ ಜಲ ವಿವಾದ, ಬಿಸಿಸಿಐ ಸುಧಾರಣೆ, ಸಹಾರಾ ಮತ್ತಿತರ ಕೇಸು ಗಳ ವಿಚಾರಣೆ ನಡೆಸು ತ್ತಿರುವ ನ್ಯಾಯಪೀಠ ಗಳ ನೇತೃತ್ವ ವಹಿಸಿದ್ದಾರೆ.
ಪ್ರಧಾನಿ ಅಭಿನಂದನೆ: ನೂತನ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿರುವ ನ್ಯಾ| ಮಿಶ್ರಾ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ನ್ಯಾ.ಮಿಶ್ರಾ ಅವರ ಅಧಿಕಾರಾವಧಿ ಫಲದಾಯಕವಾಗಿರಲಿ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ
Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ
One Nation, One Election: ಸಂಸದರಿಗೆ ಜೆಪಿಸಿ ಸಭೆಯಲ್ಲಿ 52 ಕೆ.ಜಿ. ತೂಕದ ಸೂಟ್ಕೇಸ್!
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.