ಹೊಸ್ಮಠ, ಬಿಳಿನೆಲೆ ಸೇತುವೆ ಮುಳುಗಡೆ
Team Udayavani, Aug 29, 2017, 7:05 AM IST
ಕಡಬ: ಘಟ್ಟದ ಮೇಲೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ನೆರೆ ನೀರಿನ ಮಟ್ಟ ಏರಿಕೆಯಾಗಿದೆ. ಸೋಮವಾರ ಸಂಜೆ ವೇಳೆಗೆ ಕಡಬ ಸಮೀಪದ ಹೊಸ್ಮಠ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ ಕಡಬದ ಮೂಲಕ ಹಾದು ಹೋಗುವ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತು.
ಸಂಜೆ ಸುಮಾರು 6 ಗಂಟೆಯ ವೇಳೆಗೆ ಮುಳುಗಡೆ ಯಾಗಿರುವ ಸೇತುವೆಯ ಮೇಲಿನಿಂದ ರಾತ್ರಿಯ ತನಕವೂ ನೆರೆನೀರು ಇಳಿದಿರಲಿಲ್ಲ. ಸೇತುವೆಯ ಇಕ್ಕೆಲೆಗಳಲ್ಲಿ ರಕ್ಷಣಾ ಗೇಟುಗಳನ್ನು ಮುಚ್ಚಲಾಗಿದ್ದು, ಕಡಬ ಪೊಲೀಸರು ಹಾಗೂ ಗೃಹರಕ್ಷಕ ಸಿಬಂದಿ ಕಾವಲು ನಿರತರಾಗಿದ್ದಾರೆ.
ಬಿಳಿನೆಲೆ ಸೇತುವೆ ಮುಳುಗಡೆ
ಕಡಬದ ಹೊಸಮಠ ಸೇತುವೆ ಮುಳುಗಡೆ ಯಾಗುವುದಕ್ಕೆ ಮೊದಲೇ ನೆಟ್ಟಣ ಹಾಗೂ ಬಿಳಿನೆಲೆ ಪೇಟೆಯ ನಡುವೆ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಯಲ್ಲಿ ಬರುವ ಬಿಳಿನೆಲೆ ಮುಳುಗು ಸೇತುವೆಯೂ ನೆರೆನೀರಿನಿಂದ ಮುಳುಗಡೆಯಾಗಿದೆ. ಸಂಜೆ 5 ಗಂಟೆಯ ವೇಳೆಗೆ ಸೇತುವೆಯ ಮೇಲಿನಿಂದ ರಾತ್ರಿಯ ತನಕವೂ ನೆರೆನೀರು ಇಳಿದಿರಲಿಲ್ಲ. ಸೇತುವೆ ಮುಳುಗಡೆ ಯಿಂದಾಗಿ ಧರ್ಮಸ್ಥಳ-ಸುಬ್ರಹ್ಮಣ್ಯ ಮಾರ್ಗ ದಲ್ಲಿ ಸಂಚರಿಸುವ ವಾಹನಗಳು ಸಂಚಾರ ಮುಂದುವರಿಸಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.