ಉಪೇಂದ್ರ ರಾಜಕೀಯಕ್ಕೆ, ಮಗಳು ಸಿನಿಮಾಗೆ!
Team Udayavani, Aug 29, 2017, 10:40 AM IST
ಉಪೇಂದ್ರ ಇತ್ತೀಚೆಗಷ್ಟೇ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಈಗ ಅವರ ಮಗಳು ಐಶ್ವರ್ಯ ಸಿನಿಮಾಗೆ ಎಂಟ್ರಿಯಾಗಿದ್ದಾರೆ. ಒಂಭತ್ತು ವರ್ಷದ ಐಶ್ವರ್ಯ ಅವರಿಗೆ ಇಲ್ಲೊಂದು ವಿಶೇಷ ಪಾತ್ರವಿದೆ. ಆ ಪಾತ್ರ ಯಾವುದು ಎಂಬುದನ್ನು ಈಗಲೇ ಹೇಳಲು ಇಷ್ಟಪಡದ ನಿರ್ದೇಶಕ ಲೋಹಿತ್, “ಅದೊಂದು ಸ್ಪೆಷಲ್ ಮತ್ತು ಸಸ್ಪೆನ್ಸ್ ಆಗಿರುವಂತಹ ಪಾತ್ರ. ಚಿತ್ರದಲ್ಲಿ ಆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.
ಉಪೇಂದ್ರ ಮತ್ತು ಪ್ರಿಯಾಂಕ ಅವರ ಪುತ್ರಿ ಎಂಬ ಕಾರಣಕ್ಕೆ “ಹೌರಾ ಬ್ರಿಡ್ಜ್’ನಲ್ಲಿ ಪಾತ್ರ ನೀಡಿಲ್ಲ. ಆ ಪಾತ್ರಕ್ಕೆ ಐಶ್ವರ್ಯ ಸರಿಹೊಂದುತ್ತಾರೆ ಎಂಬ ಕಾರಣಕ್ಕೆ ಅವರನ್ನು ಕ್ಯಾಮೆರಾ ಮುಂದೆ ನಿಲ್ಲಿಸಲಾಗುತ್ತಿದೆ’ ಎನ್ನುತ್ತಾರೆ ಲೋಹಿತ್. “ಮಮ್ಮಿ’ ಯಶಸ್ಸಿನ ಬಳಿಕ ನಿರ್ದೇಶಕ ಲೋಹಿತ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದು. ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರು ನಟಿಸುತ್ತಿರುವುದು ಗೊತ್ತೇ ಇದೆ.
ಇದಲ್ಲದೆ, ಬಾಲಿವುಡ್ನ ಇಬ್ಬರು ಪ್ರಮುಖ ಕಲಾವಿದರು ಕೂಡ ಇಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ನಿರ್ದೇಶಕ ಲೋಹಿತ್ ಮಾತು. ಈಗ ಅದಕ್ಕೆ ಹೊಸ ಸೇರ್ಪಡೆ ಅಂದರೆ, ಉಪೇಂದ್ರ ಅವರ ಪುತ್ರಿ ಐಶ್ವರ್ಯ. ಅಂದಹಾಗೆ, ಇಲ್ಲಿ ತಾಯಿ-ಮಗಳು ಇಬ್ಬರೂ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ? ಇದಕ್ಕೆ ಉತ್ತರಿಸುವ ಲೋಹಿತ್, “ಕಾಂಬಿನೇಷನ್ ಬಗ್ಗೆ ಹೇಳುವುದಿಲ್ಲ.
ಆದರೆ, ಇಬ್ಬರದೂ ಇಲ್ಲಿ ಮೇಜರ್ ಪಾತ್ರ ಎಂಬುದಷ್ಟೇ ನಿಜ. ಇನ್ನು, ಕೊಲ್ಕತ್ತಾದಲ್ಲಿ ಚಿತ್ರದ ಫೋಟೋ ಶೂಟ್ ನಡೆಸಲಾಗುವುದು. ಆ ಭಾಗದ ಪ್ರಮುಖ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರೀಕರಣ ಶುರುವಾಗಲಿದೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಶುರುವಾಗಲಿರುವ ಈ ಸಿನಿಮಾಗೆ ಈಗಾಗಲೇ ಎಲ್ಲಾ ತಯಾರಿ ನಡೆಯುತ್ತಿದೆ.
ಕನ್ನಡದಲ್ಲಿ ಭಾಸ್ಕರ್ ಮತ್ತು ಪ್ರಸಾದ್ರಾವ್ ನಿರ್ಮಾಣದ ಉಸ್ತುವಾರಿ ವಹಿಸಿದರೆ, ತಮಿಳು ಭಾಷೆಯಲ್ಲಿ ತಯಾರಾಗುವ ಚಿತ್ರಕ್ಕೆ ಜಿಎಸ್ಕೆ ಫಿಲ್ಮ್ಸ್ ನಿರ್ಮಾಣ ಮಾಡಲಿದೆ. ಚಿತ್ರಕ್ಕೆ ಎಚ್.ಸಿ.ವೇಣು ಕ್ಯಾಮೆರಾ ಹಿಡಿದರೆ, ನೊಬಿನ್ಪಾಲ್ ಸಂಗೀತವಿದೆ’ ಎಂದು ವಿವರ ಕೊಡುತ್ತಾರೆ ಲೋಹಿತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
SpaDeX Mission: ಎರಡು ಉಪಗ್ರಹ 3 ಮೀ. ಸನಿಹಕ್ಕೆ ತಂದ ಇಸ್ರೋ!
Cast Census: ಜಾತಿ ಗಣತಿ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ
Cast Census: ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ
ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.