ಸುದೀಪ್ ಈಗ ಬಾಕ್ಸರ್!
Team Udayavani, Aug 29, 2017, 10:41 AM IST
“ಹೆಬ್ಬುಲಿ’ ಚಿತ್ರ ನಿರ್ದೇಶಿಸಿದ್ದ ಕೃಷ್ಣ , ಸುದೀಪ್ ಅವರ ಜೊತೆ ಮತ್ತೂಂದು ಸಿನಿಮಾ ಮಾಡುತ್ತಾರೆಂಬ ಸುದ್ದಿ ನಿಮಗೆ ಗೊತ್ತೇ ಇದೆ. ಆದರೆ, ಅವರೇ ನಿರ್ಮಾಣ ಮಾಡುತ್ತಾರೆಂಬ ಹೊಸ ಸುದ್ದಿ ಈಗ ಹೊರಬಿದ್ದಿದೆ. ಹೌದು, ಸುದೀಪ್ ಅವರ ಚಿತ್ರವನ್ನು ಕೃಷ್ಣ ಅವರು ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಕೂಡಾ ಮಾಡುತ್ತಿದ್ದಾರೆ. ಆರ್ಆರ್ಆರ್ ಮೋಶನ್ ಪಿಕ್ಚರ್ ಎಂಬ ಬ್ಯಾನರ್ನಡಿ ಈ ಸಿನಿಮಾ ಮಾಡುತ್ತಿದ್ದು, ಅಕ್ಟೋಬರ್ ಕೊನೆಯಲ್ಲಿ ಚಿತ್ರ ಆರಂಭವಾಗಲಿದೆ.
ಅಂದಹಾಗೆ, ಕೃಷ್ಣ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಫೋಟೋಶೂಟ್ ಬೇರೆ ಸದ್ದಿಲ್ಲದೇ ನಡೆದಿದೆ. “ದಿ ವಿಲನ್’ ಚಿತ್ರೀಕರಣಕ್ಕಾಗಿ ಸುದೀಪ್ ಬ್ಯಾಂಕಾಕ್ಗೆ ತೆರಳಿದ್ದ ಸಂದರ್ಭದಲ್ಲಿ ಕೃಷ್ಣ ಅಂಡ್ ಟೀಂ ಕೂಡಾ ಬ್ಯಾಂಕಾಕ್ಗೆ ಹೋಗಿ ಅಲ್ಲೇ ಸುದೀಪ್ ಅವರ ಫೋಟೋಶೂಟ್ ಮಾಡಿಸಿಕೊಂಡು ಬಂದಿದೆ. ಫೋಟೋಶೂಟ್ ಕೂಡಾ ಸಖತ್ ಸ್ಟೈಲಿಶ್ ಆಗಿ ಮೂಡಿಬಂದಿದ್ದು, ಸುದೀಪ್ ಅವರ ಹುಟ್ಟುಹಬ್ಬದಂದು (ಸೆಪ್ಟೆಂಬರ್ 2) ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಲಿದೆ.
ಬಾಕ್ಸಿಂಗ್ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಕೂಡಾ ವಿಭಿನ್ನವಾಗಿದ್ದು, ದಾವಣಗೆರೆ, ಹುಬ್ಬಳ್ಳಿ ಸುತ್ತಮುತ್ತ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. ಚಿತ್ರಕ್ಕೆ ಕೃಷ್ಣ ಅಂದುಕೊಂಡಿರುವ ಟೈಟಲ್ ಬೇರೊಬ್ಬರಲ್ಲಿದ್ದು, ಇವರಿಗೆ ವರ್ಗಾವಣೆಯಾದ ಬಳಿಕೆ ಟೈಟಲ್ ಅನೌನ್ಸ್ ಮಾಡುವುದಾಗಿ ಹೇಳುತ್ತಾರೆ ಕೃಷ್ಣ. ಚಿತ್ರದ ಸಾಹಸ ದೃಶ್ಯಗಳನ್ನು ಹಾಲಿವುಡ್ ಸಾಹಸ ನಿರ್ದೇಶಕರಿಂದ ಮಾಡಿಸಲಿದ್ದಾರಂತೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಕರುಣಾಕರ್ ಛಾಯಾಗ್ರಹಣವಿದೆ. ತಮ್ಮ ಚೊಚ್ಚಲ ನಿರ್ಮಾಣದ ಬಗ್ಗೆ ಮಾತನಾಡುವ ಕೃಷ್ಣ, “ಸುದೀಪ್ ಅವರ ಸಹಕಾರ, ಪ್ರೋತ್ಸಾಹದಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. “ಹೆಬ್ಬುಲಿ’ ಸಿನಿಮಾವನ್ನೇ ನಿರ್ಮಿಸುವಂತೆ ಅವರು ಹೇಳಿದ್ದರು. ನನ್ನನ್ನು ನಿರ್ಮಾಪಕರಾಗಿ ಅವರು ನೋಡುತ್ತಿಲ್ಲ. ಆತ್ಮೀಯನಾಗಿ ನೋಡುತ್ತಿರುವ ಕಾರಣ ಧೈರ್ಯದಿಂದ ಅವರ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದೇನೆ’ ಎನ್ನುವುದು ಕೃಷ್ಣ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.