ಗೋಪಾಡಿ-ವಕ್ವಾಡಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮುಹೂರ್ತ ಎಂದು?
Team Udayavani, Aug 30, 2017, 8:40 AM IST
ಕೋಟೇಶ್ವರ: ಮಳೆಗಾಲದ ಮೊದಲು ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಗೋಪಾಡಿ ತಿರುವಿನಿಂದ ಚಾರುಕೊಟ್ಟಿಗೆ ತನಕ ನೂತನ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ ಕಾಮಗಾರಿ ಮುಗಿಯಬಹುದೆಂಬ ನಿರೀಕ್ಷೆಯಲ್ಲಿದ್ದ ಈ ಭಾಗದ ಜನರ ನಿತ್ಯ ಪ್ರಯಾಣದ ಗೋಳಿನ ಕಥೆ ವ್ಯಥೆಯು ಮಳೆಗಾಲ ಮುಗಿದ ಅನಂತರವಾದರೂ ಆರಂಭಗೊಳ್ಳಬಹುದೆಂಬ ವಿಶ್ವಾಸ ಹೊಂದಿದ್ದ ನಿವಾಸಿಗಳಿಗೆ ವ್ಯಥೆಯೋ ಎಂಬಂತೆ ಇನ್ನೂ ಕಾಮಗಾರಿ ಆರಂಭಗೊಳ್ಳದಿರುವುದು ಘನ ಹಾಗೂ ಲಘು ವಾಹನಗಳಲ್ಲಿ ಸರ್ಕಸ್ ಮಾಡಿ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ರಾಜ್ಯ ಸರಕಾರದ ಅನುದಾನದಡಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಪ್ರಯತ್ನದ ಫಲವಾಗಿ ಕಾಂಕ್ರೀಟೀಕರಣ ರಸ್ತೆಗೆ ಟೆಂಡರ್ ಕರೆಯಲಾಗಿದ್ದು ಟೆಂಡರ್ ವಹಿಸಿಕೊಂಡಿರುವ ಗುತ್ತಿಗೆದಾರರು ಕಾಮಗಾರಿಯ ಆರಂಭದ ಹಂತದ ಕೆಲಸ ಕಾರ್ಯಕ್ಕೆ ಅಣಿಯಾಗದಿರುವುದು ವಯೋವೃದ್ಧರಿಂದ ಮೊದಲ್ಗೊಂಡು ಪಾದಚಾರಿಗಳ ವರೆಗೆ ಕಷ್ಟಪಟ್ಟು ಈ ಮಾರ್ಗವಾಗಿ ಸಾಗಬೇಕಾದ ಸಂದಿಗ್ಧ ಪರಿಸ್ಥಿತಿಗೆ ಕೊನೆ ಕಾಣದಿರುವುದರಿಂದ ಇಲ್ಲಿನ ನಿವಾಸಿಗಳು ಗುತ್ತಿಗೆದಾರರಿಗೆ ಶಾಪ ಹಾಕುತ್ತಿದ್ದಾರೆ. ಮಳೆಗಾಲದ ಈ ಸಂದರ್ಭದಲ್ಲಿ ಕಾಮಗಾರಿ ಆರಂಭಿಸುವುದು ಸೂಕ್ತವಲ್ಲವಾಗಿದ್ದರೂ ಮುಂದಿನ ತಿಂಗಳಾದರೂ ಮಳೆ ಕಡಿಮೆಯಾದ ಸಂದರ್ಭದಲ್ಲಿ ಕಾಮಗಾರಿಗೆ ಚಾಲನೆ ನೀಡಬಹುದು ಎಂಬ ನಿರೀಕ್ಷೆಯಲ್ಲಿರುವ ಗೋಪಾಡಿ ಹಾಗೂ ವಕ್ವಾಡಿ ನಿವಾಸಿಗಳ ನಿರೀಕ್ಷೆ ಹುಸಿಯಾಗದಿರಲಿ ಎಂದು ಸಾರ್ವಜನಿಕರು ಅಳಲನ್ನು ತೋಡಿಕೊಂಡಿದ್ದಾರೆ.
ಉದಯವಾಣಿಯಲ್ಲಿ 3 ಬಾರಿ ದುಃಸ್ಥಿತಿಯ ಸಚಿತ್ರ ವರದಿ
ಭಾರೀ ಹೊಂಡಗಳಿಂದ ಕೂಡಿರುವ ಈ ಮಾರ್ಗದ ದುಃಸ್ಥಿತಿಯ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ 3 ಬಾರಿ ಚಿತ್ರ ಸಮೇತ ವರದಿ ಪ್ರಕಟವಾಗಿದ್ದರೂ ಕೇವಲ ಭರವಸೆಯ ಮಾತುಗಳು ಜನಪ್ರತಿನಿಧಿಗಳಿಂದ ಕೇಳಿ ಬರುತ್ತಿವೆಯೇ ಹೊರತು ಕಾಮಗಾರಿ ಆರಂಭಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶೆ„ಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕೈಗಾರಿಕಾ ಉದ್ಯಮಗಳನ್ನು ಹೊಂದಿರುವ ಈ ಭಾಗವು ಸಾವಿರಾರು ನಿತ್ಯ ಪ್ರಯಾಣಿಕರು ಸಾಗುವ ಮುಖ್ಯ ಮಾರ್ಗವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragodu: ನೀರ್ಚಾಲಿನ ಮುರಳಿಕೃಷ್ಣ ಕೇರಳ ಹೈಕೋರ್ಟ್ ಜಡ್ಜ್
Council By Election: ಪರಿಷತ್ ಸದಸ್ಯರಾಗಿ ಕಿಶೋರ್ ಕುಮಾರ್ ಪ್ರಮಾಣ ವಚನ ಸ್ವೀಕಾರ
Udupi: ಗೀತಾರ್ಥ ಚಿಂತನೆ- 80… ಮನೆಯಿಂದಲೇ ಮೌಲ್ಯ ನಿರ್ಧಾರ
Rain Alert: ಇಂದು, ನ.1ರಂದು ಎಲ್ಲೋ ಅಲರ್ಟ್; ಕರಾವಳಿ ಭಾಗದಲ್ಲಿ ಮಳೆ ಸಾಧ್ಯತೆ
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.