ಉತ್ತರ ಹೇಳಿ ಬೈಕ್ ಗೆಲ್ಲಿ!
Team Udayavani, Aug 30, 2017, 10:32 AM IST
ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಎರಡು ಜೋಡಿಗಳಿಗೆ ದುಬೈ ತೋರಿಸುವುದಾಗಿ ಇತ್ತೀಚೆಗಷ್ಟೇ ಒಂದು ಸ್ಪರ್ಧೆ ಆಯೋಜಿಸಿದ್ದರು, “ಮಾರ್ಚ್ 22′ ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್. ಈಗ ಅಂಥದ್ದೇ ಒಂದು ಪ್ರಯತ್ನವನ್ನು ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಸಹ ಮಾಡುತ್ತಿದ್ದಾರೆ. ತಮ್ಮ ಚಿತ್ರಕ್ಕೆ ಸಂಬಂಧಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಅವರು 50 ಬೈಕ್‌ಗಳನ್ನು ಕೊಡುವುದಕ್ಕೆ ತೀರ್ಮಾನಿಸಿದ್ದಾರೆ.
ಹೌದು, ನವರಸನ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ವೈರ’ ಚಿತ್ರವು ಸೆಪ್ಟೆಂಬರ್ ಎರಡನೆಯ ವಾರದಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕೆ ಜನರನ್ನು ಸೆಳೆಯಲು ಮಂಜುನಾಥ್ ಹೊಸ ಆಫರ್ ಇಟ್ಟಿದ್ದಾರೆ. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ. ಚಿತ್ರ ನೋಡಿದವರಿಗೆಂದು ಪ್ರತಿ ಚಿತ್ರಮಂದಿರದಲ್ಲೂ ಲಕ್ಕಿ ಡಿಪ್ ಮಾಡಲಾಗುತ್ತದೆ. ಈ ಲಕ್ಕಿ ಡಿಪ್‌ನಲ್ಲಿ ವಿಜೇತರಾಗುವವರಿಗೆ, ಚಿತ್ರದ ಕುರಿತು ಏಳು ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಆ ಏಳು ಪ್ರಶ್ನೆಗಳಿಗೆ ಉತ್ತರ ಕೊಟ್ಟವರಿಗೆ ಬೈಕ್ ಬಹುಮಾನವಾಗಿ ಕೊಡಲಾಗುತ್ತದೆ. ಆ ತರಹ 50 ಬೈಕ್‌ಗಳನ್ನು ಬಹುಮಾನವಾಗಿ ಕೊಡಲಾಗುತ್ತದಂತೆ. “ನನ್ನ ಮೊದಲ ಚಿತ್ರ “ರಥಾವರ’ವನ್ನು ನೋಡಿ ಹೆಚ್ಚಾಗಿ ಪ್ರೋತ್ಸಾಹಿಸಿದ್ದು ಯುವಕರು ಮತ್ತು ಕಾಲೇಜ್ ವಿದ್ಯಾರ್ಥಿಗಳು. ಅವರ ಸಹಕಾರದಿಂದ ಚಿತ್ರ ಸುದ್ದಿಯಾಯಿತು. ಅವರಿಗೆ ಏನಾದರೂ ವಾಪಸ್ಸು ಕೊಡುವ ನಿಟ್ಟಿನಲ್ಲಿ ಈ ಸ್ಫರ್ಧೆ ಆಯೋಜಿಸಿದ್ದೇವೆ. ಈ ಸ್ಪರ್ಧೆಯಲ್ಲಿ ಒಟ್ಟು 50 ಬೈಕ್ ಕೊಡುವುದಕ್ಕೆ ತೀರ್ಮಾನಿಸಿದ್ದೇವೆ.
ಈ ಪೈಕಿ ಹೆಣ್ಮಕ್ಕಳು ಗೆದ್ದರೆ, ಅವರಿಗೆ ಸ್ಕೂಟಿ ಕೊಡಲಿದ್ದೇವೆ. ಈ ಸ್ಪರ್ಧೆ ಹಳ್ಳಿ, ಸಿಟಿ ಅಂತಿಲ್ಲ. ಎಲ್ಲರಿಗೂ ಓಪನ್ ಆಗಿರುತ್ತದೆ. ಯಾರು ಬೇಕಾದರೂ ಭಾಗವಹಿಸಬಹುದು. ಲಕ್ಕಿ ಡಿಪ್‌ನಲ್ಲಿ ವಿಜೇತರಾದವರು, ಚಿತ್ರದ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಬೈಕ್ ತೆಗೆದುಕೊಂಡು ಹೋಗಬಹುದು’ ಎನ್ನುತ್ತಾರೆ ಮಂಜುನಾಥ್. ಒಂದು ಬೈಕಿಗೆ 50 ಸಾವಿರ ಅಂತಿಟ್ಟುಕೊಂಡರೂ, 50 ಬೈಕಿಗೆ 25 ಲಕ್ಷವಾಗುತ್ತದೆ.
ಇದು ಸ್ವಲ್ಪ ಜಾಸ್ತಿಯಾಯಿತಲ್ಲವೇ ಎಂದರೆ, ಇಲ್ಲ ಎನ್ನುತ್ತಾರೆ ಮಂಜುನಾಥ್. “ಯಾವುದೇ ಸಮಸ್ಯೆ ಇಲ್ಲ. ಜನರಿಂದಲೇ ದುಡ್ಡು ಬಂದಿದೆ. ಈಗ ಅವರಿಗೇ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಅಷ್ಟೇ’ ಎನ್ನುತ್ತಾರೆ ಅವರು. “ವೈರ’ ಚಿತ್ರದಲ್ಲಿ ನವರಸನ್, ಪ್ರಿಯಾಂಕಾ ಮಲಾ°ಡ್ ಮುಂತಾದವರು ನಟಿಸಿದ್ದು, ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.