“ತಿಥಿ’ ಪೂಜಾ ಹೊಸ ಚಿತ್ರ


Team Udayavani, Aug 30, 2017, 10:32 AM IST

POOJA.jpg

ಕನ್ನಡದಲ್ಲಿ ಈಗ ಒಂದಷ್ಟು ವಿಭಿನ್ನ ಹಾಗೂ ಹೊಸ ಶೈಲಿಯ ಶೀರ್ಷಿಕೆಗಳು ಬರುತ್ತಿವೆ. ಈ ಮೂಲಕ ಆರಂಭದಲ್ಲೇ ಆ ಚಿತ್ರಗಳು ಗಮನ ಸೆಳೆಯುತ್ತಿರುವುದಂತೂ ಸುಳ್ಳಲ್ಲ. “ದಯವಿಟ್ಟು ಗಮನಿಸಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಹೊಸ ಬಗೆಯ ಟೈಟಲ್‌ ಸಾಲಿಗೆ ಈಗ ಮತ್ತೂಂದು ಸೇರ್ಪಡೆಯಾಗಿದೆ. ಅದು “ನೀವು ಕರೆ ಮಾಡಿದ ಚಂದಾದಾರರು ಬಿಜಿಯಾಗಿದ್ದಾರೆ’. ಹೌದು, ಹೀಗೊಂದು ಶೀರ್ಷಿಕೆಯ ಸಿನಿಮಾ ಈಗ ಸೆಟ್ಟೇರಲು ರೆಡಿಯಾಗಿದೆ.

ಸಾಮ್ಯುವೆಲ್‌ ಟೋನಿ ಈ ಚಿತ್ರದ ನಿರ್ದೇಶಕರು. ಯಾರು ಈ ಸಾಮ್ಯುವೆಲ್‌ ಟೋನಿ ಎಂದರೆ ನಿಮಗೆ “ದೂದ್‌ ಸಾಗರ್‌’ ಚಿತ್ರ ತೋರಿಸಬೇಕು. ಮೂರು ವರ್ಷಗಳ ಹಿಂದೆ “ದೂದ್‌ ಸಾಗರ್‌’ ಎಂಬ ಚಿತ್ರವೊಂದು ಬಂದಿರೋದು ನಿಮಗೆ ನೆನಪಿರಬಹುದು. ಆ ಚಿತ್ರವನ್ನು ನಿರ್ದೇಶಿಸಿದ್ದು, ಇದೇ ಸಾಮ್ಯುವೆಲ್‌. ಈಗ ಎರಡನೇ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಚಿತ್ರದ ಟೈಟಲ್‌ಗ‌ೂ ಕಥೆಗೂ ಏನು ಸಂಬಂಧ ಎಂದು ನೀವು ಕೇಳಬಹುದು.

ಚಿತ್ರದ ಟೈಟಲ್‌ನಲ್ಲೇ ಕಥೆ ಅಡಗಿದೆ ಎನ್ನುತ್ತಾರೆ ಸಾಮ್ಯುವೆಲ್‌. “ಸದ್ಯ ಎಲ್ಲರೂ ಬಿಜಿ ಎನ್ನುತ್ತಾರೆ. ಈ ನಡುವೆ ಸಂಬಂಧಗಳು ಕಳೆದುಹೋಗುತ್ತಿವೆ. ಆದರೆ, ಯಾಕಾಗಿ ಬಿಜಿಯಾಗಿರುತ್ತೇವೆ, ಬಿಜಿ ಬಿಜಿ ಎನ್ನುತ್ತಾ ನಾವು ಏನು ಸಾಧಿಸುತ್ತಿದ್ದೇವೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆ. ಇಂದಿನ ಟ್ರೆಂಡ್‌ಗೆ ತಕ್ಕುದಾದ ಹೊಸ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ’ ಎನ್ನುವುದು ನಿರ್ದೇಶಕ ಸಾಮ್ಯುವೆಲ್‌ ಮಾತು.  

ಈ ಚಿತ್ರದಲ್ಲಿ ಪೂಜಾ ನಾಯಕಿಯಾಗಿ ನಟಿಸುತ್ತಿದ್ದಾರೆ. “ತಿಥಿ’ ಚಿತ್ರದಲ್ಲಿ ಕಾವೇರಿ ಪಾತ್ರದ ಮೂಲಕ ಗಮನ ಸೆಳೆದ ಪೂಜಾ ಈಗ ಈ ಚಿತ್ರದ ನಾಯಕಿ. ಚಿತ್ರದಲ್ಲಿ ಅವರ ಪಾತ್ರ ಪ್ರಮುಖವಾಗಿದೆಯಂತೆ. “ಚಿತ್ರದಲ್ಲಿ ನಾಯಕಿಯ ಪಾತ್ರ ಕೂಡಾ ಪ್ರಮುಖವಾಗಿದ್ದು, ಪರ್‌ಫಾರ್ಮೆನ್ಸ್‌ಗೆ ಹೆಚ್ಚಿನ ಅವಕಾಶವಿದೆ. ಆ ಪಾತ್ರದಲ್ಲಿ ಪೂಜಾ ನಟಿಸುತ್ತಿದ್ದು, ಅವರು ಕಥೆ ಕೇಳಿ ತುಂಬಾ ಇಷ್ಟಪಟ್ಟರು’ ಎನ್ನುತ್ತಾರೆ ಸಾಮ್ಯುವೆಲ್‌.

ಚಿತ್ರದ ನಾಯಕ ಸೇರಿದಂತೆ ಇತರ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕಾಗಿ ನಾನಾ ಪಾಟೇಕರ್‌ ಅವರನ್ನು ಕರೆತರುವ ಪ್ರಯತ್ನ ಕೂಡಾ ನಡೆಯುತ್ತಿದೆಯಂತೆ. ಚಿತ್ರ ಪ್ಲಸ್‌ ಸರ್ವೇಸ್‌ ಮೂವೀಸ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದೆ. ಸದ್ಯದಲ್ಲೇ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡುವ ಉದ್ದೇಶ ಕೂಡಾ ಚಿತ್ರತಂಡಕ್ಕಿದೆ. 

ಟಾಪ್ ನ್ಯೂಸ್

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ

Jaishankar

Trump ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತ ಪ್ರತಿನಿಧಿಸಲಿರುವ ಜೈಶಂಕರ್

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

18-uv-fusion

Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು

1-deee

BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prajwal devaraj starrer raksasa movie releasing in telugu

Prajwal Devaraj: ತೆಲುಗಿನಲ್ಲೂ ರಿಲೀಸ್‌ ಆಗುತ್ತಿದೆ ʼರಾಕ್ಷಸʼ

ashoka

The Rise Of Ashoka: ಅಶೋಕನ ರಕ್ತಚರಿತೆ

Actor Darshan: ನಟ ದರ್ಶನ್‌ ಮೈಸೂರಿಗೆ ಇಂದು ಆಗಮನ

Actor Darshan: ಇಂದು ನಟ ದರ್ಶನ್‌ ಮೈಸೂರಿಗೆ ಆಗಮನ

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

allu arjun

Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

16

UV Fusion: ನಂಬಿಕೆಯೊಂದಿಗೆ ವರ್ಷದ ಆಗಮನ

Kottigehara: ಸಂಸ್ಕಾರದಿಂದ ಉತ್ತಮ ಶಿಕ್ಷಣ : ಶ್ರೀ ಗುಣನಾಥ ಸ್ವಾಮೀಜಿ ಹೇಳಿಕೆ

Kottigehara: ಸಂಸ್ಕಾರದಿಂದ ಉತ್ತಮ ಶಿಕ್ಷಣ : ಶ್ರೀ ಗುಣನಾಥ ಸ್ವಾಮೀಜಿ ಹೇಳಿಕೆ

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

14

UV Fusion: ಗೆದ್ದ ಗೆಲುವನ್ನು ಗಟ್ಟಿತನದಲ್ಲಿ ನಿಭಾಯಿಸುವುದು ಒಂದು ಕಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.