ಅಕ್ಟೋಬರ್ 10ಕ್ಕೆ ನಿಖಿಲ್ ಹೊಸ ಚಿತ್ರ 4 ಭಾಷೆಗಳಲ್ಲಿ ನಿರ್ಮಾಣ!
Team Udayavani, Aug 30, 2017, 10:32 AM IST
ಅಂತೂ ನಿಖಿಲ್ ಅಭಿನಯದ ಹೊಸ ಚಿತ್ರಕ್ಕೆ ವೇದಿಕೆ ಸಿದ್ಧವಾಗಿದೆ. ನಿಖಿಲ್ ಅಭಿನಯದ ಚಿತ್ರಕ್ಕೆ ಕಥೆ ಬರೆಯುವುದಕ್ಕೆ ಮಹೇಶ್ ರಾವ್, ಗೋಪಿಮೋಹನ್ ಮತ್ತು ಮೆಹರ್ ರಮೇಶ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಪೈಕಿ ಮಹೇಶ್ ರಾವ್ ಅವರ ಕಥೆಯೇ ಓಕೆಯಾಗಿದ್ದು, ಈಗಾಗಲೇ ಕಥೆ-ಚಿತ್ರಕಥೆ ಬರೆಯುವ ಕೆಲಸ ಸದ್ದಿಲ್ಲದೆ ಮುಗಿದಿದೆ.
ಇನ್ನು ಚಿತ್ರವು ಅಕ್ಟೋಬರ್ 10ರಂದು ಪ್ರಾರಂಭವಾಗಲಿದೆ ಎಂಬ ಮಾಹಿತಿ ಬಂದಿದೆ. ಹೌದು, ನಿಖಿಲ್ ಅಭಿನಯದ ಮೂರನೆ ಹಾಗೂ ಚೆನ್ನಾಂಬಿಕ ಫಿಲಂಸ್ ಲಾಂಛನದ ಏಳನೆಯ ಚಿತ್ರವು ಅಕ್ಟೋಬರ್ 10ರಂದು ಪ್ರಾರಂಭವಾಗಲಿದೆ. ಈ ಚಿತ್ರಕ್ಕೆ ಮಹೇಶ್ ರಾವ್ ಕಥೆ ಮತ್ತು ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕಕೊಂಡಿದ್ದಾರೆ.
ಇನ್ನು ಗುರುರಾಜ್ ದೇಸಾಯಿ ಅವರು ಚಿತ್ರಕ್ಕೆ ಸಂಭಾಷಣೆ ಬರೆಯುವುದರ ಜೊತೆಗೆ ಸಹನಿರ್ದೇಶನವನ್ನೂ ಮಾಡಲಿದ್ದಾರಂತೆ. ಚಿತ್ರಕ್ಕೆ ಗಾಜುಲ ಶಿವ ಅವರು ಛಾಯಾಗ್ರಹಣ ಮಾಡಿದರೆ, ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್ ಅಳವಡಿಕೆ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.