ವೈದ್ಯರ ಕಿತ್ತಾಟಕ್ಕೆ ತಾಯಿ ಗರ್ಭದಲ್ಲೇ ಕೊನೆಯುಸಿರೆಳೆದ ಕಂದಮ್ಮ!
Team Udayavani, Aug 30, 2017, 11:43 AM IST
ಜೈಪುರ್: ಗರ್ಭಿಣಿ ಮಹಿಳೆಯೊಬ್ಬರನ್ನು ಆಪರೇಶನ್ ಥಿಯೇಟರ್ ನಲ್ಲಿ ಮಲಗಿಸಿ ತುರ್ತು ಸರ್ಜರಿ ಮಾಡುತ್ತಿದ್ದ ವೇಳೆ ಇಬ್ಬರು ವೈದ್ಯರು ಧಮ್ಕಿ ಹಾಕಿಕೊಳ್ಳುತ್ತಾ ಜಗಳಕ್ಕಿಳಿದ ಘಟನೆ ರಾಜಸ್ಥಾನದ ಜೋಧ್ ಪುರ್ ಸರ್ಕಾರಿ ಸ್ವಾಮಿತ್ವದ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ಕಿತ್ತಾಟದ ವಿಡಿಯೋ ವೈರಲ್ ಆಗಿದ್ದರೆ, ಮತ್ತೊಂದೆಡೆ ಕರ್ತವ್ಯ ಮರೆತು ಜಗಳದಲ್ಲಿ ತೊಡಗಿದ್ದ ವೈದ್ಯರ ಬೇಜವಾಬ್ದಾರಿತನದಿಂದಾಗಿ ತಾಯಿಯ ಗರ್ಭದಲ್ಲೇ ಮಗು ಕೊನೆಯುಸಿರೆಳೆದಿದೆ.
ಜೋಧ್ ಪುರ್ ಉಮೈದ್ ಸರ್ಕಾರಿ ಸ್ವಾಮಿತ್ವದ ಆಸ್ಪತ್ರೆಯಲ್ಲಿ ಗರ್ಭಿಣಿಯನ್ನು ಆಪರೇಶನ್ ಥಿಯೇಟರ್ ನ ಬೆಡ್ ಮೇಲೆ ಇಟ್ಟುಕೊಂಡು ಇಬ್ಬರು ವೈದ್ಯರು ಒಬ್ಬರನ್ನೊಬ್ಬರು ದೂಷಿಸಿಕೊಂಡು ಜಗಳವಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗರ್ಭಿಣಿಗೆ ಆಪರೇಶನ್ ಮಾಡೋದನ್ನು ಬಿಟ್ಟು ಇಬ್ಬರು ವೈದ್ಯರು ಸುಮಾರು 30 ನಿಮಿಷಗಳ ಕಾಲ ವಾಗ್ವಾದದಲ್ಲೇ ತೊಡಗಿದ್ದರು. ಇದರ ಪರಿಣಾಮ ತಾಯಿ ಗರ್ಭದಿಂದ ಹೊರಬಂದು ಕಣ್ಣು ಬಿಡುವ ಮೊದಲೇ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.
ನವಜಾತ ಶಿಶು ಹುಟ್ಟುವ ಮೊದಲೇ ಸಾವನ್ನಪ್ಪಿರುವ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉಮೈದ್ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಮೈದ್ ಆಸ್ಪತ್ರೆಯ ಡಾ.ಅಶೋಕ್ ನಾನಿವಾಲ್ ಹಾಗೂ ಡಾ.ಎಂಎಲ್ ಟಕ್ ಅವರು ಗರ್ಭಿಣಿಯ ಸರ್ಜರಿ ಮಾಡುತ್ತಿದ್ದರು. ಗರ್ಭಿಣಿ ಪ್ರಜ್ಞಾವಸ್ಥೆಯಲ್ಲಿ ಇಲ್ಲದಿರುವ ವೇಳೆ ಇಬ್ಬರು ವೈದ್ಯರು ಜಗಳದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.
#WATCH Rajasthan: Verbal spat between two doctors in OT during the surgery of a pregnant woman in Jodhpur's Umaid Hospital (29.8.17) pic.twitter.com/eZfHHISQGB
— ANI (@ANI) August 30, 2017
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.