ಚೇಸಿಂಗ್ ವೇಳೆ ಅವಘಡ; ನಟ ಕೋಮಲ್, ಯೋಗಿ ಅಪಾಯದಿಂದ ಪಾರು
Team Udayavani, Aug 30, 2017, 2:23 PM IST
ಚೆನ್ನೈ: ಕೆಂಪೇಗೌಡ 2 ಸಿನಿಮಾದ ಚಿತ್ರೀಕರಣದ ವೇಳೆ ನಾಯಕ ನಟನಾಗಿ ಅಭಿನಯಿಸುತ್ತಿದ್ದ ಕೋಮಲ್ ಹಾಗೂ ಸಹನಟ ಯೋಗಿ ಚೇಸಿಂಗ್ ದೃಶ್ಯದ ವೇಳೆ ಅವಘಡ ಸಂಭವಿಸಿದ ಘಟನೆ ಬುಧವಾರ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದಿದೆ ಎಂದು ಖಾಸಗಿ ಟಿವಿ ಚಾನೆಲ್ ವರದಿ ಮಾಡಿದೆ.
ಮಹಾಬಲಿಪುರಂನ ಮರಳುಗಾಡು ಪ್ರದೇಶದಲ್ಲಿ ಬಳಿ ಕೆಂಪೇಗೌಡ 2 ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆಲ್ಟೇರಿಯನ್ ವೆಹಿಕಲ್ ನಲ್ಲಿ ನಟ ಕೋಮಲ್ ಹಾಗೂ ಯೋಗಿ ಅವರು ಚೇಸಿಂಗ್ ದೃಶ್ಯದ ವೇಳೆ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದ ಘಟನೆ ನಡೆದಿದೆ. ಇಬ್ಬರನ್ನೂ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಘಟನೆಯಲ್ಲಿ ಕೋಮಲ್ ಹಾಗೂ ಯೋಗಿಗೆ ಯಾವುದೇ ಗಂಭೀರ ಗಾಯವಾಗಿಲ್ಲ, ಇಬ್ಬರು ನಟರು ಆರೋಗ್ಯವಾಗಿದ್ದಾರೆ. ಗಾಬರಿಪಡಬೇಕಿಲ್ಲ ಎಂದು ಕೆಂಪೇಗೌಡ 2 ಚಿತ್ರ ತಂಡ ಪ್ರತಿಕ್ರಿಯೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.