ವಸಾಯಿರೋಡ್‌: ಬಾಲಾಜಿ ಸೇವಾ ಸಮಿತಿ;ಶಾಲೆಯ ದತ್ತು ಸ್ವೀಕಾರ


Team Udayavani, Aug 30, 2017, 4:58 PM IST

65.jpg

ಮುಂಬಯಿ: ವಸಾಯಿರೋಡ್‌ ಜಿ.ಎಸ್‌.ಬಿ ಯವರ ಬಾಲಾಜಿ ಸೇವಾ ಸಮಿತಿಯವರಿಂದ  ಈ  ವರ್ಷದ ಸ್ವಾತಂತ್ರ ದಿನಾಚರಣೆಯ ಶುಭ ದಿನದಂದು ವಸಾಯಿ ಶಹರದ ದಿವಾನ್‌ ಮಾನ್‌ನಲ್ಲಿರುವ ಜಿಲ್ಲಾ ಪರಿಷತ್‌ ಶಾಲೆಯನ್ನು ದತ್ತು ಸ್ವೀಕರಿಸಲಾಯಿತು.
  

 ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೆರಿಸುತ್ತಾ ಬಂದಿರುವ ಈ ವಸಾಯಿ ಜಿ.ಸ್‌.ಬಿ ಯವರ ಬಾಲಾಜಿ ಸೇವಾ ಸಮಿತಿಯು ಸಮಾಜ ಪರ ಕಾರ್ಯಗಳಲ್ಲಿ  ಕೂಡ ಜವಾಬ್ದಾರಿಯನ್ನು ಹೊಂದುತ್ತಾ, ಈಗ ಸುಮಾರು 80 ಆದಿವಾಸಿ ವಿದ್ಯಾರ್ಥಿ ಗಳು ವಿದ್ಯಾರ್ಜನೆ ಮಾಡುತ್ತಿರುವ ಈ ಶಾಲೆಯನ್ನು ದತ್ತು ಸ್ವೀಕರಿಸಿ, ತಮ್ಮ ಸೇವೆಯ ಮೊದಲ ಹಂತದಲ್ಲಿ  ಶಾಲೆಯ ವಿದ್ಯಾರ್ಥಿಗಳಿಗೆ ಒಂದು ಜೋಡಿ ಸಮವಸ್ತ್ರ ಹಾಗೂ ಶಾಲೆಗೆ ಅಗತ್ಯವಿರುವ ವಸ್ತುಗಳು – ಅಂದರೆ 2ಕಪಾಟು , 7 ಗೋಡೆ ಗಡಿಯಾರಗಳು, ಒಂದು ಐ ಪ್ಯಾಡ್‌ ಹಾಗೂ ಎಲ್ಲ  ವಿದ್ಯಾರ್ಥಿಗಳಿಗೆ ಬಿಸ್ಕತ್ತು , ಸೇಬು, ತಂಪು ಪಾನಿಯ ಮತ್ತು ಸಮೋಸಾದೊಂದಿಗೆ ಖಾದ್ಯ ಪೊಟ್ಟಣಗಳನ್ನು ನೀಡಿ ಸಹಕರಿಸಿದರು. ಕಾರ್ಯಕ್ರಮದ ಅಂಗವಾಗಿ ಸಮಿತಿಯ  ಅಧ್ಯಕ್ಷರಾದ ಶ್ರೀ ತಾರಾನಾಥ ಪೈಯವರು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿದರು. ಅನಂತರ ವಿದ್ಯಾರ್ಥಿಗಳು ನೆರೆದ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಸ್ವತ್ಛ ಭಾರತ ನಿರ್ಮಾಣದ ಬಗ್ಗೆ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಧ್ವಜ ವಂದನೆಯ ಅನಂತರ ಸಮಿತಿಯ ವತಿಯಿಂದ 2 ಕಪಾಟನ್ನು ಸಮಿತಿಯ ಉಪಾಧ್ಯಕ್ಷರಾದ ಮೂಲ್ಕಿ ಕೃಷ್ಣ ಕಾಮತ್‌ ಅವರ  ಹಸ್ತದಿಂದ ಶಾಲೆಯ ಮುಖೊಪಾಧ್ಯಾಯಿನಿಯವರಿಗೆ ಹಸ್ತಾಂತರಿಸಲಾಯಿತು .

 ಅನಂತರ ನಡೆದ ಸಭಾಕಾರ್ಯಕ್ರಮದಲ್ಲಿ  ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ನಗರ ಸೇವಕರಾದ ಶ್ರೀಕಲ್ಫೆàಶ್‌‌ ನಾರಾಯಣ ಮಾಂಣRರ್‌ ವಹಿಸಿದರು. ವೇದಿಕೆಯಲ್ಲಿ ಬಾಲಾಜಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಪೈ ಅವರು ಮುಖ್ಯ ಅತಿಥಿಗಳಾದ ಹಾಗೂ ಸಮಿತಿಯ ಸಂಚಾಲಕ ಶ್ರೀ ದೇವೇಂದ್ರ ಭಕ್ತ ಹಾಗೂ ಶಿಕ್ಷಣ ವಿಭಾಗದ ಮಾಣಿಕು³ರ  ಕೇಂದ್ರದ ಪ್ರಮುಖರಾದ  ಶ್ರೀಮತಿ  ಸುನಂದಾ ನರೇಂದ್ರ ಚೌಧರಿ ಹಾಗೂ ಮಾಜಿ ನಗರ ಸೇವಕಿ ಶ್ರೀಮತಿ ಗೀತಾ ಕಾಂತಿ ಮಾಂಣRರ್‌ ಉಪಸ್ಥಿತರಿದ್ದರು . ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯವರಿಂದ ಸ್ವಾಗತ ಭಾಷಣ ಹಾಗೂ ಇತರ ವಿವಿಧ ಚಟುವಟಿಕೆಗಳ ಪ್ರದರ್ಶನ ಮತ್ತು ಧನ್ಯವಾದ ಅರ್ಪಣೆ ನಡೆಯಿತು. 

ಕೇಂದ್ರದ ಪ್ರಮುಖರಾದ ಶ್ರೀಮತಿ ಸುನಂದಾ ಚೌಧರಿಯವರು ತಮ್ಮ ಭಾಷಣದಲ್ಲಿ  ಈ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ವೃಂದದವರಿಂದ ಅತ್ಯುತ್ತಮ ಮಟ್ಟದ ಶಿಕ್ಷಣವನ್ನು ಆದಿವಾಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು  ಮಾಣಿಕು³ರ ಕೇಂದ್ರದಲ್ಲಿ ಈ ಶಾಲೆಯು ಅಗ್ರಸ್ಥಾನವನ್ನು ಪಡೆದಿದೆ ಎಂದು ತಿಳಿಸಿದರು .

ಈಗ ಬಾಲಾಜಿ ಸೇವಾ ಸಮಿತಿಯವರು ದತ್ತು ಸ್ವೀಕಾರ ಮಾಡಿರುವುದರಿಂದ ಸಮಿತಿಯ ಸಹಕಾರದಿಂದ ಈ ಶಾಲೆಯು ಇನ್ನೂ ಹೆಚ್ಚಿನ ಪ್ರಗತಿಯನ್ನು ಪಡೆಯುವಂತೆ ಆಶಿಸಿದರು. ಅಲ್ಲದೆ ಸಮಿತಿಯವರಿಗೆ ಧನ್ಯವಾದ ನೀಡಿದರು. ಬಾಲಾಜಿ ಸಮಿತಿಯ ಅಧ್ಯಕ್ಷ ಶ್ರೀ ತಾರಾನಾಥ ಪೈಯವರು ಮುಖ್ಯಅಥಿತಿಯಾಗಿ  ಮಾತನಾಡಿ ಶಾಲೆಯ ವಿದ್ಯಾರ್ಥಿಗಳ ಚಟುವಟಿಕೆ ಹಾಗೂ ಶಿಕ್ಷಣದ ಬಗ್ಗೆ ಆಸಕ್ತಿ ಇರುವುದನ್ನು ಶ್ಲಾಘಿಸಿ, ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಂದೆ ಉತ್ತಮ ಪ್ರಜೆಗಳಾಗುವಂತೆ ಆಶೀರ್ವದಿಸಿದರು. 

ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ  ಶ್ರೀಮತಿ ವರ್ಷಾಕೃಷ್ಣ ಸಾಳುಂಕೆ ಆವರು ಮಾತನಾಡಿ ಶಾಲೆಯಲ್ಲಿ ಶಿಕ್ಷಣ ಕೊಡುವ  ರೀತಿಯ ಬಗ್ಗೆ ಹಾಗೂ ವಿದ್ಯಾರ್ಥಿಗಳು ಆದಿವಾಸಿಗಳಾದರೂ ಉತ್ತಮ ರೀತಿಯ ಶಿಕ್ಷಣ ಅಲ್ಲದೆ ಇತರ ಪಾಠೇತರ  ಚಟುವಟಿಕೆಯಲ್ಲಿ ಆಸಕ್ತಿ ನೀಡಿ ಭಾಗವಹಿಸುವ ಬಗ್ಗೆ ಮಾಹಿತಿ ನೀಡಿದರು ಹಾಗೂ ವಸಾಯಿ ಜಿ.ಎಸ್‌.ಬಿ. ಸಮಾಜದ ಬಾಲಾಜಿ ಸೇವಾ ಸಮಿತಿಯವರಿಗೆ ಈ ಶಾಲೆಯನ್ನು  ದತ್ತುಸ್ವೀಕಾರ ಮಾಡಿದ ಬಗ್ಗೆ ಸಂತೋಷವನ್ನು ವ್ಯಕ್ತ ಪಡಿಸಿ ಧನ್ಯವಾದ ನೀಡುತ್ತಾ, ಸಮಿತಿಯ ಸಹಕಾರದಿಂದ ಮುಂಬರುವ ದಿನಗಳಲ್ಲಿ ಶಾಲೆಯು ಇನ್ನೂ ಹೆಚ್ಚಿನ ಪ್ರಗತಿಯನ್ನು  ಹೊಂದುವುದರ ಬಗ್ಗೆ ಆಶಿಸಿದರು. ಸಮಿತಿಯ  ಸಂಚಾಲಕರಾದ ಶ್ರೀ ದೇವೇಂದ್ರ ಭಕ್ತರು ಮಾತನಾಡಿ ಸಮಿತಿಯು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಮ್ಮ ಸಮಾಜ ಪರ ಕಾರ್ಯಕ್ರಮಗಳಲ್ಲಿ ಒಂದಾದ  ಶಾಲೆಯ ದತ್ತು ಸ್ವೀಕಾರ ಮಾಡುವ ಬಗ್ಗೆ ಮತ್ತು ಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಗತ್ಯವಾದ ವಸ್ತುಗಳು 

ಮತ್ತು ಸೌಕರ್ಯವನ್ನು ಸಮಿತಿಗೆ ಸಾಧ್ಯವಾದ ಪ್ರಮಾಣದಲ್ಲಿ ನೀಡುವುದಾಗಿ ಆಶ್ವಾಸನೆ ನೀಡಿದರು. ಅಲ್ಲದೆ ಶಾಲೆಯ ಇನ್ನೂ ಹೆಚ್ಚಿನ ಪ್ರಗತಿ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗುವಂತೆ ಆಶೀರ್ವದಿಸಿದರು.

ಅನಂತರ ಎಲ್ಲ ವಿದ್ಯಾರ್ಥಿ  ವಿದ್ಯಾರ್ಥಿನಿಯರಿಗೆ ಸಮಿತಿಯ ವತಿಯಿಂದ‌ ಖಾದ್ಯ ಪೊಟ್ಟಣಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ವರ್ಗ ಬಾಲ ವಿಕಾಸ ಮಂಡಳಿಯ ಸದಸ್ಯರು , ದಿವಾನ್ಯನ್‌ ಪರಿಸರದ‌ ಇತರ ನಾಗರಿಕರು ಹಾಗೂ ವಸಾಯಿ ಜಿಎಸ್‌ಬಿ ಬಾಲಾಜಿ  ಸೇವಾ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಶೆಣೈ ಹಾಗೂ ಇತರ ಪದಾಧಿಕಾರಿಗಳಾದ ಮನೋಹರ ಶೆಣೈ, ವಿಜೆಯೇಂದ್ರ ಪ್ರಭು, ವಿವೇಕಾನಂದ ಭಕ್ತ,  ಲಕ್ಷ್ಮಣ ರಾವ್‌,  ಶಿರೀಷ್‌ ಆಚಾರ್ಯ, ಶ್ರೀನಿವಾಸ ಪಡಿಯಾರ್‌, ರಾಮಚಂದ್ರ ಹೆಗ್ಡೆ,  ಅರವಿಂದ ಹೊನ್ನಾವರ, ಯಶವಂತ ಕಾಮತ್‌, ಹಾಗೂ ಮಹಿಳಾ ವಿಭಾಗದ ಶ್ರೀಮತಿ ಸುಧಾ ಭುಜೆÉ ಮತ್ತು ಯುವ ವಿಭಾಗದ ಸಚಿನ್‌ ಪಡಿಯಾರ್‌ ಮತ್ತು ಕು.ಅಪೇಕ್ಷಾ ಭಕ್ತ ಹಾಗೂ ಇತರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಗೆ  ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ  ಮುಕ್ತಾಯಗೊಂಡಿತು.
 

ಟಾಪ್ ನ್ಯೂಸ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.