ಹೊಸದುರ್ಗ ಕೋಟೆ ಸಂರಕ್ಷಣೆಗೆ 36.5 ಲಕ್ಷ ರೂ. ಮಂಜೂರು


Team Udayavani, Aug 31, 2017, 7:30 AM IST

30ksde19.jpg

ಕಾಸರಗೋಡು: ನಾಶದ ಅಂಚಿಗೆ ಸಾಗುತ್ತಿದ್ದ ಐತಿಹಾಸಿಕ ಮಹತ್ವವುಳ್ಳ ಹೊಸದುರ್ಗ ಕೋಟೆಯನ್ನು ಸಂರಕ್ಷಿಸಲು ಕೇರಳ ರಾಜ್ಯ ಪ್ರಾಚ್ಯವಸ್ತು ಇಲಾಖೆ ಅನುದಾನ ಮಂಜೂರು ಮಾಡಿದೆ. ಕೋಟೆಯ ಸಮಗ್ರ ಸಂರಕ್ಷಣೆಯ ನಿರ್ವಹಣೆಗಾಗಿ ಪ್ರಥಮ ಹಂತದಲ್ಲಿ 36.5 ಲಕ್ಷ ರೂ. ಮಂಜೂರು ಮಾಡಿದ್ದು ಆಡಳಿತಾನುಮತಿಯೂ ಲಭಿಸಿದೆ. ಕೋಟೆ ಸಮಗ್ರ ಸಂರಕ್ಷಣೆ ಗಾಗಿ ಟೆಂಡರ್‌ ಪ್ರಕ್ರಿಯೆಯೂ ಆರಂಭಗೊಂಡಿದೆ.ಆ. 6ರಂದು “ಉದಯವಾಣಿ’ ಈ ಕೋಟೆಯ ಸಮಗ್ರ ಮಾಹಿತಿಯನ್ನು ಚಿತ್ರ ಸಹಿತ ವರದಿ ಮಾಡಿತ್ತು.

ಪುರಾವಸ್ತು ಇಲಾಖೆಯ ನಿರ್ಲಕ್ಷ್ಯ
ಕನ್ನಡಿಗರ ಶೌರ್ಯದ ಪ್ರತೀಕ ಹೊಸದುರ್ಗ ಕೋಟೆ ನಾಶದತ್ತ’ ಎಂಬ ಶೀರ್ಷಿಕೆಯಲ್ಲಿ ಹೊಸದುರ್ಗ ಕೋಟೆಯ ದುರವಸ್ಥೆಯನ್ನು ಪ್ರಕಟಿಸಿತ್ತು. ಇದರ ಫಲಶ್ರುತಿಯಾಗಿ ಪ್ರಾಚ್ಯವಸ್ತು ಇಲಾಖೆ ಕೋಟೆಯ ಸಂರಕ್ಷಣೆಗಾಗಿ 36.5 ಲಕ್ಷ ರೂ. ಮಂಜೂರು ಮಾಡಿದೆ.

ಹೊಸದುರ್ಗ ಕೋಟೆಯ ಹಲವು ಭಾಗಗಳು ಕುಸಿದು ಬಿದ್ದು ನಾಶದ ಅಂಚಿಗೆ ಸರಿದದ್ದಲ್ಲದೆ, ಕೋಟೆಯೊಳಗೆ ತ್ಯಾಜ್ಯ ರಾಶಿ ಎಸೆಯಲಾಗುತ್ತಿತ್ತು. ಇದ ರಿಂದಾಗಿ ಪರಿಸರದಲ್ಲಿ ದುರ್ಗಂಧ ಬೀರುತ್ತಿತ್ತು. ಜೊತೆಗೆ ಒಂದು ಇತಿಹಾಸವೇ ಮರೆ ಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ಕಾಂಞಂಗಾಡ್‌ ನಗರಸಭಾ ಕೌನ್ಸಿಲರ್‌ ಎಚ್‌. ರಂಶೀದ್‌ ಕೇರಳದ ಸ್ಪೀಕರ್‌ ಪಿ. ಶ್ರೀರಾಮಕೃಷ್ಣನ್‌ ಅವರಿಗೆ ಕೋಟೆಯ ದುಃಸ್ಥಿತಿ ಮತ್ತು ಸಂರಕ್ಷಣೆಗಾಗಿ ಮನವಿ ಮಾಡಿದ್ದರು. ಈ ಮನವಿಯನ್ನು ಸಂಸ್ಕೃತಿ ಸಚಿವ ರಾಮಚಂದ್ರನ್‌ ಕಡನ್ನಪಳ್ಳಿ ಕಚೇರಿಗೆ ಕಳುಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋಟೆಯ ನವೀಕರಣದ ಜತೆಗೆ ಸಂರಕ್ಷಣೆಗಾಗಿ ಪ್ರಥಮ ಹಂತದಲ್ಲಿ ಈ ಮೊತ್ತವನ್ನು ಮಂಜೂರು ಮಾಡಿದೆ. ಕೋಟೆಯ ಶೋಚನೀಯಾವಸ್ಥೆಯ ವರದಿಯ ಹಿನ್ನೆಲೆಯಲ್ಲಿ ಪ್ರಾಚ್ಯವಸ್ತು ಇಲಾಖೆಯ ಕಲ್ಲಿಕೋಟೆ ವಲಯ ಕಚೇರಿಯ ರಿಸರ್ಚ್‌ ಅಸಿಸ್ಟೆಂಟ್‌ ಕೆ.ಪಿ. ಸಾಧು ಅವರು ಕೋಟೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಕೋಟೆಯ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟದ್ದಲ್ಲದೆ ಕೆಲವೆಡೆ ಕುಸಿದು ಬಿದ್ದಿತ್ತು. ಅಲ್ಲದೆ ಕೋಟೆಯೊಳಗೆ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ರಾಜ್ಯ ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕ ಡಾ| ಜಿ. ಪ್ರೇಂ ಕುಮಾರ್‌ ಅವರಿಗೆ ವರದಿ ಮಾಡಿದ್ದರು.

ಮಾಲಿನ್ಯ ತೆರವು; ಕೋಟೆಗೆ ಹಾನಿ  
ಕೋಟೆ ಮತ್ತು ಪರಿಸರದಲ್ಲಿ ತ್ಯಾಜ್ಯ ರಾಶಿ ಬಿದ್ದಿರುವುದರಿಂದ ಕಾಂಞಂಗಾಡ್‌ ನಗರಸಭೆಯ ಸದಸ್ಯರೋರ್ವರ ನೇತೃತ್ವದಲ್ಲಿ ಶುಚೀಕರಣಕ್ಕೆ ಶ್ರಮಿಸ ಲಾಯಿತು. ಆದರೆ ಈ ಸಂದರ್ಭದಲ್ಲಿ ಕೋಟೆಯ ಭಾಗದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸಲು ಮಣ್ಣು ಸರಿಸಿದ್ದರಿಂದ ಕೋಟೆಯ ಭಾಗ ಗಳಿಗೆ ಹಾನಿಯಾಗಿರುವುದಾಗಿ ವ್ಯಾಪಕ ಆರೋಪಗಳು ಕೇಳಿ ಬಂದಿವೆ. ಶುಚೀ ಕರಣದ ಹಿನ್ನೆಲೆಯಲ್ಲಿ ಕಾಡು ಕಡಿದು ತೆರವುಗೊಳಿಸಲಾಗಿದೆ. ಈ ಪ್ರದೇಶದಲ್ಲಿ ತ್ಯಾಜ್ಯ ರಾಶಿ ಬಿದ್ದಿರುವುದರಿಂದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದೆಂಬ ಹಿನ್ನೆಲೆಯಲ್ಲಿ ಶುಚೀಕರಣ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ನಗರಸಭಾ ಸದಸ್ಯರೋರ್ವರು ಹೇಳಿದ್ದಾರೆ. ಕೋಟೆಯ ಗೋಡೆಗಳಲ್ಲಿ ಬೆಳೆದು ನಿಂತ ಮರಗಳನ್ನು ಕಡಿದು ತೆಗೆಯುವ ಬದಲಾಗಿ ಮಣ್ಣು ತೆಗೆದುದರಿಂದ ಕೋಟೆ ಭದ್ರತೆಗೆ ಅಪಾಯವೊದಗಿದೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ತ್ಯಾಜ್ಯ ತೆರವುಗೊಳಿಸುವ ಸಂದರ್ಭದಲ್ಲಿ ಕೋಟೆಗೆ ಯಾವುದೇ ಹಾನಿಯಾಗಿಲ್ಲ ಎಂದು ನಗರಸಭಾ ಸದಸ್ಯರು ಹೇಳಿದ್ದಾರೆ. ಕೋಟೆಯೊಳಗೆ ಕಾಡು ಬೆಳೆದುದರಿಂದ ಬೇರುಗಳು ಗೋಡೆಗಳ ಮಧ್ಯೆ ನುಸುಳಿ ಗೋಡೆ ಕುಸಿಯಲಾರಂಭಿಸಿದೆ.

2010ರಲ್ಲಿ ಹೊಸದುರ್ಗ ಕೋಟೆ ಯನ್ನು ಪ್ರಾಚ್ಯವಸ್ತು ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು. 2011ರಲ್ಲಿ ನವೀಕರಣಕ್ಕಾಗಿ ಸರಕಾರ 23 ಲಕ್ಷ ರೂ. ಮಂಜೂರು ಮಾಡಿತ್ತು. ಈ ಮೊತ್ತದಲ್ಲಿ ದುರಸ್ತಿ ಕಾರ್ಯ ನಡೆಸಲಾಗಿದ್ದರೂ ಕೋಟೆಯ ಸಂರಕ್ಷಣೆಗೆ ಶಾಶ್ವತ ಕ್ರಮ ತೆಗೆದುಕೊಂಡಿರಲಿಲ್ಲ.ಕಳೆದ ವರ್ಷ ಮಳೆಗಾಲದಲ್ಲಿ ನಿತ್ಯಾ ನಂದ ಆಶ್ರಮದಿಂದ ಕಾಂಞಂಗಾಡ್‌ನ‌ ಲಕ್ಷಿ$¾àವೆಂಕಟೇಶ ದೇವಸ್ಥಾನಕ್ಕೆ ಸಾಗುವ ರಸ್ತೆಗೆ ಕೋಟೆಯ ಗೋಡೆಗಳು ಕುಸಿದು ಬಿದ್ದಿದ್ದವು.                

ಸಮಾಜದ್ರೋಹಿಗಳ ಕೇಂದ್ರವಾಗಿ 
ಮಾರ್ಪಾಡು 

ಹೊಸದುರ್ಗ ಕೋಟೆ ಸಮಾಜ ದ್ರೋಹಿಗಳ ಕೇಂದ್ರವಾಗಿಯೂ ಕಾಡು ಬೆಳೆದು ಕೋಟೆಯ ಪ್ರಾಮುಖ್ಯ ಕಳೆದುಕೊಳ್ಳುತ್ತಿದೆ. ಕೋಟೆ ಸಮಾಜ ದ್ರೋಹಿಗಳ  ಕೇಂದ್ರವಾಗಿ ಬದಲಾಗಿದ್ದರೂ ಸಂಬಂಧಪಟ್ಟವರು ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ ಹೊಸದುರ್ಗ ಕೋಟೆಯನ್ನು ರಕ್ಷಿಸಬೇಕೆಂದು ವರ್ಷಗಳ ಹಿಂದೆ ಶಾಲಾ ವಿದ್ಯಾರ್ಥಿಗಳು ಕೋಟೆಯಲ್ಲಿ ಮಾನವ ಸಂಕಲೆಯನ್ನು ನಿರ್ಮಿಸಿ ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಕೋಟೆಯನ್ನು ರಕ್ಷಿಸಬೇಕಾದ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಇತ್ತ ಗಮನವನ್ನೇ ಹರಿಸಿಲ್ಲ.

ಹಲವು ಸಂಘ ಸಂಸ್ಥೆಗಳೂ ಕೋಟೆಯನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿದ್ದವು. ಖ್ಯಾತ ಇತಿಹಾಸ ತಜ್ಞ ಡಾ| ಎಂ.ಜಿ.ಎಸ್‌. ನಾರಾಯಣನ್‌ ಸಹಿತ ಇತಿಹಾಸ ತಜ್ಞರು ಕೋಟೆಗೆ ತಲುಪಿ ಕೋಟೆಯ ಶೋಚನೀಯ ಸ್ಥಿತಿಯಿಂದ ರಕ್ಷಿಸಿ ಸಂರಕ್ಷಿಸಬೇಕೆಂದು ಸಂಬಂಧಪಟ್ಟವರ ಮೇಲೆ ತೀವ್ರ ಒತ್ತಡ ಹಾಕಿದ್ದರು. ಈ ಕಾರಣದಿಂದ 2015ರಲ್ಲಿ  ಕೇರಳ ರಾಜ್ಯ ಪ್ರಾಚ್ಯ ವಸ್ತು ಇಲಾಖೆ 22 ಲಕ್ಷ ರೂ. ವೆಚ್ಚದಲ್ಲಿ ಕೋಟೆ ಸುತ್ತ ಗೋಡೆಯನ್ನು ದುರಸ್ತಿಗೊಳಿಸಿ, ಕೋಟೆಯಲ್ಲಿ ಬಹಳಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದ ಕಾಡನ್ನು ಸವರಿದ್ದರು. ಪ್ರವಾಸಿಗಳನ್ನು ಆಕರ್ಷಿಸುವ ರೀತಿಯಲ್ಲಿ ಕೋಟೆಯನ್ನು ಸಂರಕ್ಷಿಸುವ ಜತೆಗೆ ಕೋಟೆಯ ಮೂಲ ಸ್ವರೂಪಕ್ಕೆ ಯಾವುದೇ ಅಡ್ಡಿಯಾಗದಂತೆ ನವೀಕರಿಸಲಾಗುವುದು ಎಂದು ಸಂಬಂಧಪಟ್ಟವರು ಅಂದು ಭರವಸೆ ನೀಡಿದ್ದರು. 

ಆದರೆ ಭರವಸೆಗಳೆಲ್ಲ ಕಡತದಲ್ಲೇ ಉಳಿದುಕೊಂಡು ಮತ್ತೆ ಹಳೆಯ ಸ್ಥಿತಿಗೆ ತಲುಪಿದೆ. ಕಾಡು ಬೆಳೆದು ಕೋಟೆಯ ಗೋಡೆಗಳ ಕಲ್ಲಿನ ಮಧ್ಯೆ ಬೇರುಗಳು ನುಸುಳಿ ಕೋಟೆಯ ಗೋಡೆ ಕುಸಿದು ಬೀಳುವಂತಾಯಿತು.

ಐತಿಹಾಸಿಕ ಪ್ರಾಮುಖ್ಯ
ಈ ಕೋಟೆಗೆ ಸಾಕಷ್ಟು ಇತಿಹಾಸವಿದೆ. 1731ರಲ್ಲಿ ಇಕ್ಕೇರಿ ರಾಜ ವಂಶಜರು ಈ ಕೋಟೆಯನ್ನು ನಿರ್ಮಿಸಿದ್ದಾರೆ. ಈ ಕೋಟೆಗೆ ಅಂದು “ಹೊಸದುರ್ಗ’ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಇಂದು ಮಲಯಾಳದ ಪ್ರಭಾವದಿಂದ “ಪುದಿಯ ಕೋಟ’ ವಾಗಿದೆ. ಕಾಂಞಂಗಾಡ್‌ಗೆ ಖ್ಯಾತಿಯನ್ನು ತಂದುಕೊಟ್ಟಿರುವ ಈ ಕೋಟೆ ನಾಶದಂಚಿಗೆ ಸರಿದಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಂಸ್ಕೃತಿಕ ಗೌರವಕ್ಕೆ ಪಾತ್ರವಾಗಿರುವ ಈ ಕೋಟೆಯ ಬಗ್ಗೆ ಕೋಟೆ ಸಂರಕ್ಷಣ ಸಮಿತಿ ಜಿಲ್ಲಾ ಅದ್ಯಕ್ಷರಾಗಿದ್ದ ಸುಕುಮಾರನ್‌ ಪೆರಿಯಚ್ಚಾರು ಅವರು ಮಾಹಿತಿ ಹಕ್ಕು ಪ್ರಕಾರ ಪಡೆದುಕೊಂಡ ಮಾಹಿತಿಯಂತೆ ಈ ಕೋಟೆಗೆ ಸುಮಾರು 12 ಎಕರೆ ಸ್ಥಳವಿದೆ ಎಂದು ಸರಕಾರವೇ ಸ್ಪಷ್ಟಪಡಿಸಿದೆ. ಈ ಕೋಟೆಯೊಳಗೆ ಹಲವು ಸರಕಾರಿ ಕಚೇರಿಗಳು ಕಾರ್ಯಾಚರಿಸುತ್ತಿವೆೆ. ಸಾಕಷ್ಟು ಸ್ಥಳಗಳು ಖಾಸಗಿ ವ್ಯಕ್ತಿಗಳ ಕೈಸೇರಿವೆೆ. ಇದೀಗ ಕೋಟೆಯ ಬುರುಜುಗಳು, ಗೋಡೆಗಳು, ಪಾಳು ಬಾವಿಗಳು ಕೇವಲ ಮೂರೂ ಕಾಲು ಎಕರೆಯೊಳಗೆ ಸೀಮಿತಗೊಂಡಿವೆ. ವರ್ಷಗಳ ಹಿಂದೆ ರಾಜಕೀಯ ಪಕ್ಷವೊಂದು ತಮ್ಮ ಪಕ್ಷದ ಪತಾಕೆಯನ್ನು ಕೋಟೆಯ ಬತ್ತೇರಿ ಮೇಲೆ ನೆಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಕಾಸರಗೋಡು ಜಿಲ್ಲೆಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಸ್ವಂತ ಕಚೇರಿ ಇಲ್ಲದಿರುವುದರಿಂದ ಈ ಕೋಟೆಯ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿಲ್ಲ. ಆದುದರಿಂದ ಈ ಕೋಟೆ ವರ್ಷದಿಂದ ವರ್ಷಕ್ಕೆ ನಾಶದ ಅಂಚಿಗೆ ಸರಿಯುತ್ತಲೇ ಇದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೋಟೆಯ ಅಸ್ತಿತ್ವವೇ ಕಾಣಸಿಗದು.

ಇನ್ನಾದರೂ ಈ ಕೋಟೆಯನ್ನು ಸಂರಕ್ಷಿಸಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಪ್ರಾಚ್ಯ ವಸ್ತು ಇಲಾಖೆ ಮುಂದಾಗಬೇಕಾಗಿದೆ. ಆ ಮೂಲಕ ಐತಿಹಾಸಿಕ ಹಿನ್ನೆಲೆಯ ಈ ಕೋಟೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಜತೆಯಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸುವಲ್ಲಿ ಈ ಕೋಟೆ ನೆರವಾಗಬಹುದು.

ಇಲಾಖೆಯ  ನಿರ್ಲಕ್ಷ್ಯದಿಂದಾಗಿ ಕೋಟೆ ವಿನಾಶದತ್ತ 
ಕನ್ನಡಿಗರ ಸಾಹಸದ ಪ್ರತೀಕವಾಗಿರುವ ಹೊಸದುರ್ಗ ಕೋಟೆ ನಿರ್ಲಕ್ಷ್ಯದಿಂದ ನಾಶದತ್ತ ಸರಿಯುತ್ತಿದೆ. ಪುರಾವಸ್ತು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕೋಟೆಯ ವಿವಿಧೆಡೆ ಹಾನಿ ಸಂಭವಿಸಿದೆ. ಹೊಸದುರ್ಗ ಕೋಟೆಯನ್ನು ಸಂರಕ್ಷಿಸಲು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟವರನ್ನು ಆಗ್ರಹಿಸಿದ್ದರೂ, ಕೋಟೆಯ ರಕ್ಷಣೆಗೆ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ದುರಸ್ತಿಯ ಬಗ್ಗೆ ಈ ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯಧೋರಣೆಯನ್ನು ತೋರಲಾಗಿದೆ. ಕರ್ನಾಟಕದ ಬಿದನೂರಿನ ಇಕ್ಕೇರಿ ರಾಜವಂಶಜರಾದ ಸೋಮಶೇಖರ ನಾಯಕ್‌ 1731ರ ಕಾಲಘಟ್ಟದಲ್ಲಿ ಹೊಸದುರ್ಗ ಕೋಟೆ(ಮಲಯಾಳ ಭಾಷೆಯ ಪ್ರಭಾವದಿಂದ “ಪುದಿಯ ಕೋಟ’ವಾಗಿದೆ) ಯನ್ನು ಕಟ್ಟಲಾಗಿದೆ ಎಂದು ಐತಿಹಾಸಿಕ ದಾಖಲೆಯಲ್ಲಿ ನಮೂದಿಸಲಾಗಿದೆ. ಕನ್ನಡಿಗರ ಶೌರ್ಯ ಸಾಹಸದ ಪ್ರತೀಕವಾಗಿ ನೆಲೆ ನಿಂತಿದೆ. ಆದರೆ ಕೋಟೆಯ ಬಗೆಗಿನ ನಿರ್ಲಕ್ಷ್ಯದಿಂದ ಕೋಟೆಯ ವಿವಿಧೆಡೆ ಗೋಡೆ ಕಲ್ಲುಗಳು ಕುಸಿಯಲಾರಂಭಿಸಿದೆ. ಕಳೆದ ವರ್ಷದ ಮಳೆಗೆ ಕೋಟೆಯ ಅಲ್ಲಲ್ಲಿ ಗೋಡೆಗಳು ಕುಸಿದಿತ್ತು, ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ದುರಸ್ತಿಗೊಳಿಸಿದ್ದ ಕೋಟೆಯ ಗೋಡೆ ಕುಸಿದು ಬಿದ್ದು, ಕೋಟೆಯ ಅಸ್ತಿತ್ವ ನಾಶವಾಗುವ ಸ್ಥಿತಿಗೆ ತಲುಪಿದೆ.

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

13-

Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.