ಕಲಬುರ್ಗಿ ಹತ್ಯೆ ತನಿಖೆ ವಿಳಂಬಕೆ ಖಂಡನೆ
Team Udayavani, Aug 31, 2017, 10:18 AM IST
ಕಲಬುರಗಿ: ಸಾಂಸ್ಕೃತಿಕ ಚಿಂತಕ, ನೇರ ನುಡಿ, ನಿಷ್ಠುರವಾದಿ ಡಾ|ಎಂ.ಎಂ.ಕಲಬುರಗಿ ಹತ್ಯೆಯಾಗಿ ಎರಡು ವರ್ಷವಾದರೂ ಸರಕಾರಹತ್ಯೆಕೋರರನ್ನು ಬಂಧಿಸದೇ ಇರುವುದನ್ನು ಖಂಡಿಸಿ ಬುಧವಾರಸಂಜೆ ಪ್ರಗತಿಪರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು,ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆದು, ರಾಜ್ಯದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಎನ್ನುವ ಅನುಮಾನ ಮೂಡಿಸಿದೆ. ನಿಜಕ್ಕೂ ಇದು ರಾಜ್ಯದ ಜನತೆ ತಲೆ ತಗ್ಗಿಸುವ ವಿಚಾರ. ಹತ್ಯೆಯಾಗಿ ಸೆ. 30ಕ್ಕೆ ಎರಡು ವರ್ಷವಾದರೂ, ಸರಕಾರ ಇನ್ನೂವರೆಗೂ ಹತ್ಯೆ ಮಾಡಿದವರನ್ನು ಬಂಧಿಸುವ, ಶಿಕ್ಷಿಸುವ ಧೈರ್ಯ ಮಾಡಿಲ್ಲ ಎನ್ನುವುದು ಖೇದಕರ ವಿಷಯವಾಗಿದೆಎಂದು ದೂರಿದ್ದಾರೆ.
ಭಾರತದಲ್ಲಿ ದಾಬೋಲ್ಕರ್, ಪನ್ಸಾರೆ ಅವರನ್ನು ಹತ್ಯೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಹತ್ಯೆಕೋರರನ್ನು ಬಂಧಿಸಿಲ್ಲ. ರಾಜ್ಯದಲ್ಲಿ ಕಲಬುರ್ಗಿ ಹತ್ಯೆ ಹಲವಾರು ಪ್ರಶ್ನೆ ಹುಟ್ಟು ಹಾಕಿದೆ. ಸಿದ್ದರಾಮಯ್ಯ ಸರಕಾರ ಈ ನಿಟ್ಟಿನಲ್ಲಿ ಸುಮ್ಮನಿರುವುದು ರಾಜ್ಯದ ಜನತೆಗೆ ಕ್ಷೇಮವಲ್ಲ. ಇದು ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದೆ. ಅಲ್ಲದೆ, ಕೋಮುವಾದಿಗಳಿಗೆ ಉತ್ತರ ಕರ್ನಾಟಕ ಬಿಟ್ಟು ಕೊಡುವ ಎಲ್ಲಾ ಸನ್ನಿವೇಶಗಳು ಕಂಡು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹತ್ಯೆಕೋರರು ಸಿಗದೆ ಇರುವುದು ನೋಡಿದರೆ ಸರಕಾರ ಮೊಸಳೆ ಕಣ್ಣೀರು ಸುರಿಸುತ್ತಿದೆ. ಎರಡು ವರ್ಷವಾದರೂ ಒಂದು ಚಿಕ್ಕ ಸುಳಿವು ಸಿಕ್ಕಲ್ಲ ಎನ್ನುವುದಾದರೆ ಸರಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟು ದೈನೇಸಿ ಸ್ಥಿತಿ ತಲುಪಿದೆ ಎನ್ನುವುದು ತಿಳಿಯುತ್ತದೆ. ಕಲಬುರ್ಗಿ ಹತ್ಯೆ ಒಬ್ಬ ವ್ಯಕ್ತಿಯ ಹತ್ಯೆಯಲ್ಲ. ಅದೊಂದು ತತ್ವದ, ಬಹು ಸಂಖ್ಯಾತರ ಸಂಸ್ಕೃತಿಯ ಮೇಲಿನ ದಾಳಿಯಾಗಿದೆ. ಒಂದು ಸತ್ಯದ, ಬೆಳಕಿನ ಹತ್ಯೆಯಾಗಿದೆ ಎಂದು ಪ್ರತಿಭಟನಾಕಾರರು
ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕೆ.ನೀಲಾ, ಡಾ| ಮೀನಾಕ್ಷಿ ಬಾಳಿ, ರವೀಂದ್ರ ಶಾಬಾದಿ, ಕೆ.ಪ್ರಕಾಶ, ಡಾ| ಕಾಶಿನಾಥ ಅಂಬಲಗಿ,
ರಾಷ್ಟ್ರೀಯ ಬಸವದಳದ ಆರ್.ಜಿ. ಶೆಟಕಾರ್, ಉದ್ಯೋಗ ಖಾತ್ರಿ ಕಾರ್ಮಿಕ ಸಂಘಟನೆ ಡಾ| ಪ್ರಭು ಖಾನಾಪುರೆ. ಸುಮೇದ ಪ್ರಕಾಶನದ ದತ್ತಾತ್ರೇಯ ಇಕ್ಕಳಕಿ, ದಲಿತ ಸಂಘಟನೆಯ ಅರ್ಜುನ ಭದ್ರೆ, ಸೋಮಣ್ಣ ನಡಕಟ್ಟಿ , ದಕ್ಷಿಣಾಯನ, ಮಾನವ ಬಂಧತ್ವ ವೇದಿಕೆಯ ನಾಗೇಂದ್ರ ಜಾವಳಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.