ಆತ್ಮಾಹುತಿ ಬಾಂಬ್ ದಾಳಿ: ಇಬ್ಬರು ಅಲ್ಜೀರ್ ಪೊಲೀಸರು ಬಲಿ
Team Udayavani, Aug 31, 2017, 4:18 PM IST
ಅಲ್ಜೀರ್ಸ್ : ಭಯೋತ್ಪಾದಕ ಆತ್ಮಾಹುತಿ ಬಾಂಬರ್ನ ದಾಳಿಗೆ ಇಬ್ಬರು ಅಲ್ಜೀರಿಯನ್ ಪೊಲೀಸರು ಮೃತಪಟ್ಟಿರುವ ಘಟನೆ ವರದಿಯಾಗದೆ.
ಆತ್ಮಾಹುತಿ ಬಾಂಬರ್ನ ಮೇಲೆ ಪೊಲೀಸ್ ಸಿಬಂದಿಯೊಬ್ಬ ಎರಗಿದಾಗ ಆ ಬಾಂಬರ್ ತನ್ನ ಸೊಂಟಕ್ಕೆ ಬಿಗಿದುಕೊಂಡಿದ್ದ ಸ್ಫೋಟಕ ಸ್ಫೋಟಗೊಂಡಿತು.
ರಾಜಧಾನಿ ಅಲ್ಜೀರ್ಸ್ ನಿಂದ ಸುಮಾರು 350 ಕಿ.ಮೀ. ನೈಋತ್ಯದಲ್ಲಿರುವ ತಿಯಾರತ್ ನಲ್ಲಿನ ಪೊಲೀಸ್ ಪ್ರಧಾನ ಕಾರ್ಯಾಲಯದ ಮೇಲೆ ದಾಳಿ ನಡೆಸುವುದು ಬಾಂಬರ್ನ ಉದ್ದೇಶವಾಗಿತ್ತು. ಆತನನ್ನು ಪ್ರವೇಶ ದ್ವಾರದಲ್ಲೇ ಪೊಲೀಸರಿಬ್ಬರು ತಡೆದರು. ಆಗಲೇ ಆತನನ್ನು ನಿಯಂತ್ರಿಸಲು ಒಬ್ಬ ಪೊಲೀಸ್ ಆತನ ಮೇಲೆರಗಿದ. ಪರಿಣಾಮವಾಗಿ ಸ್ಫೋಟ ಉಂಟಾಗಿ ಬಾಂಬರ್ ಮಾತ್ರವಲ್ಲದೆ ಇಬ್ಬರು ಪೊಲೀಸರೂ ಬಲಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.