ಮುಗುಳು ನಗೆ ಇಂದೇ ಪ್ರದರ್ಶನ

Team Udayavani, Aug 31, 2017, 5:13 PM IST

mugulunage.jpg

ಗಣೇಶ್‌ ಅಭಿನಯದ, ಯೋಗರಾಜ್‌ ಭಟ್‌ ನಿರ್ದೇಶನದ “ಮುಗುಳು ನಗೆ’ ಚಿತ್ರ ನಾಳೆ ರಾಜ್ಯಾದ್ಯಂತ
ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಆದರೆ, ಅದಕ್ಕೂ ಮುನ್ನ, ಇಂದು ರಾತ್ರಿ ಚಿತ್ರದ ವಿಶೇಷ ಪ್ರದರ್ಶನಗಳು
ಆಯೋಜಿತವಾಗಿದ್ದು, ಒರಾಯನ್‌ ಮಾಲ್‌ನ ಪಿವಿಆರ್‌ ಮಲ್ಟಿಪ್ಲೆಕ್ಸ್‌ನ ಐದು ಪರದೆಗಳು ಹಾಗೂ ವೀರೇಶ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಅಷೇ ಅಲ್ಲ, ಈಗಾಗಲೇ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮೂಲಕ ಹೌಸ್‌ಫ‌ುಲ್‌ ಆಗಿದೆ ಎಂಬುದು ವಿಶೇಷ.

ಹೌದು, ಇದೇ ಮೊದಲ ಬಾರಿಗೆ ಗಣೇಶ್‌ ಅವರ ಈ ಚಿತ್ರ ಮುಂಗಡ ಬುಕ್ಕಿಂಗ್‌ ಹೌಸ್‌ಫ‌ುಲ್‌ ಕಾಣುತ್ತಿದ್ದು, ಅದರ ಜೊತೆಗೆ, ಗೋಲ್ಡ್‌ ಕ್ಲಾಸ್‌ನಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಏರ್ಪಡಿಸಲಾಗಿದೆ. ಈ ಹಿಂದೆ ನಿರ್ದೇಶಕ ಯೋಗರಾಜ್‌ ಭಟ್‌ ಅವರು, “ಮುಗುಳು ನಗೆ’ ಹೆಸರಲ್ಲಿ ಮಹಿಳೆಯರು ಸೆಲ್ಫಿಯಲ್ಲಿ ಸ್ಮೈಲ್ ಮಾಡಿರುವ ಫೋಟೋ ಕಳುಹಿಸುವ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು.

ನೂರಾರು ಮಹಿಳೆಯರು  ಸ್ಮೈಲ್ ಮಾಡಿ ಸೆಲ್ಫಿ ಕಳುಹಿಸಿದ್ದರು. ಆ ಪೈಕಿ 200 ಮಹಿಳೆಯರನ್ನು ಆಯ್ಕೆ ಮಾಡಿದ್ದು, ಅವರಿಗೆಲ್ಲ ಗುರುವಾರ ರಾತ್ರಿ ಒರಾಯನ್‌ ಮಾಲ್‌ನ ಗೋಲ್ಡ್‌ ಕ್ಲಾಸ್‌ನಲ್ಲಿ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.  ಮಹಿಳಾ ಸೆಲೆಬ್ರೆಟಿಗಳೂ ಚಿತ್ರ ವೀಕ್ಷಣೆ ಮಾಡಲಿದ್ದಾರೆ. ಈ ಪ್ರದರ್ಶನಕ್ಕೆ ಮಹಿಳೆಯರ ಹೊರತಾಗಿ ಯಾವೊಬ್ಬ ಗಂಡಸು ಹೋಗುವಂತಿಲ್ಲ ಎಂಬುದು ವಿಶೇಷ. ಇಷ್ಟಕ್ಕೂ ಮಹಿಳೆಯರಿಗೆ ಭಟ್ಟರು ಈ ಸ್ಪರ್ಧೆ ಇಟ್ಟಿದ್ದು ಯಾಕೆ ಗೊತ್ತಾ? ಮಹಿಳೆಯರು ರಾತ್ರಿ 7 ಗಂಟೆಗೆ ಕಿರುತೆರೆಯಲ್ಲಿ ಬರುವ ಧಾರಾವಾಹಿ ವೀಕ್ಷಣೆಗೆ ಕೂರುತ್ತಾರೆ. ಅವರು
ಸಹ “ಮುಗುಳು ನಗೆ’ ನೋಡಲು ಹೊರಬರಲಿ ಎಂಬ ಕಾರಣಕ್ಕೆ ಈ ಸ್ಪರ್ಧೆ ಏರ್ಪಡಿಸಿ, ಅದರಂತೆ 200 ಮಹಿಳೆಯರಿಗೆ ಪ್ರದರ್ಶನ ಮಾಡುತ್ತಿದ್ದಾರೆ. ಅಂದಹಾಗೆ, ವಿತರಕ ಜಾಕ್‌ ಮಂಜು ಅವರು ಮಲ್ಟಿಪ್ಲೆಕ್ಸ್‌ ಸೇರಿದಂತೆ ಸುಮಾರು 240 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಇನ್ನು, ಗಣೇಶ್‌ಗೆ ಕಳೆದ ಸೋಮವಾರದಿಂದ ರಾತ್ರಿ ನಿದ್ದೆಯೇ ಬರುತ್ತಿಲ್ಲವಂತೆ. ಅದಕ್ಕೆ ಕಾರಣ, “ಮುಗುಳು ನಗೆ’ ಎನ್ನುತ್ತಾರೆ ಅವರು. ಪ್ರತಿ ದಿನ ರಾತ್ರಿ 9.30ಕ್ಕೆ ಮಲಗುತ್ತಿದ್ದ ಅವರು, ಈ ಚಿತ್ರದ ಬಿಡುಗಡೆ ದಿನ ಹತ್ತಿರ ಬರುತ್ತಿದ್ದಂತೆ ನಿದ್ದೆಯೇ ಮಾಯವಾಗಿದೆಯಂತೆ. ಹತ್ತು ವರ್ಷಗಳ ನಂತರ ಭಟ್ಟರ ಜತೆ ಕೆಲಸ ಮಾಡಿರುವ ಖುಷಿ, ಭಯ ಎರಡೂ ಅವರಿಗಿದೆಯಂತೆ. ಅದೇನೆ ಇರಲಿ, ಗಣೇಶ್‌ಗೆ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಂತೂ ಇದ್ದೇ ಇದೆ. ಅವರು ಇದುವರೆಗೆ ಮಾಡಿದ ಚಿತ್ರಗಳ ಪೈಕಿ “ಮುಂಗಾರು ಮಳೆ’, “ಗಾಳಿಪಟ’ ಹಾಗೂ “ಮುಗುಳು ನಗೆ’ ಚಿತ್ರದ ಸ್ಕ್ರಿಪ್ಟ್ ಪ್ರತ್ಯೇಕವಾಗಿ ಎತ್ತಿಟ್ಟುಕೊಂಡಿದ್ದಾರಂತೆ.

ಈ ಹಿಂದೆ “ಮುಂಗಾರು ಮಳೆ’ ಸ್ಕ್ರಿಪ್ಟ್ನಲ್ಲಿ ಎರಡು ಸೀನ್‌ ಗೆ ಮಾರ್ಕ್‌ ಮಾಡಿದ್ದರಂತೆ. ಚಿತ್ರ ಬಿಡುಗಡೆಯಾದ ಬಳಿಕ ಜನ ಸಹ ಆ ದೃಶ್ಯಗಳನ್ನು ಖುಷಿಪಟ್ಟರಂತೆ. ಈಗ “ಮುಗುಳು ನಗೆ’ ಚಿತ್ರದ ಸ್ಕ್ರಿಪ್ಟ್ನಲ್ಲಿ ಎಂಟು ಸೀನ್‌ ಮಾರ್ಕ್‌ ಮಾಡಿದ್ದಾರಂತೆ. ಆ ಎಂಟು ಸೀನ್‌ ಯಾವುದು ಅನ್ನೋದಕ್ಕೆ ಸಿನಿಮಾ ಹೊರಬರೋವರೆಗೆ ಕಾಯಬೇಕು. 

ಟಾಪ್ ನ್ಯೂಸ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

allu arjun

Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ

venkatesaya namaha kannada movie

Venkatesaya Namaha: ವೆಂಕಟೇಶನ ನಂಬಿ ಬಂದವರು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

allu arjun

Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.