ಲೈಬ್ರೆರಿಯಲ್ಲಿ ಕಾಲಕ್ಷೇಪ
Team Udayavani, Sep 1, 2017, 6:40 AM IST
ಒಂದು ದಿನ ತನ್ನ ಒಬ್ಬರು ಶಾಲಾ ಶಿಕ್ಷಕರಲ್ಲಿ ಇದರ ಕುರಿತು ಹೇಳಿದಾಗ ಅವರು, “ಲೈಬ್ರೆರಿಗೆ ಹೋಗಿ ಏನು ಓದುತ್ತೀರೋ ಅಥವಾ ಸುಮ್ನೆ ಹೋಗಿ ಬರುತ್ತೀರೋ’ ಅಂತ ನನ್ನನ್ನು ಕೇಳಿದರು. ಅದಕ್ಕೆ ನಾನು, “ಹಾಂ ಸರ್… ಓದುತ್ತೇವೆ ಏನಾದರೊಂದು. ಅವರ್ ಕಂಪ್ಲೀಟ್ ಆಗಬೇಕಲ್ಲವೆ?’ ಅಂದು ಬಿಟ್ಟೆ. ಅದಕ್ಕೆ ಅವರು, “ಹಾಗಾದರೂ ಲೈಬ್ರೆರಿಗೆ ಹೋಗಿ ಹೋಗಿಯೇ ವಿದ್ಯಾರ್ಥಿಗಳಿಗೆ ಓದುವಂತಹ ಅಭ್ಯಾಸ ಬೆಳೆಯುತ್ತದೆ’ ಎಂದು ಹೇಳಿದರು.
ನಾನು ಡಿಗ್ರಿ ಕಾಲೇಜಿನಲ್ಲಿರುವಾಗ ನಮ್ಮ ಪ್ರಾಧ್ಯಾಪಕರು ಯಾವಾಗಲೂ ಹೇಳುತ್ತಿದ್ರು, “ಲೈಬ್ರರಿಯನ್ನು ಉಪಯೋಗ ಮಾಡಿಕೊಳ್ಳಿ. ದಿನನಿತ್ಯ ದಿನಪತ್ರಿಕೆಯನ್ನು ಅಥವಾ ಲೈಬ್ರೆರಿಯಲ್ಲಿ ಹೋಗಿ ಏನಾದರೂ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಓದುವ ಅಭ್ಯಾಸ ನಿಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಪೂರಕವಾದದ್ದು’ ಎಂದು ತರಗತಿಗಳಲ್ಲಿ ಹೇಳುತ್ತಲೇ ಇರುತ್ತಿದ್ದರು.
ಆದರೆ, ಡಿಗ್ರಿ ಜೀವನದಲ್ಲಿ ನಾನು ತುಂಬಾನೇ ಕಡಿಮೆ ಲೈಬ್ರರಿಯನ್ನು ಬಳಸಿಕೊಂಡದ್ದು. ಅದರ ಬೆಲೆನೂ ಆಗ ಗೊತ್ತಾಗಲಿಲ್ಲ ನೋಡಿ! ಬಿಡುವಿದ್ದಾಗಲೆಲ್ಲ ಸ್ನೇಹಿತರೊಂದಿಗೆ ಹರಟೆ ಹೊಡೆದು ಸಮಯ ಹಾಳು ಮಾಡಿದ್ದೇ ಹೆಚ್ಚು. ಅಪರೂಪಕ್ಕೆ ಸ್ನೇಹಿತರೊಡಗೂಡಿ ಲೈಬ್ರೆರಿ ಕಡೆ ನಾವು ಹೆಜ್ಜೆ ಇಟ್ಟು ಸ್ವಲ್ಪವೇ ಸ್ವಲ್ಪ ಸಮಯವನ್ನು ಕಳೆದು ಬರುತ್ತಿದ್ದೆವು ಅಷ್ಟೆ.
ಆಗ ಅಧ್ಯಾಪಕರು, ಈಗ ನಿಮಗೆ ಹೇಳಿದ್ದು ಅರ್ಥವಾಗುವುದಿಲ್ಲ ಮುಂದೊಂದು ದಿನ ನಾವು ಹೇಳಿದ್ದು ನಿಜ ಅಂತ ನಿಮಗೆ ಮನವರಿಕೆಯಾಗುತ್ತದೆ ಎಂದು ಹೇಳುತ್ತಿದ್ದರು. ಹೀಗೆ ಮೂರು ವರ್ಷ ಸುಂದರವಾದ ನೆನಪಿನೊಂದಿಗೆ ಡಿಗ್ರಿ ಜೀವನ ತುಂಬಾ ಬೇಗನೆ ಕಳೆದು ಹೋಯಿತು ಎಂಬಂತೆ ಭಾಸವಾಗುತ್ತಿದೆ. ನಂತರ ಸ್ನಾತಕೋತ್ತರ ಪದವಿ ಪಡೆಯುವೆಡೆ ಮನಸ್ಸು ಮಾಡಿದೆ. ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಸೇರಿದೆ. ಅದು ಅತ್ಯುತ್ತಮ ಶಿಕ್ಷಣ ಸಂಸ್ಥೆ, ಎಲ್ಲಾ ರೀತಿಯಲ್ಲೂ ವಿದ್ಯಾರ್ಥಿಗಳನ್ನು ಕ್ರಿಯಾಶೀಲತೆಯಲ್ಲಿ ತೊಡಗುವಂತೆ ಮಾಡುವ ವ್ಯವಸ್ಥೆ. ಇನ್ನು ಅದೆಷ್ಟು ದೊಡ್ಡ ಗ್ರಂಥಾಲಯ. ಊಫ್… ಎಲ್ಲಿ ಕಣ್ಣು ಹಾಯಿಸಿದರೂ ಪುಸ್ತಕಗಳದ್ದೇ ರಾಜ್ಯಭಾರ. ಅಬ್ಬಬ್ಬ… ಎಂತೆಂಥ ಪುಸ್ತಕಗಳು. ಎಲ್ಲ ದಿನಪತ್ರಿಕೆಗಳು, ಮ್ಯಾಗಜಿನ್‌ಗಳು, ಕಥೆ, ಕಾದಂಬರಿಗಳು, ಎಲ್ಲಾ ಪಠ್ಯಪುಸ್ತಕಗಳು, ಏನು ಬೇಕೋ ಅವೆಲ್ಲವೂ ಅಲ್ಲಲ್ಲಿ ಅಚ್ಚುಕಟ್ಟಾಗಿ ಜೋಡಣೆಗೊಂಡು ಇವೆ. ಓದಲು ಉನ್ನತ ಮಟ್ಟದ ವ್ಯವಸ್ಥೆಯಲ್ಲಿರುವ ಲೈಬ್ರೆರಿ ಇದಾಗಿದೆ.
ಲೈಬ್ರೆರಿಗೆ ಹೋಗಲು ಇಚ್ಛಿಸದವನನ್ನು ಕೂಡ ತನ್ನ ಕಡೆ ಸೆಳೆಯುವಂತೆ ಇದೆ. ಅದಲ್ಲದೆ ಎಸ್‌ಡಿಎಂ ಕಾಲೇಜಿನಲ್ಲಿ ಪ್ರತಿ ವಿದ್ಯಾರ್ಥಿಯು ತನ್ನ ಒಂದೊಂದು ಸೆಮಿಸ್ಟರ್ ಪರೀಕ್ಷೆಗೂ 40 ಗಂಟೆಗಳನ್ನು ಲೈಬ್ರರಿಯಲ್ಲಿ ಕಳೆಯಬೇಕು ಎಂಬ ನಿಯಮ ಇದೆ. ನಿಜ, ಸಮಯ ಪೂರೈಸುವುದರ ನೆಪದಲ್ಲಿ ಹೋಗಿ ಪುಸ್ತಕಗಳ ಒಲವು ಪಡೆದವರು ಅದೆಷ್ಟೋ ವಿದ್ಯಾರ್ಥಿಗಳು ಇದ್ದಾರೆ. ನಾನೂ ಕೂಡ ಅಷ್ಟೆ, ಲೈಬ್ರೆರಿ ಅಂದರೆ ಅಷ್ಟಕಷ್ಟೆ ಎಂದು ಇದ್ದೆ. ಎಸ್‌ಡಿಎಂ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ ಮೊದಲ ಸೆಮಿಸ್ಟರ್‌ನಲ್ಲಿ ಮೊದಲು ಪಠ್ಯಪುಸ್ತಕ ರೆಫರ್ ಮಾಡುವುದಕ್ಕಾಗಿ ಹೋಗುತ್ತಿದ್ದೆ. ನಂತರ ಲೈಬ್ರೆರಿ ನಲ್ಲಿ ಕಳೆದ ಸಮಯಕ್ಕೆ ಇಂಟರ್ನಲ್ ಮಾರ್ಕ್ಸ್ ಕೂಡ ಇತ್ತು. ಅದು ಸಿಗಬೇಕಲ್ಲ ಅಂತ ಮನಸ್ಸಿಲ್ಲದ ಮನಸ್ಸಲ್ಲಿ ಹೋಗಿದ್ದು ಅಂತ ಹೇಳಬಹುದು.ನಿಜ, ಇದು ಒಂದು ರೀತಿಯಲ್ಲಿ ವಿದ್ಯಾರ್ಥಿಗಳ ಜ್ಞಾನಭಂಡಾರ ಹೆಚ್ಚಿಸಲು, ಹೆಚ್ಚು ವಿಚಾರಗಳ ಅರಿವು ವಿದ್ಯಾರ್ಥಿಗಳಿಗೆ ದೊರೆಯಲಿ ಎಂಬ ಉದ್ದೇಶದಲ್ಲಿ ನಲವತ್ತು ಗಂಟೆ ಕಡ್ಡಾಯಗೊಳಿಸಿದ್ದು ಅತ್ಯುತ್ತಮ ವ್ಯವಸ್ಥೆ. ಅಷ್ಟೊಂದು ದೊಡ್ಡ ಮಟ್ಟದ ಗ್ರಂಥಾಲಯ ಇದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕೆಂಬ ಆಶಯದೊಂದಿಗೆ ಈ ನಿಯಮವನ್ನು ಮಾಡಿದ್ದಾರೆ.
ಹೀಗೆ, ಒಂದು ದಿನ ತನ್ನ ಒಬ್ಬರು ಶಾಲಾ ಶಿಕ್ಷಕರಲ್ಲಿ ಇದರ ಕುರಿತು ಹೇಳಿದಾಗ ಅವರು, “ಲೈಬ್ರೆರಿಗೆ ಹೋಗಿ ಏನು ಓದುತ್ತೀರೋ ಅಥವಾ ಸುಮ್ನೆ ಹೋಗಿ ಬರುತ್ತೀರೋ’ ಅಂತ ನನ್ನನ್ನು ಕೇಳಿದರು. ಅದಕ್ಕೆ ನಾನು, “ಹಾಂ ಸರ್… ಓದುತ್ತೇವೆ ಏನಾದರೊಂದು. ಹವರ್ ಕಂಪ್ಲೀಟ್ ಆಗಬೇಕಲ್ಲವೆ?’ ಅಂದು ಬಿಟ್ಟೆ. ಅದಕ್ಕೆ ಅವರು, “ಹಾಗಾದರೂ ಲೈಬ್ರೆರಿಗೆ ಹೋಗಿ ಹೋಗಿಯೇ ವಿದ್ಯಾರ್ಥಿಗಳಿಗೆ ಓದುವಂತಹ ಅಭ್ಯಾಸ ಬೆಳೆಯುತ್ತದೆ. ಮೊದಲು ಬೇಡ ಅಂದ್ರೂ, ನಂತರ ನಮಗೆ ತಿಳಿಯದಂತೆ ಓದುವ ಹವ್ಯಾಸದಲ್ಲಿ ತೊಡಗಿಕೊಳ್ಳುತ್ತೇವೆ’ ಎಂದು ಹೇಳಿದರು.
ಖಂಡಿತವಾಗಿಯೂ ಅದು ನಿಜ ಅನ್ನಿಸಿದೆ. ನನಗೂ ಕೂಡ ಪುಸ್ತಕಗಳನ್ನು ಓದುವ ಹವ್ಯಾಸ ಉಜಿರೆ ಎಸ್‌ಡಿಎಂ ಕಾಲೇಜಿನ ಲೈಬ್ರೆರಿಯಿಂದಲೇ ಹೆಚ್ಚಾಯಿತೆಂದು ಹೇಳುತ್ತೇನೆ. ಸೆಮಿಸ್ಟರ್‌ಗೆ ಗಂಟೆ ಪೂರೈಸುವ ಕಾರಣಕ್ಕೆ ಹೋಗುತ್ತ, ಪುಸ್ತಕಗಳ ರುಚಿಯನ್ನು ಸವಿದುಕೊಂಡು ಈಗ ಓದುವ ಹವ್ಯಾಸ ನನ್ನಲ್ಲೂ ಬೆಳೆಯುತ್ತಿದೆ. ಪುಸ್ತಕಗಳಲ್ಲಿ ಆಸಕ್ತಿಯೂ ಮೂಡುತ್ತಿದೆ ಎಂದು ಖುಷಿಯಾಗುತ್ತಿದೆ.
– ರಾಜೇಶ್ವರಿ ಬೆಳಾಲು
ಎಸ್‌ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.