ಹೆಣ್ಣಿಗೆ ನಗಲು ಬಾರದೋ? ಅಥವಾ ಹೆಣ್ಣು ನಗಬಾರದೋ? 


Team Udayavani, Sep 1, 2017, 6:05 AM IST

da-danor-01-(1).jpg

ನಗುನಗುತಾ ಬಾಳಮ್ಮ’ ಇದು ಎಲ್ಲಾ ಹೆಣ್ಣುಮಕ್ಕಳಿಗೆ ಹಿರಿಯರಿಂದ ಸಿಗುವ ಆಶೀರ್ವಾದ. ಹೆಣ್ಣಿಗೆ ಬದುಕಿನಲ್ಲಿ ಗಂಡ-ಮಕ್ಕಳ ಹೊರತಾಗಿ, ತನಗೆಂದೇ ಸಿಗುವ ಆಶೀರ್ವಾದ ಲಾಭವೆಂದರೆ ಇದೊಂದೇ. ಉಳಿದದ್ದೆಲ್ಲ ನಿನ್ನ ಗಂಡನ ಆಯುಷ್ಯ ವೃದ್ಧಿಯಾಗಲಿ, ಸಂತಾನ ಅಭಿವೃದ್ಧಿಯಾಗಲಿ ಇತ್ಯಾದಿ. 

“ನಗು’ ಎಲ್ಲರಿಗೂ ಅತೀ ಅಗತ್ಯವಾದ ಒಂದು ಸಂವೇದನೆ. ತನ್ನ ಮನಸ್ಸಿನ ಭಾವನೆಯನ್ನು ಅಭಿವ್ಯಕ್ತಿ ಪಡಿಸುವ ಮಾಧ್ಯಮವೂ ಹೌದು. ನಗುವಿಲ್ಲದೆ ಬದುಕಿಗೆ ಏನು ಸಾರ್ಥಕತೆ? ಪ್ರತಿದಿನದ ಆಗುಹೋಗುಗಳ ಮಧ್ಯೆ ಸಣ್ಣದೊಂದು ನಗು ಬಾರದಿದ್ದರೆ ಆ ದಿನವೇ ವ್ಯರ್ಥವಾದಂತೆ!

ನಮ್ಮೆಲ್ಲ ಮನರಂಜನೆಗಳ ಮುಖ್ಯ ಉದ್ದೇಶ ಮುಖದಲ್ಲಿ ನಗು ಮೂಡಿಸುವುದು. ನಮ್ಮ ದೇವರುಗಳು, ದೇವತೆಗಳು ನಮಗೆ ಇಷ್ಟರಾಗುವುದು ಅವರುಗಳ ತುಟಿ, ಕಣ್ಣುಗಳಲ್ಲಿ ಹೊರಸೂಸುವ ನಗುವಿನಿಂದ! ರಾಕ್ಷಸರ ಮುಖದಲ್ಲಿಯೂ ನಗು ಇರುತ್ತದೆ. ಆದರೆ, ಅದು ಅಟ್ಟಹಾಸ. 

ಆದರೆ, ನಗು ಕೇವಲ ಮುಖದಲ್ಲಿ ಸೂಸುವ ಅಭಿವ್ಯಕ್ತಿಯಾದರೂ ಅದಕ್ಕೆ ದೇಹ, ಮನಸ್ಸು ಎರಡೂ ಸಂಪೂರ್ಣ ಒಳಪಡಬೇಕಾಗುತ್ತದೆ. ಇಂಥ ನಗುವಿನ ಸ್ವಾತಂತ್ರ್ಯ ಕೂಡ ಹೆಣ್ಣು ಜನ್ಮಕ್ಕೆ ಕೇವಲ ನಸೀಬಾಗಿ ಉಳಿದಿದೆ ಎಂದು ನನ್ನ ಅನಿಸಿಕೆ.

ಪ್ರತಿ ಹೆಣ್ಣುಮಗುವಿಗೆ ಮೂರ್‍ನಾಲ್ಕು ವರ್ಷ ಆಗುತ್ತಿದಂತೆ, ಎಲ್ಲಾವಿಷಯಗಳ ತರಬೇತಿಗಳ ಜೊತೆ ತಾನು ಹೇಗೆ ನಗಬೇಕೆಂದು ಕೂಡ ತರಬೇತಿ ನೀಡಲಾಗುತ್ತದೆ. ಹೆಣ್ಣುಮಕ್ಕಳು ಮನಸ್ಸು ಬಿಚ್ಚಿ ಎಲ್ಲರೆದುರು  ಎಂದು ನಗುವುದನ್ನು ಸಾಂಪ್ರದಾಯಿಕ ಸಮಾಜ ಅನುಮಾನದಿಂದ ನೋಡುತ್ತದೆ.  ನಗುವನ್ನು ಮನಸ್ಸಿನಲ್ಲೇ ಇಟ್ಟುಕೊಂಡು, ಗಂಭೀರ ವ್ಯಕ್ತಿತ್ವದವಳೆಂದು ಅನ್ನಿಸಿಕೊಂಡರೆ ಆಕೆ ಆದರ್ಶ ಹೆಣ್ಣೆಂದು ಪರಿಗಣಿಸಲ್ಪಡುತ್ತಾಳೆ. ನಗುನಗುತ್ತ ಮಾತನಾಡುವ ಗಂಡು ಸ್ನೇಹಮಯಿ ಎನ್ನಿಸಿಕೊಳ್ಳುತ್ತಾನೆ. ಆದರೆ, ಹಾಗಿರುವ ಹೆಣ್ಣು “ಚೆಲ್ಲುಚೆಲ್ಲು’ ಗುಣದವಳಾಗಿ ಅಡ್ಡಹೆಸರಿಗೆ ಒಳಗಾಗುತ್ತಾಳೆ!

ಪುರಾಣಗಳಲ್ಲಾಗಲಿ, ಇತಿಹಾಸದಲ್ಲಾಗಲಿ ನಗುವನ್ನೇ ಜೀವನದ ಜೀವಾಳವಾಗಿಸಿಕೊಂಡ, ತುಂಟತನದ ಅಭಿವ್ಯಕ್ತಿಯಲ್ಲಿ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸಿದ ಯಾರಾದರೂ ಹೆಣ್ಣನ್ನ ಉದಾಹರಿಸಲಾಗುವುದೆ?  ಕೃಷ್ಣನಂತೆ ಬಾಲಲೀಲೆಗಳನ್ನು ಪ್ರದರ್ಶಿಸುತ್ತ ಜಗತ್ತನ್ನು ಆಕರ್ಷಿಸಿದ ಪುರುಷರು ಸಾಕಷ್ಟು ಮಂದಿ ಪುರಾಣಲೋಕದಲ್ಲಿರಬಹುದು. ಅಂದರೆ ಹೆಣ್ಣು  ನಗಬಾರದೋ ಅಥವಾ ಆಕೆಗೆ ನಗಲು ಬಾರದೋ ಎಂಬುದು ಯೋಚಿಸತಕ್ಕ ವಿಷಯ.

ಇನ್ನೂ ಮುಂದುವರೆದು ನೋಡಿದರೆ, ಹೆಣ್ಣುಮಕ್ಕಳು ಹೇಗೆ ನಗಬೇಕು, ಎಂದು ನಗಬೇಕು ಎಂಬ ಬಗ್ಗೆ ಕಟ್ಟಳೆಗಳಿರುವುದು ಗಮನಕ್ಕೆ ಬರುತ್ತದೆ. ಈಗ ಕೊಂಚ ಬದಲಾವಣೆಯಾಗಿರಬಹುದು; ಆದರೆ, ಮನೆಗೆ ಬಂದವರೆದುರು ಗಂಡಸು ಹೇಗೂ ವರ್ತಿಸಬಹುದು, ಗಟ್ಟಿಧ್ವನಿಯಲ್ಲಿ ಮಾತನಾಡಬಹುದು, ಅಸಮಾಧಾನವನ್ನು ಸೂಚಿಸಬಹುದು; ಆದರೆ, ಹೆಂಗಸು ಮಾತ್ರ ನಗುನಗುತ್ತ  “ಮನೆಯಲ್ಲಿ ಎಲ್ಲವೂ ಸರಿ ಇದೆ’ ಎಂಬಂತೆ ತೋರಿಸಬೇಕಾಗುತ್ತದೆ. ಇದು ಅವಳ ಪಾಲಿಗೆ ಇರುವ ಅನಿವಾರ್ಯತೆ. ಮನೆಯೊಳಗೆ ನಡೆದಿರುವ  ಜಗಳದ ಗುಟ್ಟು ಹೊರಬರದಂತೆ ತಡೆದು ಮುಗುಳ್ನಗುವಿನ ಮುಖವಾಡ ಧರಿಸಿ ಆದರ್ಶ ಪತ್ನಿಯಾಗಬೇಕಾದ ನಿರ್ಬಂಧ ಆಕೆಗೆ ಮಾತ್ರವಿದೆ. ಗಂಡಸರಿಗಾದರೆ ಅದು ಅನಿವಾರ್ಯ ಸ್ಥಿತಿಯಲ್ಲ. ಮಕ್ಕಳೆದುರು ಕೂಡ ಆಕೆ ಮನಸ್ಸಿನ ಒಳಗನ್ನು ಹೊರಗೆಡಹುವ ಹಾಗಿಲ್ಲ. ಮಕ್ಕಳೆದುರು ಕೂಡ ತನ್ನ ದುಃಖದ ಚೀಲಗಳನ್ನು ತನ್ನೊಳಗೇ ಮಡಿಚಿಟ್ಟು ಕೊಳ್ಳಬೇಕಾದ ಕಷ್ಟದ ವ್ಯವಹಾರ! 

“ನಗುನಗುತಾ ಬಾಳಮ್ಮ’ ಎಂದು ಪ್ರತ್ಯೇಕವಾಗಿ ಯಾಕೆ ಆಶೀರ್ವದಿಸುತ್ತಾರೆ ಎಂಬುದೇ ನನಗೆ ಅಚ್ಚರಿಯ ಸಂಗತಿ. “ನಿನ್ನ ಭಾವನೆಗಳನ್ನು ಹತ್ತಿಕ್ಕುವ ಸ್ಥಿತಿ ಮುಂದೆ ಬರಲಿದೆ. ಅದನ್ನು ಎದುರಿಸಲು ಸಿದ್ಧಳಾಗು’ ಎಂದು ಪರೋಕ್ಷವಾಗಿ ಸೂಚಿಸುವ ಮಾರ್ಗವೋ ಏನೊ! ಆಶೀರ್ವಾದ ಬಲದಿಂದಾದರೂ “ನಗುವನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಸ್ಥೈರ್ಯ ಬರಲಿ’ ಎಂಬ ಆಶಯವೂ ಇದ್ದಿರಬಹುದು. ಅಂತೂ, ಗಾಂಭೀರ್ಯವನ್ನೇ ತನ್ನ ಲಕ್ಷಣವಾಗಿರಿಸಿಕೊಂಡ ಹೆಣ್ಣು ಸಹಜತೆಯನ್ನು ಮೆಟ್ಟಿ ನಿಲ್ಲಬೇಕಾದ ಸ್ಥಿತಿ ಈ ಕಾಲದಲ್ಲಿಯೂ ಇದೆ.

ಇಲ್ಲವೆಂದರೂ ಕೆಲವೊಮ್ಮೆ ಹೆಣ್ಣು ನಗಬೇಕಾಗುತ್ತದೆ; ಯಾವಾಗ ಎಂದು ಕೇಳುತ್ತೀರಾ? ತನ್ನಲ್ಲಿರುವ ಸಹಜ ಕೋಪತಾಪಗಳನ್ನು ನಗುವಿನ ಬಣ್ಣಕ್ಕೆ ಕರಗಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ !

– ರಶ್ಮಿ ಕುಂದಾಪುರ

ಟಾಪ್ ನ್ಯೂಸ್

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.