“ಕಣ್ತೆರೆ’ಯುವ ಗಳಿಗೆ ಬರುವುದೇ?
Team Udayavani, Sep 1, 2017, 6:40 AM IST
ಸನಾ: ಸಿರಿಯಾ, ಯೆಮೆನ್‌ನ ಯುದ್ಧ ಭೀಕರತೆಯನ್ನು ಸಾರಿ ಹೇಳುವಂಥ ಫೋಟೊಗಳು ಇಡೀ ಜಗತ್ತನ್ನು ನೋವಿನಲ್ಲಿ ಮುಳುಗಿಸುತ್ತಿವೆ. ಕಳೆದ ವರ್ಷ ಧೂಳಿನಿಂದ ಮುಚ್ಚಿದ್ದ ಮುಖದಲ್ಲಿ ರಕ್ತ ಒರೆಸಿಕೊಳ್ಳುತ್ತಿದ್ದ 4 ವರ್ಷ ವಯಸ್ಸಿನ ಒಮ್ರಾನ್ ಎಂಬ ಮಗುವಿನ ಹಾಗೂ ಕಡಲ ತಡಿಯಲ್ಲಿ ಶವವಾಗಿ ತೇಲಿಬಂದಿದ್ದ ಮಗುವಿನ ಫೋಟೋ ಇಡೀ ವಿಶ್ವವನ್ನೇ ಕಂಗೆಡಿಸಿತ್ತು. ಇದೀಗ ಮನಕಲಕುವಂಥ ಅಂಥದ್ದೇ ಮತ್ತೂಂದು ಫೋಟೊ ಬಹಿರಂಗವಾಗಿದೆ.
ಯೆಮೆನ್‌ನಲ್ಲಿ ವಾಯುದಾಳಿಯಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ 4 ವರ್ಷ ವಯಸ್ಸಿನ ಮಗು ಬುಥೈನಾ ಮೊಹಮ್ಮದ್ ಮನ್ಸೂರ್, ತೆರೆಯಲು ಸಾಧ್ಯವಿಲ್ಲದಷ್ಟು ಊದಿಕೊಂಡಿರುವ ಕಣ್ಣನ್ನು ಕೈ ಸಹಾಯದಿಂದ ತೆರೆದು ನೋಡಲು ಪ್ರಯತ್ನಿಸುತ್ತಿರುವ ದೃಶ್ಯ ಮನಕಲಕುವಂತಿದೆ. ಬುಥೈನಾ ಇದ್ದ ಸನಾದ ಅಪಾರ್ಟ್‌ಮೆಂಟ್ ಮೇಲೆ ವಾಯು ದಾಳಿ ನಡೆದು ಮನೆ ನೆಲಸಮವಾಗಿದೆ. ಕುಟುಂಬದ 8 ಜನರಲ್ಲಿ ಬದುಕುಳಿದದ್ದು ಈ ಪುಟ್ಟ ಮಗು ಮಾತ್ರ. ಆಕೆಗೆ ತನ್ನ ಕುಟುಂಬದ ಯಾರೂ ಬದುಕಿಲ್ಲ ಎಂಬ ಅರಿವೂ ಇಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆ ಮೃತಪಟ್ಟಿರುವ ತನ್ನ ಸಂಬಂಧಿ ಮೌರಿನ್‌ರನ್ನು ಕೂಗುತ್ತಾಳೆ. ಆಕೆಯ ಮತ್ತೂಬ್ಬ ಸಂಬಂಧಿ ಹೇಳುವಂತೆ, ಯುದ್ಧಪೀಡಿತ ಪ್ರದೇಶದಲ್ಲಿದ್ದ ಬುಥೈನಾ ಕುಟುಂಬದವರ ಯೋಗಕ್ಷೇಮ ವಿಚಾರಿ ಸಲು ಮೌರಿನ್ ತೆರಳಿದ್ದರು. ಈ ವೇಳೆ ದಾಳಿ ನಡೆದು ಮೌರಿನ್ ಸಹಿತ ಬುಥೈನಾ ಕುಟುಂಬದ ಎಲ್ಲರೂ ಮೃತರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.