![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 1, 2017, 9:38 AM IST
ಬೆಂಗಳೂರು: ಜೆಡಿಎಸ್ ಪದಾಧಿಕಾರಿಗಳ ಪಟ್ಟಿ ಮತ್ತಷ್ಟು ಹಿಗ್ಗಿದ್ದು, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕ ವೈ.ಎಸ್.ವಿ.ದತ್ತ, ಮಾಜಿ ಸಚಿವ ಅಮರನಾಥಶೆಟ್ಟಿ ಅವರಿಗೆ ಹಿರಿಯ ಉಪಾಧ್ಯಕ್ಷ ಹುದ್ದೆ ನೀಡಲಾಗಿದೆ. ಜತೆಗೆ, ಕೋಲಾರ ಜಿಲ್ಲೆಯ ಕೆ.ಬಿ.ಗೋಪಾಲಕೃಷ್ಣ , ರಾಜ್ಯ ಹಿಂದುಳಿದ ವರ್ಗಗಳ ನಿಗಮದ ಮಾಜಿ ಅಧ್ಯಕ್ಷ ಜಿ.ರಾಮರಾಜು ಅವರಿಗೂ ಹಿರಿಯ ಉಪಾಧ್ಯಕ್ಷ ಹುದ್ದೆಯ ಹೊಣೆಗಾರಿಕೆ ವಹಿಸಲಾಗಿದೆ.
ಎಲ್.ಎಲ್.ಉಸ್ತಾದ್, ಆದಿಶೇಷ, ವಂಜಪಾಳ್ಯ ಮಂಜು, ಶಿವಮಲ್ಲೇಗೌಡ, ಕೃಷ್ಣಮೂರ್ತಿ, ಆರ್.ದಯಾನಂದ, ಎಸ್. ಎಸ್,ಪಾಟೀಲ್ ಬೊಗ್ಗಿಹಾಳ್, ಜೆ.ಆರ್ .ಪ್ರಕಾಶ್, ಅಮರನಾಥ್, ಬಿಬಿಎಂಪಿ ಪಾಲಿಕೆ ಸದಸ್ಯ ಕೆ.ದೇವದಾಸ್, ರಿಚರ್ಡ್ ಕುಂದರೋಸ್ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಲಾಗಿದೆ. ಬಸವರಾಜು, ನಾನಾಗೌಡ ಬಿರಾದಾರ್ ಅವರನ್ನು ಉಪಾಧ್ಯಕ್ಷರನ್ನಾಗಿ , ಬಿ.ಎಂ.ಮುಬಾರಕ್, ರೇಣುಕಾ ಪ್ರಸಾದ್, ಬಿ.ಆನಂದಪ್ಪ, ಸುಭಾಷ್ ಪೂಜಾರಿ, ನಾಗರಾಜು ಕೆಂಕೇರಿ, ಗಣೇಶ್ ಅವರನ್ನು ಕಾರ್ಯದರ್ಶಿ, ಡಾ.ವಿ.ರಾಘವೇಂದ್ರರಾವ್, ಎಂ.ಕೆ.ಮಹೇಶ್ವರಪ್ಪ ಅವರನ್ನು ಜಂಟಿ ಕಾರ್ಯದರ್ಶಿ, ಬಿ.ಸಿ.ಬಸವರಾಜಪ್ಪ, ಚೆನ್ನಪ್ಪ ವಗ್ಗಣ್ಣನವರ್ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಐಲಿನ್ ಜಾನ್ ಮಠಪತಿ ಅವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ನೇಮಿಸಲಾಗಿದೆ. ಈ ಹಿಂದೆ ರಾಜ್ಯಾಧ್ಯಕ್ಷರ ಕಾರ್ಯ ನಿರ್ವಹಣಾ ತಂಡದಲ್ಲಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಇದೀಗ ರಾಷ್ಟ್ರೀಯ ಅಧ್ಯಕ್ಷರ ಕಾರ್ಯ ನಿರ್ವಹಣಾ ತಂಡಕ್ಕೆ ಸೇರಿಸಲಾಗಿದೆ.
ಅಲ್ಕೋಡ್ ಹನುಮಂತಪ್ಪ, ರಮೇಶ್‌ಬಾಬು, ಅಮರನಾಥ್ ಕೂಡ ರಾಷ್ಟ್ರೀಯ ಅಧ್ಯಕ್ಷರ ಕಾರ್ಯ ನಿರ್ವಹಣಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯಾಧ್ಯಕ್ಷರ ಕಾರ್ಯ ನಿರ್ವಹಣಾ ತಂಡಕ್ಕೆ ಸಂಸದ ಪುಟ್ಟರಾಜು, ಶಾಸಕರಾದ ಸಾ.ರಾ.ಮಹೇಶ್, ಬಿ.ಬಿ.ನಿಂಗಯ್ಯ, ಚಿಕ್ಕಮಾದು,
ವಿಧಾನಪರಿಷತ್ ಸದಸ್ಯ ಮನೋಹರ್, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮೊಹಿದ್ ಅಲ್ತಾಫ್ ಅವರನ್ನು ಸೇರಿಸಲಾಗಿದೆ.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.