ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿಂಧು!
Team Udayavani, Sep 1, 2017, 10:40 AM IST
ಕನ್ನಡ ಚಿತ್ರರಂಗದ ಒಬ್ಬೊಬ್ಬರೇ ನಟಿಯರು ಮದುವೆಯಾಗುತ್ತಿದ್ದಾರೆ. ಪ್ರಿಯಾಮಣಿ, ಅಮೂಲ್ಯ, ನಿಧಿ ಸುಬ್ಬಯ್ಯ, ದೀಪಿಕಾ ಕಾಮಯ್ಯ ಮುಂತಾದವರು ಮದುವೆಯಾದ ನಂತರ ನಟಿ ಸಿಂಧು ಲೋಕನಾಥ್ ಕೂಡಾ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
“ಲೈಫು ಇಷ್ಟೇನೇ’, “ಡ್ರಾಮಾ’, “ಲವ್ ಇನ್ ಮಂಡ್ಯ’ ಸೇರಿದಂತೆ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿರುವ ಸಿಂಧು ಲೋಕನಾಥ್ ಮಂಗಳೂರು ಮೂಲದ ಶ್ರೇಯಸ್ ಎನ್ನುವವರನ್ನು ವರಿಸುವ ಮೂಲಕ ಹೊಸ ಬಾಳು ಆರಂಭಿಸಿದ್ದಾರೆ. ಮಡಿಕೇರಿ ಮೂಲದ ಸಿಂಧು ಲೋಕನಾಥ್ ಅವರ ವಿವಾಹ ಆಗಸ್ಟ್ 27ರಂದು ಮಡಿಕೇರಿಯಲ್ಲಿ ನಡೆದಿದೆ.
ಸಿಂಧು ಲೋಕನಾಥ್ ಅವರದು ಲವ್ ಕಂ ಅರೆಂಜ್ ಮ್ಯಾರೇಜ್ ಆಗಿದ್ದು, ಯಾವುದೇ ಸದ್ದುಗದ್ದಲವಿಲ್ಲದೇ ಎರಡು ಕುಟುಂಬದ ಆತ್ಮೀಯರನ್ನಷ್ಟೇ ಮದುವೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಸಿಂಧು ಕೈ ಹಿಡಿದಿರುವ ಶ್ರೇಯಸ್ ಪುಮಾ ಕಂಪೆನಿ ಉದ್ಯೋಗಿ.
ಸದ್ಯ ಸಿಂಧು ಲೋಕನಾಥ್ ನಟಿಸಿರುವ “ಹೀಗೊಂದು ದಿನ’ ಚಿತ್ರೀಕರಣ ಮುಗಿದಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ನಡುವೆಯೇ ಸಿಂಧು ಲೋಕನಾಥ್ “ಲೂಸ್ ಕನೆಕ್ಷನ್’ ಎಂಬ ವೆಬ್‌ಸೀರೀಸ್‌ನಲ್ಲೂ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.