ಮೋದಿ ಸಚಿವ ಸಂಪುಟ ಪುನಾರಚನೆ: ಉಮಾ, ರೂಡಿ ರಾಜೀನಾಮೆ
Team Udayavani, Sep 1, 2017, 11:56 AM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಇಂದು ಮಹತ್ತರ ಬದಲಾವಣೆ ಕಾಣಲಿದ್ದು ಅದಕ್ಕೆ ಪೂರ್ವ ಭಾವಿಯಾಗಿ ರಾಜೀನಾಮೆ ನೀಡಿರುವ ನಾಲ್ಕು ಪ್ರಮುಖ ಹಾಲಿ ಸಚಿವರುಗಳ ಪೈಕಿ ಉಮಾ ಭಾರ್ತಿ ಮತ್ತು ರಾಜೀವ್ ಪ್ರತಾಪ್ ರೂಡಿ ಸೇರಿದ್ದಾರೆ.
ಹಲವಾರು ರಾಜ್ಯ ವಿಧಾನಸಭಾ ಚುನಾವಣೆಗಳು ಹಾಗೂ ಆ ಬಳಿಕ ನಡೆಯಲಿರುವ 2019ರ ಮಹಾ ಚುನಾವಣೆಗೆ ಸಿದ್ಧತೆಯ ರೂಪದಲ್ಲಿ ಸಚಿವ ಸಂಪುಟದಲ್ಲಿ ಹೊಸ ತರುಣ ಮುಖಗಳನ್ನು ಸೇರಿಸಿಕೊಳ್ಳುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ.
ಎನ್‌ಡಿಎ ಗೆ ಈಚೆಗೆ ಸೇರ್ಪಡೆಗೊಂಡ ಬಿಹಾರ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಯಾದವ್ ಷವರ ಜೆಡಿಯ ಇದರ ಕನಿಷ್ಠ ಇಬ್ಬರು ಸದಸ್ಯರಿಗೆ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ.
ನಿನ್ನೆ ತಡರಾತ್ರಿ ರಾಜೀನಾಮೆ ನೀಡಿರುವ ಇನ್ನಿಬ್ಬರು ಸಚಿವರೆಂದರೆ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಕೇಂದ್ರ ಸಹಾಯಕ ಸಚಿವ ಸಂಜೀವ ಬಲ್ಯಾನ್. ಮೂಲಗಳ ಪ್ರಕಾರ ಫಗ್ಗನ್ ಸಿಂಗ್ ಕುಲಸ್ಥೆ, ಕಾಲರಾಜ್ ಮಿಶ್ರಾ ಅವರು ಕೂಡ ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ತಮಿಳು ನಾಡಿನ ಆಳುವ ಎಐಎಡಿಎಂಕೆ ಪಕ್ಷ ಕೇಂದ್ರ ಸಂಪುಟದಲ್ಲಿ ತನ್ನ ಸದಸ್ಯರಿಗೆ ಸಚಿವ ಸ್ಥಾನ ಸಿಗುವ ವರದಿಗಳನ್ನು ನಿರಾಕರಿಸಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ರಾಜೀನಾಮೆ ನೀಡಿರುವ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅನಂತರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿದ್ದಾರೆ.
ಈಚೆಗೆ ನಿರಂತರ ರೈಲು ಅವಘಡಗಳಿಂದ ಮನನೊಂದು ರಾಜೀನಾಮೆಗೆ ಮುಂದಾಗಿದ್ದು ಪ್ರಧಾನಿ ಮೋದಿ ಅವರಿಂದ ತತ್ಕಾಲಕ್ಕೆ ತಡೆಯಲ್ಪಟ್ಟಿದ್ದ ರೈಲ್ವೇ ಸಚಿವ ಸುರೇಶ್ ಪ್ರಭು ಅವರ ಸ್ಥಾನಕ್ಕೆ ಬೇರೊಬ್ಬ ವ್ಯಕ್ತಿಯನ್ನು ಸಚಿವರನ್ನಾಗಿ ನೇಮಿಸುವ ಸಾಧ್ಯತೆ ಇದೆ.
ಉಪರಾಷ್ಟ್ರಪತಿಯಾಗಿ ಚುನಾಯಿತರಾಗಿ ತಮ್ಮ ಸಚಿವ ಪದವನ್ನು ತೆರವು ಗೊಳಿಸಿರುವ ವೆಂಕಯ್ಯ ನಾಯ್ಡು ಅವರ ಸ್ಥಾನವನ್ನು ಸದ್ಯಕ್ಕೆ ಹರ್ಷ ವರ್ಧನ್‌ಗೆ ಹೆಚ್ಚುವರಿಗೆ ಯಾಗಿ ನೀಡಲಾಗಿತ್ತು. ಇದೀಗ ಆ ಸಚಿವ ಪದ ಬೇರೊಬ್ಬರಿಗೆ ದಕ್ಕಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.