ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಪುಣೆ ಇದರ ಮಹಾಸಭೆ
Team Udayavani, Sep 1, 2017, 3:59 PM IST
ಪುಣೆ:ಪುಣೆ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಇದರ 24ನೇ ಮಹಾಸಭೆಯು ಆ.15 ರಂದು ಪುಣೆಯ ಕಾರ್ಗಿಲ್ ಹಾಲ್ ನಲ್ಲಿ ಸಂಘದ ಅಧ್ಯಕ್ಷರಾದ ಮಾಳ ಸದಾನಂದ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಹಾಗೂ ಮಂಗಳೂರು ಸಾರಸ್ವತಿ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಸತೀಶ್ ಚಂದ್ರ ಆಗಮಿಸಿದ್ದರು.ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಗುಂಡು ನಾಯಕ್ ಉಪಸ್ಥಿತ ರಿದ್ದರು.
ಸಭೆಯ ಅಧ್ಯಕ್ಷರು, ಅತಿಥಿಗಣ್ಯರು ದೀಪ ಬೆಳಗಿಸಿ ಮಹಾ ಸಭೆಯನ್ನು ಉದ್ಘಾಟಿಸಿದರು. ಉಷಾ ಕಾಮತ್ ಪ್ರಾರ್ಥನೆಗೈದರು.
ಸಂಘದ ಗೌರವ ಕಾರ್ಯದರ್ಶಿ ಸುದರ್ಶನ್ ಬಿ .ವಿ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ ದರು. ಕೋಶಾಧಿಕಾರಿ ಯೋಗೇಶ್ ನಾಯಕ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಾಳ ಸದಾನಂದ ನಾಯಕ್ ಅವರು, ಈವರೆಗೆ ಪುಣೆ ರಾಜಾಪುರ ಸಾರಸ್ವತ ಸಂಘದ ಏಳಿಗೆಗಾಗಿ ಶ್ರಮಿಸಿದ ಹಾಗೂ ಪ್ರೋತ್ಸಾಹ ನೀಡಿದ ಸಮಾಜ ಬಾಂಧವರಿಗೆ ಧನ್ಯವಾದಗಳು. ಇನ್ನೂ ಹೆಚ್ಚಿನ ರೀತಿಯ ಸಹಕಾರ ಸಿಗಬೇಕು. ನಮ್ಮ ಸಮಾಜದ ಜನ ಸಾಮಾನ್ಯರ ಕಷ್ಟಗಳಿಗೆ ಆಗುವಂಥ ಕಾರ್ಯಗಳನ್ನು ಮಾಡುವಲ್ಲಿ ಸಹಕಾರ ನೀಡುವ ಮೂಲಕ ನಾವು ಪುಣೆಯಲ್ಲಿ ನೆಲೆಸಿರುವ ಸರ್ವ ರಾಜಾಪುರ ಸಾರಸ್ವತ ಸಮಾಜ ಬಾಂಧವರು ಜೊತೆಗೂಡಿ ಸಂಘದ ಬೆಳವಣಿಗೆಯಲ್ಲಿ ಪಾಲುದಾರ ರಾಗಬೇಕು. ಸಂಘಟನೆಯಿಂದ ಸಂಘದ ಬೆಳವಣಿಗೆ ಸಾಧ್ಯ. ಸಂಘದ ಬೆಳವಣಿಗೆಯು ನಮಗೆಲ್ಲರಿಗೂ ಅಭಿಮಾನ ಗೌರವವನ್ನು ತಂದು
ಕೊಡಬಹುದು, ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಹಕಾರ ನಿಡುವ ಮೂಲಕ ನಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕರಿಸೋಣ, ಸಂಘದ ಸ್ವಂತ ಕಟ್ಟಡ ಬೇಗನೆ ಆಗುವಂತಹ ಕಾರ್ಯ ನಮ್ಮಿಂದಾಗಬೇಕು ಎಂದರು.
ಹೆಂಗಸರು ಮಕ್ಕಳು ಕೂಡಾ ಮನೆಯ ಜವಾಬ್ದಾರಿಯೊಂದಿಗೆ ಸಂಘಕ್ಕೆ ಕೂಡ ಮಹತ್ವವನ್ನು ನೀಡಬೇಕು ಎಂದರು. ಮುಂಬರುವ 25ನೇ ವರ್ಷದ ಅಚರಣೆಗೆ ಈಗಿಂದಲೇ ನಾವು ಕಾರ್ಯಯೋಜನೆಗಳನ್ನು ರೂಪಿಸಿ ತಯಾರಾಗೋಣ ನಮ್ಮ ಸಮಾಜ ಬಾಂಧವರ ಸದಸ್ಯ ನೋಂದಣಿ ಯನ್ನು ಇನ್ನೂ ಹೆಚ್ಚಿಸುವ ಯೋಜನೆ ಸಂಘಕ್ಕೆ ಇದೆ. ಮುಂದಿನ ದಿನಗಳಲ್ಲಿ ಸಂಘದ ಸೇವಾ ಕಾರ್ಯಗಳಲ್ಲಿ ನಾವೆಲ್ಲರೂ ಭಾಗಿಗಳಾಗಿ ಸಂಘವನ್ನು ಮಾದರಿ ಸಂಸ್ಥೆಯನ್ನಾಗಿ ಮಾಡೋಣ ಎಂದು ಕರೆ ನೀಡುತ್ತಾ, ಸಂಘದ ವತಿಯಿಂದ ಜರಗಿದ ಶಿಕ್ಷಣ, ಕ್ರೀಡಾ ಕಲಾ ಕಾರ್ಯಗಳಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಮುಖ್ಯ ಅತಿಥಿ ಸತೀಶ್ ಚಂದ್ರ ಅವರು ಮಾತನಾಡಿ, ಪುಣೆಯಂತಹ ನಗರದಲ್ಲಿ ಸಂಘವನ್ನು ಕಟ್ಟಿ ಬೆಳೆಸಿದ ಸಮಾಜದ ಗಣ್ಯರಿಗೆ ಅಭಿನಂದನೆಗಳು. ಪುಣೆಯಲ್ಲಿ ನೆಲೆಸಿರುವ ಸರ್ವ ರಾಜಾಪುರ ಸಾರಸ್ವತ ಸಮಾಜ ಬಾಂಧವರು ಜೊತೆಗೂಡಿ ಸಂಘದ ವಿವಿಧ ರೀತಿಯ ಸಮಾಜ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಗಳಾಗಿ ಉತ್ತಮ ಸಂಘವನ್ನು ಕಟ್ಟಿದ್ದೀರಿ. ಇಂತಹ ಕಾರ್ಯಗಳು ನಮ್ಮ ಎಲ್ಲಾ ರಾಜಾಪುರ ಸಾರಸ್ವತ ಸಂಘಗಳು ಮಾಡಬೇಕು. ಸಂಘಟನೆಯಿಂದ ಸಂಘದ ಬೆಳವಣಿಗೆ ಸಾಧ್ಯ. ನಮ್ಮ ಸಂಘ ಎಂಬ ಅಭಿಮಾನ ಗೌರವ ನಮ್ಮಲ್ಲಿ ಮೂಡಿಬರಬೇಕು. ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಹಕಾರ ಹಾಗೂ ಬೇರೆ ಬೇರೆ ಸಮಾಜ ಪರ ಕಾರ್ಯ
ಗಳನ್ನು ಸಂಘವು ಬದ್ಧವಾಗಿ ಕಾರ್ಯಗತ ಗೊಳಿಸಬೇಕು ಎಂದು ಹೇಳಿದರು.
ಸುನಿಲ್ ಬೋರ್ಕರ್ ಪುತ್ತೂರು ಅವರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಸಂಘವು ಯಾವ ರೀತಿಯಲ್ಲಿ ಕಾರ್ಯ ವೆಸಗವಾಗಬೇಕು ಎಂಬ ಬಗ್ಗೆ ಸಭೆಗೆತಿಳಿಸಿದರು.
ಅತಿಥಿ ಗಣ್ಯರನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮ್ಮಾನಿಸಿದರು.
ಮಹಿಳಾ ವಿಭಾಗದ ಪ್ರಮುಖ ರಾದ ಪ್ರತಿಮಾ ನಾಯಕ್ ,ಸಹನಾ ನಾಯಕ್ ಮತ್ತು ಉರ್ಮಿಳಾ ಪಾಟ್ಕರ್ ಮುಂದಾಳತ್ವದಲ್ಲಿ ಹಾಗೂ ಮಹಿಳಾ ವಿಭಾಗದವರ ಸಹಕಾರದೊಂದಿಗೆ ಅರಶಿನ ಕುಂಕುಮ ಕಾರ್ಯಕ್ರಮ ಜರಗಿತು. ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಮಹಿಳೆಯರು,ಮಕ್ಕಳು ಈ ಸಭೆಯಲ್ಲಿ ಪಾಲ್ಗೊಂಡರು.
ಕೆ .ಸಿ. ಪ್ರಭು ಅವರು ಧನ್ಯವಾದ ಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.
ಚಿತ್ರ-ವರದಿ: ಹರೀಶ್ ಮೂಡಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.