ಕಠಿನ ಹೋರಾಟದಲ್ಲಿ ಗೆದ್ದ ಫೆಡರರ್, ನಡಾಲ್
Team Udayavani, Sep 2, 2017, 11:26 AM IST
ನ್ಯೂಯಾರ್ಕ್: ಅನುಭವಿ ರೋಜರ್ ಫೆಡರರ್ ಯುಎಸ್ ಓಪನ್‌ನಲ್ಲಿ 5 ಸೆಟ್‌ಗಳ ನಂಟನ್ನು ಮುಂದು ವರಿಸಿದ್ದಾರೆ. ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ಕೂಡ ಮೊದಲ ಸೆಟ್ ಕಳೆದುಕೊಂಡ ಬಳಿಕ ಗೆಲುವಿನ ಲಯಕ್ಕೆ ಮರಳಿದ್ದಾರೆ. ಇಬ್ಬರೂ ಈಗ 3ನೇ ಸುತ್ತು ತಲುಪಿದ್ದಾರೆ.
ಈ ವರ್ಷದ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಖ್ಯಾತಿಯ ಫೆಡರರ್ ದ್ವಿತೀಯ ಸುತ್ತಿನ ಪಂದ್ಯ ದಲ್ಲಿ ರಶ್ಯದ ಮಿಖೈಲ್ ಯೂಜ್ನಿ ವಿರುದ್ಧ 6-1, 6-7 (3-7), 4-6, 6-4, 6-2 ಅಂತರದಿಂದ ಗೆಲುವು ಕಂಡರು. ಇದ ರೊಂದಿಗೆ ಯೂಜ್ನಿ ವಿರುದ್ಧ ತಮ್ಮ ಅಜೇಯ ಓಟವನ್ನು ಮುಂದುವರಿಸಿದರು. ಯೂಜ್ನಿ ವಿರುದ್ಧ ಆಡಿದ ಎಲ್ಲ 17 ಪಂದ್ಯಗಳಲ್ಲೂ ಫೆಡರರ್ ಗೆಲುವನ್ನು ಒಲಿಸಿಕೊಂಡಿದ್ದಾರೆ.
ಫೆಡರರ್ ಮೊದಲ ಸುತ್ತಿನಲ್ಲಿ ಅಮೆರಿಕದ ಯುವ ಟೆನಿಸಿಗ ಫ್ರಾನ್ಸೆಸ್ ಟಿಯಾಫೊ ಅವರನ್ನು ಮಣಿಸಲಿಕ್ಕೂ 5 ಸೆಟ್ ತೆಗೆದುಕೊಂಡಿದ್ದರು. ಯುಎಸ್ ಓಪನ್‌ನಲ್ಲಿ ಒಟ್ಟು 80 ಪಂದ್ಯಗಳನ್ನು ಗೆದ್ದ ಸ್ವಿಸ್ ಟೆನಿಸಿಗನ ಮುಂದಿನ ಎದುರಾಳಿ ಫೆಲಿಶಿಯಾನೊ ಲೋಪೆಜ್. ಈ ಸ್ಪೇನಿಗನ ವಿರುದ್ಧ ಫೆಡರರ್ 12-0 ಗೆಲುವಿನ ದಾಖಲೆ ಹೊಂದಿದ್ದಾರೆ.
ವಿಶ್ವದ ನಂ.1 ರಫೆಲ್ ನಡಾಲ್ ಜಪಾನಿನ ಟಾರೊ ಡೇನಿಯಲ್ ವಿರುದ್ಧ ಮೊದಲ ಸೆಟ್ ಕಳೆದುಕೊಂಡ ಬಳಿಕ ಗೆಲುವಿನ ಮೆಟ್ಟಿಲನ್ನು ಏರತೊಡಗಿದರು. ಅಂತರ 4-6, 6-3, 6-2, 6-2. ಮೊದಲ ಸುತ್ತಿನಲ್ಲಿ 5 ಸೆಟ್‌ಗಳ ಮ್ಯಾರಥಾನ್ ಹೋರಾಟ ಸಂಘಟಿಸಿದ್ದ ನಡಾಲ್, 121ನೇ ರ್‍ಯಾಂಕಿಂಗಿನ ಟಾರೊ ವಿರುದ್ಧವೂ ಆರಂಭಿಕ ಹಿನ್ನಡೆ ಕಂಡರು. ಆದರೆ ಇಲ್ಲಿಂದ ಮುಂದೆ ನೈಜ ಆಟಕ್ಕೆ ಕುದುರಿಕೊಂಡರು.
“ಎಲ್ಲ ಪಂದ್ಯಗಳೂ ಅತ್ಯಂತ ಕಠಿನವಾಗಿ ಸಾಗುತ್ತಿವೆ. ಕಾರಣ. ಇಲ್ಲಿ ಎಲ್ಲರೂ ಅತ್ಯುತ್ತಮ ಪ್ರದರ್ಶನ ನೀಡಲು ಹಾತೊರೆ ಯುತ್ತಾರೆ. ನಾನಿಲ್ಲಿ ಅಷ್ಟೇನೂ ಉತ್ತಮ ಆಟವಾಡಲಿಲ್ಲ…’ ಎಂಬುದು ನಡಾಲ್ ಪ್ರತಿಕ್ರಿಯೆ. ಇವರ ಮುಂದಿನ ಎದುರಾಳಿ ಆರ್ಜೆಂಟೀನಾದ ಲಿಯೋನಾರ್ಡೊ ಮೇಯರ್.
ಡಿಮಿಟ್ರೋವ್ ನಿರ್ಗಮನ: ವಿಶ್ವ ಟೆನಿಸ್‌ನಲ್ಲಿ ಯುವ ಗಾಳಿ ಬೀಸುತ್ತಿದೆ ಎಂಬುದಕ್ಕೆ ರಶ್ಯದ 19ರ ಹರೆಯದ ಆ್ಯಂಡ್ರೆ ರುಬ್ಲೇವ್ ಸಾಕ್ಷಿಯಾದರು. ಅಮೋಘ ಪ್ರದರ್ಶನವಿತ್ತ ಅವರು 7ನೇ ಶ್ರೇಯಾಂಕಿತ ಬಲ್ಗೇರಿಯದ ಆಟಗಾರ ಗ್ರಿಗರ್ ಡಿಮಿಟ್ರೋವ್‌ಗೆ 7-5, 7-6 (3), 6-3 ಅಂತರದ ಸೋಲುಣಿಸಿದರು. ಜೆಕ್ ಗಣರಾಜ್ಯದ 15ನೇ ಶ್ರೇಯಾಂಕಿತ ಥಾಮಸ್ ಬೆರ್ಡಿಶ್ ಕೂಡ 2ನೇ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ. ಅವರನ್ನು ಉಕ್ರೇನಿನ ಅಲೆಕ್ಸಾಂಡರ್ ಡೊಲ್ಗೊಪೊಲೋವ್ 3-6, 6-1, 7-6 (7-5), 6-2 ಅಂತರದಿಂದ ಪರಾಭವಗೊಳಿಸಿದರು.
ಡೊಮಿನಿಕ್ ಥೀಮ್, ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ, ಗೇಲ್ ಮಾನ್‌ಫಿಲ್ಸ್, ಅಡ್ರಿಯನ್ ಮನ್ನಾರಿನೊ, ಡೇವಿಡ್ ಗೊಫಿನ್ ಅವರೆಲ್ಲ ಪುರುಷರ ಸಿಂಗಲ್ಸ್ ವಿಭಾಗದಿಂದ 3ನೇ ಸುತ್ತು ತಲುಪಿದ ಪ್ರಮುಖರು.
“ಎಲ್ಲ ಪಂದ್ಯಗಳೂ ಅತ್ಯಂತ ಕಠಿನವಾಗಿ ಸಾಗುತ್ತಿವೆ. ಕಾರಣ. ಇಲ್ಲಿ ಎಲ್ಲರೂ ಅತ್ಯುತ್ತಮ ಪ್ರದರ್ಶನ ನೀಡಲು ಹಾತೊರೆ ಯುತ್ತಾರೆ. ನಾನಿಲ್ಲಿ ಅಷ್ಟೇನೂ ಉತ್ತಮ ಆಟವಾಡಲಿಲ್ಲ…’
ನಡಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.