ರಮೇಶ ಬಾಯಾರ್ ಅವರಿಗೆ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ
Team Udayavani, Sep 2, 2017, 11:40 AM IST
ವಿಟ್ಲ: ಬಂಟ್ವಾಳ ತಾಲೂಕಿನ ಕಲ್ಲಂಗಳ ಕೇಪು ಸರಕಾರಿ ಪ್ರೌಢ ಶಾಲಾ ಅಧ್ಯಾಪಕ ರಮೇಶ ಎಂ. ಬಾಯಾರ್ ಅವರಿಗೆ ರಾಜ್ಯ ಸರಕಾರವು ಈ ಸಾಲಿನ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಘೋಷಿಸಿದೆ. ಶಿಕ್ಷಕ ದಿನಾಚರಣೆಯಂದು ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಜಂಕಿಲ ಅನುದಾನಿತ ಶಾಲೆ ಯಿಂದ ಶಿಕ್ಷಣ ಮತ್ತು ಶಿಕ್ಷಕ ಸೇವೆ ಆರಂಭಿಸಿದ ಇವರು ಚೆನ್ನೈತ್ತೋಡಿ, ವಿಟ್ಲ ಮಾದರಿ ಶಾಲೆಗಳಲ್ಲಿ ಶಿಕ್ಷಕ ರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬಂಟ್ವಾಳ ಬಿ.ಆರ್.ಪಿ., ವಿಟ್ಲ ಶಾಸಕರ ಆಪ್ತ ಸಲಹೆಗಾರ, ಕೇಪು ಸಿ.ಎ.ಇ.ಒ, ಪ್ರಭಾರ ಮುಖ್ಯ ಶಿಕ್ಷಕ, ಶಿಕ್ಷಕ ಕೇಂದ್ರದ ಕಾರ್ಯದರ್ಶಿ, ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕ ಮತ್ತು ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ, ಬಂಟ್ವಾಳ ಇ.ಸಿ.ಒ ಹೀಗೆ ಅನೇಕ ಜವಾಬ್ದಾರಿಗಳನ್ನು ಸಮರ್ಥ ವಾಗಿ ನಿರ್ವಹಿಸಿದ ಇವರು ಸಂಘಟನಾ ಚತುರ, ಉತ್ತಮ ವಾಗ್ಮಿ, ಚಿಂತಕ ಹಾಗೂ ಸಾಹಿತಿಯಾಗಿದ್ದಾರೆ.
ಎಲ್ಲ ಮೂಲ ಸೌಲಭ್ಯಗಳನ್ನು ಒದಗಿ ಸುವುದರ ಮೂಲಕ ಕಲ್ಲಂಗಳ ಸರಕಾರಿ ಪ್ರೌಢ ಶಾಲೆಗೆ ಜೀವ ತುಂಬಿದ ರಮೇಶ ಎಂ.ಬಾಯಾರ್ ಅವರು ಸಾವಯವ ಆಹಾರ ಸರಣಿ, ಅಕ್ಷರ ಪಾತ್ರೆ, ಮಕ್ಕಳಿಗೆ ಸಾವಯವ ಕೃಷಿ ತರಬೇತಿ, ಶಾಲಾ ಕೈತೋಟ, ಆವರಣ ಗೋಡೆ, ಕಂಪ್ಯೂಟರ್ ಆಧಾರಿತ ಬೋಧನೆ, ಮಕ್ಕಳಿಗೆ ಕಂಪ್ಯೂಟರ್ ಕಲಿಕೆಗೆ ಅವಕಾಶ, ಕಂಪ್ಯೂಟರ್ ಮುದ್ರಿತ ಪತ್ರವ್ಯವಹಾರ, ಆಂಗ್ಲ ಮಾಧ್ಯಮ ವಿಭಾಗಗಳ ಆರಂಭ, ಅರಣ್ಯ ವಿಸ್ತರಣೆ, ಕಟ್ಟಡ ವಿಸ್ತರಣೆ, ಯಕ್ಷಗಾನ ತರಗತಿ ಆರಂಭ, ತುಳು ಲಿಪಿ ಬೋಧನೆ, ಆಟಿಯ ಹಬ್ಬ, ಅಮ್ಮನ ಕೈತುತ್ತು, ಮಳೆಕೊಯ್ಲು, ಇಂಧನ ಉಳಿತಾಯ ಕಾರ್ಯಕ್ರಮ, ನೀರಿಂಗಿಸುವ ಕಾರ್ಯಕ್ರಮ, ಸಾಹಿತ್ಯ ಕಮ್ಮಟ, ಮಕ್ಕಳೊಂದಿಗೆ ಸಾವಯವ ಕೃಷಿ ಕ್ಷೇತ್ರ ಭೇಟಿ, ಶಾಲೆಗೆ ಸಿ.ಸಿ.ಕೆಮರಾ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳನ್ನು ನಡೆಸುತ್ತಲೇ ಇದ್ದರು. ಶಾಲೆಗೆ ಕುಡಿಯುವ ನೀರಿನ ಶಾಶ್ವತ ಯೋಜನೆ, ಆವರಣ ಗೋಡೆ ಒದಗಿಸಿದವರು. ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣ ಕಾರರಾಗಿರುವ ಇವರು ಅರಳಿದ ಮುಖ ಮತ್ತು ಅಮ್ಮನ ಅಕ್ಕರೆ ಎಂಬ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.