ಗದುಗಿನ ಆಶ್ರಮಕ್ಕೆ ಹುಬ್ಬಳ್ಳಿ ಗಣೇಶ!
Team Udayavani, Sep 2, 2017, 12:55 PM IST
ಹುಬ್ಬಳ್ಳಿ: ನಗರದ ವೀರಾಪುರ ಓಣಿಯ (ಗೌಡರ ಓಣಿ) ಶ್ರೀ ವಿಘ್ನೇಶ್ವರ ಗೆಳೆಯರ ಬಳಗದವರು ಪ್ರತಿಷ್ಠಾಪಿಸಿದ ಪಂ| ಪುಟ್ಟರಾಜ ಗವಾಯಿಗಳು ತಬಲಾ ನುಡಿಸುತ್ತಿರುವ ಭಂಗಿಯ ಗಣೇಶ ಮೂರ್ತಿಯನ್ನು ವಿಸರ್ಜನೆ ಬದಲು ಗದುಗಿನ ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಸೆ. 2ರಂದು ಕೊಡುಗೆಯಾಗಿ ನೀಡುತ್ತಿದ್ದಾರೆ. ಅಲ್ಲಿ ಗಾಜಿನ ಪೆಟ್ಟಿಗೆಯಲ್ಲಿ ಮೂರ್ತಿಯನ್ನು ಪ್ರದರ್ಶನಕ್ಕಿಡಲಾಗುತ್ತದೆ.
21 ವರ್ಷದ ಇತಿಹಾಸ: ವೀರಾಪುರ ಓಣಿಯ ಶ್ರೀ ವಿಘ್ನೇಶ್ವರ ಗೆಳೆಯರ ಬಳಗ ಸುಭಾಷ ಮಡ್ಡಿ, ನಾಗಪ್ಪ ಕೊಳಲ, ಚಂದ್ರಶೇಖರ ಪಾಟೀಲ, ನಾಗರಾಜ ಅಂಬಿಗೇರ ಸೇರಿದಂತೆ 11 ಪದಾಧಿಕಾರಿಗಳೊಂದಿಗೆ 1996ರಲ್ಲಿ ಸ್ಥಾಪನೆಗೊಂಡಿದ್ದು, ಈಗ 21 ಮಂದಿ ಇದ್ದಾರೆ.
ಕಳೆದ 21 ವರ್ಷದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತ ಬಂದಿದ್ದಾರೆ. ಮೊದಲೆರಡು ವರ್ಷ ಏಳು ದಿನ ಗಣಪನನ್ನು ಪ್ರತಿಷ್ಠಾಪಿಸಿದ್ದರೆ, ನಂತರದ ವರ್ಷಗಳಲ್ಲಿ 9 ದಿನ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ, ಕಾರ್ಯಕ್ರಮ ನಡೆಸುತ್ತ ಬಂದಿದ್ದಾರೆ. ಪ್ರತಿಷ್ಠಾಪನೆ-ವಿಸರ್ಜನಾ ಮೆರವಣಿಗೆ ವೇಳೆ ಆಡಂಬರ, ಡಿಜೆ ಸಿಸ್ಟಮ್ ಬದಲು ಸಾಂಪ್ರದಾಯಿಕ ಪದ್ಧತಿ ಅನುಸರಿಸುತ್ತ ಬಂದಿದ್ದಾರೆ.
ಕಳೆದ ವರ್ಷವೇ ತೀರ್ಮಾನ: ಗಣೇಶ ಮೂರ್ತಿ ವಿಸರ್ಜನೆ ಬದಲು ಸಂರಕ್ಷಿಸಿಟ್ಟರೆ ಹೇಗೆ ಎಂಬ ಆಲೋಚನೆಯನ್ನು ಬಳಗದವರು ಮಾಡಿದ್ದರು. ಅದರಂತೆ ಪಂ| ಪುಟ್ಟರಾಜ ಕವಿ ಗವಾಯಿಗಳ ಭಂಗಿಯ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಕಳೆದ ವರ್ಷವೇ ತೀರ್ಮಾನಿಸಿದ್ದರು.
ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ತೆರಳಿ ಅಲ್ಲಿನ ಪೀಠಾಧಿಕಾರಿ ಹಾಗೂ ಆಡಳಿತ ಮಂಡಳಿಯವರನ್ನು ಸಂಪರ್ಕಿಸಿ ಪರವಾನಗಿ ಕೂಡ ಪಡೆದು ಬಂದಿದ್ದರು. ನಂತರ ತಾಲೂಕಿನ ಅಂಚಟಗೇರಿಯ ಯಲ್ಲಪ್ಪ ಬೆಳಗಲಿ ಅವರಿಂದ ಪಂ| ಪುಟ್ಟರಾಜ ಗವಾಯಿಗಳ ಭಂಗಿಯ ಗಣೇಶ ಮೂರ್ತಿ ಸಿದ್ಧಪಡಿಸಿ ಪ್ರತಿಷ್ಠಾಪಿಸಿದ್ದಾರೆ.
ಇಂದು ಹಸ್ತಾಂತರ: ಗಣೇಶ ಮೂರ್ತಿಯನ್ನು ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಸೆ. 2ರಂದು ಹಸ್ತಾಂತರ ಮಾಡಲಾಗುತ್ತಿದೆ. ಅಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ವೀರಾಪುರ ಓಣಿಯಿಂದ ಹಿರಿಯರು, ಯುವಕರ ತಂಡ 21 ಮುತ್ತೆçದೆಯರೊಂದಿಗೆ ವಾಹನಗಳಲ್ಲಿ ಗದುಗಿಗೆ ತೆರಳಲಿದೆ.
ಅಲ್ಲಿ ಪುಟ್ಟರಾಜ ಗವಾಯಿಗಳ ಆಶ್ರಮದ ಪ್ರವೇಶದ್ವಾರದಿಂದ ಆಶ್ರಮದ ವರೆಗೆ ಮೆರವಣಿಗೆ ಮೂಲಕ ಗಣೇಶ ಮೂರ್ತಿ ಒಯ್ದು ಹಸ್ತಾಂತರ ಮಾಡಲಿದ್ದಾರೆ. ಅಂದಹಾಗೆ ಈ ಬಳಗದವರು ಕಳೆದ ವರ್ಷ ಶ್ರೀ ಸಿದ್ಧಾರೂಢಸ್ವಾಮಿ ಹೋಲಿಕೆಯ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದರು.
* ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.