ಆಲಮಟ್ಟಿ ಜಲಾಶಯದಿಂದ 55,035 ಕ್ಯೂಸೆಕ್ ನೀರು ಹೊರಕ್ಕೆ
Team Udayavani, Sep 2, 2017, 2:51 PM IST
ಆಲಮಟ್ಟಿ: ಕೃಷ್ಣಾ ನದಿ ಉಗಮಸ್ಥಾನ ಮಹಾಬಳೇಶ್ವರದಲ್ಲಿ ಹಾಗೂ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ
ಸುರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ ನಾಲ್ಕು ಗೇಟುಗಳ ಮೂಲಕ ಹಾಗೂ ಜಲ ವಿದ್ಯುದ್‌ಗಾರ ಮೂಲಕ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.
ಕಳೆದ ವಾರದಿಂದ ಒಳಹರಿವಿನ ಪ್ರಮಾಣ ಕ್ಷೀಣಿಸಿತ್ತು. ಈಗ ಮಹಾರಾಷ್ಟ್ರದಲ್ಲಿ ಹಾಗೂ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ
ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣೆಗೆ ನೀರು ಹರಿದು ಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯದ 21, 18, 17, 16 ಗೇಟುಗಳಿಂದ ಮಧ್ಯಾಹ್ನ 12:10ದಿಂದ 12,012 ಕ್ಯೂಸೆಕ್ ಹಾಗೂ ಕೆಪಿಸಿಎಲ್ ಮೂಲಕ 42 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ.
2017-18ನೇ ಸಾಲಿನಲ್ಲಿ ಇದೇ ಪ್ರಥಮ ಬಾರಿ ಜಲಾಶಯ ಸಂಪೂರ್ಣವಾಗಿ ಗೇಟುಗಳ ಮೂಲಕ 12,012 ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡಲಾಗುತ್ತಿದೆ. 519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ ಶುಕ್ರವಾರ
519.59 ಮೀ. ಎತ್ತರದಲ್ಲಿ 123.081 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ 122.834 ಟಿಎಂಸಿ ಅಡಿ ನೀರು ಸಂಗ್ರಹವಾಗಿ 56,879 ಕ್ಯೂಸೆಕ್ ನೀರು ಒಳಹರಿವಿದ್ದು 54,012 ಕ್ಯೂಸೆಕ್ ಗೇಟುಗಳು ಹಾಗೂ ಜಲವಿದ್ಯುದ್
ಗಾರಗಳಿಂದ ಮತ್ತು 943 ಕ್ಯೂಸೆಕ್ ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ, 60 ಕ್ಯೂಸೆಕ್ ವಿವಿಧ ಕೆರೆ ತುಂಬುವ ಯೋಜನೆಗಳ ಕೆರೆಗಳಿಗೆ ಹಾಗೂ ಕೂಡಗಿಯಲ್ಲಿರುವ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಕ್ಕೆ 20 ಕ್ಯೂಸೆಕ್ ಸೇರಿದಂತೆ ಒಟ್ಟು 55,035 ಕ್ಯೂಸೆಕ್ ನೀರನ್ನು ವಿವಿಧ ಮೂಲಗಳಿಗೆ ಹರಿಸಲಾಗುತ್ತಿದೆ.
ಕಳೆದ ವರ್ಷ ಇದೇ ದಿನ ಆಲಮಟ್ಟಿ ಜಲಾಶಯದಲ್ಲಿ 519.60 ಮೀ. ಎತ್ತರದಲ್ಲಿ 123.081 ಟಿಎಂಸಿ ಅಡಿ ಸಂಗ್ರಹವಾಗಿ 15 ಸಾವಿರ ಕ್ಯೂಸೆಕ್ ಒಳಹರಿವಿತ್ತು. ಅಲ್ಲದೇ ಆ ನೀರನ್ನು ವಿವಿಧ ಮೂಲಗಳಿಂದ ಬರುತ್ತಿರುವ 15
ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿತ್ತು. ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಕೋಯ್ನಾ ಜಲಾಶಯ ಸಂಪೂರ್ಣ ತುಂಬಿ ರಾಜಾಪುರ ಬ್ಯಾರೇಜಿನಿಂದ ಸುಮಾರು 55 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ನಿಷೇ ಧಿತ ಸ್ಥಳದಲ್ಲಿ ಮೀನುಗಾರರು: ಆಲಮಟ್ಟಿ ಜಲಾಶಯ ಭದ್ರತೆಗಾಗಿ ಜಲಾಶಯದ ಹಿಂಭಾಗ ಅರ್ಧ ಕಿ.ಮೀ. ಹಾಗೂ ಮುಂಭಾಗದಲ್ಲಿ ಅರ್ಧ ಕಿ.ಮೀ. ಪ್ರದೇಶದಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಮೀನುಗಾರರು ಸೇರಿದಂತೆ ಯಾವುದೇ ವ್ಯಕ್ತಿಗಳು ಬರದಂತೆ ಪ್ರವೇಶ ನಿಷೇ ಧಿಸಲಾಗಿದ್ದರೂ ಕೂಡ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೀನುಗಾರರು ಮೀನು ಹಿಡಿಯುತ್ತಿರುವುದು ಭದ್ರತಾ ವ್ಯವಸ್ಥೆಯನ್ನು ಅಣಕಿಸುವಂತಿತ್ತು.
ದಡ ಸೇರಿದ ರಕ್ಷಣಾ ದೋಣಿ: ನದಿ ಪಾತ್ರಕ್ಕೆ ವ್ಯಾಪಕ ನೀರು ಹರಿದು ಬಂದು ನೆರೆ ಹಾವಳಿ ಸಂಭವಿಸಿದರೆ ಜನ-ಜಾನುವಾರುಗಳನ್ನು ರಕ್ಷಿಸಲು ಈ ಹಿಂದೆ ಸುಸಜ್ಜಿತ ಸ್ಥಿತಿಯಲ್ಲಿದ್ದ ಯಂತ್ರ ಚಾಲಿತ ದೋಣಿಗಳು ತುಕ್ಕು ಹಿಡಿದು
ಒಂದು ದೋಣಿ ಇಲ್ಲಿಯ ಶಾಸ್ತ್ರೀ ಸಾಗರದ ಹಿನ್ನೀರು ಪ್ರದೇಶದ ಅಣೆಕಟ್ಟು ವಿಭಾಗದ ಸಸ್ಯಪಾಲನಾ ಕ್ಷೇತ್ರದ ಸಮೀಪದಲ್ಲಿ ನದಿ ದಡದಲ್ಲಿದೆ. ಇನ್ನೊಂದು ದೋಣಿ ಸೀತಿಮನಿ ರೈಲ್ವೆ ನಿಲ್ದಾಣದ ಹಿಂಬದಿ ರಸ್ತೆಗೆ ಹೊಂದಿಕೊಂಡಿರುವ ಬಯಲು ಪ್ರದೇಶದಲ್ಲಿ ಬಿದ್ದಿದೆ.
ಇದರಿಂದ ನೆರೆ ಹಾವಳಿಯೇನಾದರೂ ಸಂಭವಿಸಿದರೆ ಅಥವಾ ಆಕಸ್ಮಿಕ ಘಟನೆಗಳೇನಾದರೂ ಸಂಭವಿಸಿದರೆ
ಬಸವನಬಾಗೇವಾಡಿಯಿಂದ ಇಲ್ಲವೇ ಬಾಗಲಕೋಟೆಯಿಂದ ಯಂತ್ರಗಳನ್ನು ತರಿಸುವಂತಾಗಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.