ಮುಳುಗೋ ಬೆಂಗ್ಳೂರ್‌ ಉಳಿಸೋರ್ಯಾರು?


Team Udayavani, Sep 2, 2017, 3:19 PM IST

655558.jpg

ಮೋಡ ಮುಸುಕಿದ ವಾತಾವರಣವನ್ನು ಕಂಡರೆ ಸಾಕು, ಮಾರ್ಕೆಟ್‌ನಲ್ಲಿರುವ ವ್ಯಾಪಾರಿ ಗಾಬರಿಯಾಗುತ್ತಾನೆ. ಅಕಸ್ಮಾತ್‌ ಇವತ್ತು ಸಂಜೆ 4 ಗಂಟೆಗೇ ಮಳೆ ಶುರುವಾಗಿಬಿಟ್ಟರೆ? ಐದು ಗಂಟೆಯ ವೇಳೆಗೆ ರಸ್ತೆಯ ನೀರೆಲ್ಲಾ ಮಾರ್ಕೆಟ್‌ಗೇ ನುಗ್ಗಿಬಿಟ್ಟರೆ ಗತಿಯೇನು ಎಂದು ಯೋಚನೆಗೆ ಬೀಳುತ್ತಾನೆ. ಹೊರಗೆ ಬಿಸಿಲಿಲ್ಲ ಎಂದು ಗೊತ್ತಾದ ತಕ್ಷಣ ಮನೆಯಲ್ಲಿರುವ ಗೃಹಿಣಿ ಕಂಗಾಲಾಗುತ್ತಾಳೆ. ಕಚೇರಿಗೆ ಹೋಗಿರುವ ಗಂಡನಿಗೂ, ಕಾಲೇಜಿಗೆ ಹೋಗಿರುವ ಮಕ್ಕಳಿಗೂ ಲಗುಬಗೆಯಿಂದ ಫೋನ್‌ ಮಾಡಿ -“ಮಳೆ ಬರುವ ಹಾಗಿದೆ. ಸಂಜೆ ಹುಷಾರಾಗಿ ಬನ್ನಿ. ರಸ್ತೇಲಿ ಗುಂಡಿಗಳಿರುತ್ತವೆ. ಮಳೆ ಬೀಳ್ತಿರುವಾಗ ಯಾವುದೇ ಕಾರಣಕ್ಕೂ ರಸ್ತೆಗೆ ಬರಬೇಡಿ’ ಎಂದು ಎಚ್ಚರಿಸುತ್ತಾಳೆ. ಇತ್ತ ಬಿಬಿಎಂಪಿ ಸಿಬ್ಬಂದಿ, ಇಷ್ಟದೇವರನ್ನು ಪ್ರಾರ್ಥಿಸುತ್ತಾ – ಅಕಸ್ಮಾತ್‌ ಜೋರಾಗಿ ಮಳೆ ಸುರಿದರೆ, ಮೂರು ದಿನಗಳ ಕಾಲ ನಮ್ಮ ನೆಮ್ಮದೀನೇ ಹಾಳಾಗಿ ಬಿಡುತ್ತೆ, ಮಳೆ ಬಾರದ ಹಾಗೆ ನೋಡಿಕೋ ದೇವ್ರೇ..’ ಎಂದು ಬೇಡಿಕೊಳ್ಳುತ್ತಾರೆ.

ಒಂದೇ ಮಾತಿನಲ್ಲಿ ಹೇಳಿ ಬಿಡಬೇಕೆಂದರೆ, ಮಳೆ ಬಂದಾಗ ಬೆಂಗಳೂರಿನಲ್ಲಿ ಹೆಚ್ಚಿನವರಿಗೆ ಸಂತೋಷವಾಗುವುದಿಲ್ಲ, ಬದಲಿಗೆ ಭಯ ಶುರುವಾಗುತ್ತದೆ. ದಿನಕ್ಕೊಂದು ತಲೆನೋವು ಜೊತೆಯಾದರೆ ಗತಿಯೇನು ಅನ್ನಿಸಿ ಆತಂಕ ಜೊತೆಯಾಗುತ್ತದೆ. ಮಳೆ ಶುರುವಾಯ್ತು ಅಂದ ಕ್ಷಣದಲ್ಲೇ ಕೆರೆಯಂತಾದ ರಸ್ತೆಗಳು, ಮುರಿದುಬಿದ್ದ ಮರಗಳು, ಜಲಾವೃತಗೊಂಡ ಮನೆ/ಅಪಾರ್ಟ್‌ಮೆಂಟ್‌ಗಳು, ಟ್ರಾಫಿಕ್‌ಜಾಮ್‌ನಿಂದ ನಿಂತುಹೋದ ವಾಹನಗಳು, ಕೊಳೆನೀರಿನ ಮಧ್ಯೆಯೇ ಮುಖ ಕಿವುಚಿಕೊಂಡು ನಿಂತ ನಾಗರಿಕರ ಚಿತ್ರಗಳು ಕಣ್ಮುಂದೆ ಬಂದು ನಿಲ್ಲುತ್ತವೆ.

ಒಂದು ಕಾಲಕ್ಕೆ ಗಾರ್ಡನ್‌ಸಿಟಿ ಎನ್ನಿಸಿಕೊಂಡಿತ್ತು ಬೆಂಗಳೂರು. ಅದೆಲ್ಲಾ ಈಗ ಹಳೆಯ ನೆನಪು. ವರ್ಷಗಳ ಹಿಂದಷ್ಟೇ ಇದಕ್ಕೆ “ಗಾಬೇìಜ್‌ ಸಿಟಿ’ ಎಂಬ ಹೆಸರೂ ಅಂಟಿಕೊಂಡಿತು. ಇದೀಗ ಗಾಬೇìಜ್‌ ಸಿಟಿ ಜೊತೆಗೆ ಗುಂಡಿ ಸಿಟಿ ಎಂಬ ಮತ್ತೂಂದು ಹಣೆಪಟ್ಟಿಯೂ ಸಿಕ್ಕಿದೆ. ಆ ಮೂಲಕ ಬೆಂಗಳೂರು ಎಲ್ಲ ರೀತಿಯಲ್ಲೂ ಸೇಫ್ಟಿ ಅಲ್ಲ ಎಂಬ ಮಾತು ಹಲವರಿಂದ ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ, ಬೆಂಗಳೂರಿನ ರಸ್ತೆಗಳಲ್ಲಿ ಒಟ್ಟು 4990 ಗುಂಡಿಗಳಿವೆ ಎಂದು ಬಿಬಿಎಂಪಿಯೇ ಹೇಳಿಕೆ ನೀಡಿರುವುದರಿಂದ ಗುಂಡಿಗಳ ನಗರವಾಯಿತೇ ಬೆಂಗಳೂರು ಎಂಬ ಪ್ರಶ್ನೆಗೆ ಪ್ರಬಲ ಸಾಕ್ಷಿ ಸಿಕ್ಕಂತಾಗಿದೆ. 

ಇಂಥ ಸಂದರ್ಭದಲ್ಲಿ, ಒಂದೇ ಒಂದು ದೊಡ್ಡ ಮಳೆಗೆ ಬೆಂಗಳೂರು ತತ್ತರಿಸಿ ಹೋಗುವುದೇಕೆ? ನಾಲ್ಕು ಗಂಟೆ ಮಳೆ ಸುರಿದರೆ ಸಾಕು ರಸ್ತೆಗಳು ಕೆರೆಗಳಂತಾಗುವುದೇಕೆ? ಮಳೆ ಬಿದ್ದ ಎರಡೇ ದಿನದಲ್ಲಿ ರಸ್ತೆಗಳಲ್ಲಿ ಹೊಂಡಗಳು ಕಾಣಿಸುವುದೇಕೆ? ಅಪಾರ್ಟ್‌ಮೆಂಟ್‌ಗಳಲ್ಲಿ ಐದಾರು ಅಡಿಗಳಷ್ಟು ಎತ್ತರಕ್ಕೆ ನೀರು ನಿಲ್ಲುವುದೇಕೆ? ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಈ ಸಮಸ್ಯೆಗಳಿಂದ ಪಾರಾಗಲು ಜನಸಾಮಾನ್ಯರು ಏನು ಮಾಡಬೇಕು? ಬಿಬಿಎಂಪಿ, ಬಿಡಿಎ, ಬೆಸ್ಕಾಂನವರು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂಬ ಪ್ರಶ್ನೆಗಳಿಗೆ ಇಲ್ಲಿ ಒಂದಷ್ಟು ಉತ್ತರಗಳಿವೆ.

 ನಾಗರಿಕರ ಜವಾಬ್ದಾರಿ
ರಾಜಧಾನಿ ಮಳೆ ನೀರಿಗೆ ಮುಳುಗದಂತಾಗದಿರಲು ಭವಿಷ್ಯದ ಬೆಂಗಳೂರು ನಿರ್ಮಾಣದ ದೃಷ್ಟಿಯಿಂದ ನಾಗರಿಕರ ಹೊಣೆಗಾರಿಕೆಯೂ ಇದೆ. ನೀರಿನ ಸಂರಕ್ಷಣೆ ದೃಷ್ಟಿಯಿಂದ ಅವಕಾಶ ಇದ್ದರೆ ತಮ್ಮ ತಮ್ಮ ಮನೆಗಳಲ್ಲಿ ಸ್ವಯಂ ಪ್ರೇರಿತವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿ, ಮಳೆ ನೀರು ಸಂಸ್ಕರಿಸಿ ಪುನರ್‌ಬಳಕೆಗೆ ಒತ್ತು ನೀಡಬೇಕು. ಮಳೆ ನೀರು ಕೊಯ್ಲು ವ್ಯವಸ್ಥೆಗೆ ಅವಕಾಶ ಇಲ್ಲವಾದರೆ ಕನಿಷ್ಠ ಇಂಗು ಗುಂಡಿ ನಿರ್ಮಿಸಿ ಮಳೆ ನೀರು ಇಂಗಿಸಿ ಅಂತರ್ಜಲ ವೃದ್ಧಿಗೆ ನೆರವಾಗಬೇಕು. ಇದರಿಂದ ಸ್ಪಲ್ಪ ಮಟ್ಟಿಗಾದರೂ ಮಳೆ ನೀರು ರಸ್ತೆಗೆ ಹರಿದು ಪ್ರವಾಹ ಉಂಟಾಗುವುದನ್ನು ತಪ್ಪಿಸಬಹುದು.

ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ
ಮಳೆ ನೀರು ಸರಾಗವಾಗಿ ಹರಿಯುವಂತೆ ಮೋರಿ ಚರಂಡಿಗಳ ನಿರ್ಮಾಣ, ರಸ್ತೆಗೆ ಬಿದ್ದ ಮ ಳೆ ನೀರು ಮೋರಿ ಅಥವಾ ರಾಜಕಾಲುವೆಗೆ ನೇರವಾಗಿ ಸೇರ್ಪಡೆಯಾಗುವಂತೆ ನಿಯಮಬದ್ಧವಾಗಿ ರಸ್ತೆ ಮತ್ತು ಚರಂಡಿ ನಿರ್ಮಾಣ. ದೊಡ್ಡ ದೊಡ್ಡ ಅಟದ ಮೈದಾನ, ಪಾರ್ಕ್‌ಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಸುತ್ತಮುತ್ತಲ ಪ್ರದೇಶದ ಮಳೆ ನೀರು ಅಲ್ಲಿಗೆ ಬಂದು ಸೇರುವಂತೆ ಮಾಡುವುದು. ಬಿಡಿಎ, ಕೆಎಚ್‌ಬಿ ಸೇರಿದಂತೆ ಗೃಹ ನಿರ್ಮಾಣ ಸಂಘಗಳು ಮುಂದಾದರೂ ತಾವು ಹಂಚಿಕೆ ಮಾಡುವ  ನಿವೇಶನ, ಬಡಾವಣೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದು. ಹತ್ತು ಪ್ಲ್ರಾಟ್‌ಗಳಿಗಿಂತ ಹೆಚ್ಚಿರುವ ದೊಡ್ಡ ಅಪಾರ್ಟ್‌ಮೆಂಟ್‌ಗೆ ಮಳೆ ನೀರು ಕೊಯ್ಲು ವ್ಯವಸ್ಥೆ ಕಡ್ಡಾಯಗೊಳಿಸುವುದು. ನೀರನ್ನು ಸಂಸ್ಕರಿಸಿ ಪುನರ್‌ ಬಳಕೆ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುವುದು. ಮೊದಲಿಗೆ ಸರ್ಕಾರಿ, ಅರೆ ಸರ್ಕಾರಿ, ನಿಗಮ, ಮಂಡಳಿಗಳ ಕಚೇರಿಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿ ಮಾದರಿಯಾಗುವುದು.

  ಇದಷ್ಟು ಗಮನದಲ್ಲಿರಲಿ
* ಮಳೆಯ ಪ್ರಮಾಣ ಹೆಚ್ಚಾದಂತೆ ರಸ್ತೆಯಲ್ಲಿ ಗುಂಡಿಗಳು ಹೆಚ್ಚುತ್ತವೆ. ಸಾರ್ವಜನಿಕರು ಹಾಗೂ ವಾಹನ ಸವಾರರು  ಈ ಬಗ್ಗೆ ಸದಾ ಎಚ್ಚರ ವಹಿಸಬೇಕು.
* ತಮ್ಮ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಗುಂಡಿ ಬಿದ್ದಾಗ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು.
* ಯಾವ ರಸ್ತೆಯಲ್ಲಿ ಗುಂಡಿ ಬಿದ್ದಿರುತ್ತದೆ ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿದಿರುವುದಿಲ್ಲ. ಹೀಗಾಗಿ ರಾತ್ರಿ ಸಂಚಾರದ ಸಂದರ್ಭದಲ್ಲಿ ಹೆಚ್ಚಿನ ಗಮನ ಹರಿಸಬೇಕು. 
* ಮಳೆನೀರು ನಿಲ್ಲುವ ರಸ್ತೆಗಳ ಬಗ್ಗೆ ಎಚ್ಚರ ವಹಿಸಬೇಕು. ಉದಾ: ಸ್ಯಾಂಕಿ ರಸ್ತೆ, ಕಿನೋ ಥಿಯೇಟರ್‌ ಸಮೀಪ, ಬಿನ್ನಿಮಿಲ್‌ ರೈಲ್ವೇ ಸೇತುವೆ ಕೆಳಗೆ ಹಲವು ಭಾಗದಲ್ಲಿ ಮಳೆಯಾದಾಗ ರಸ್ತೆ ಮೇಲೆ ನೀರು ನಿಂತಿರುತ್ತದೆ. ಈ  ರಸ್ತೆಯಲ್ಲಿ ಸಂಚಾರಿಸುವ ಮುನ್ನವೇ ಜಾಗೃತರಾಗಬೇಕು.

ಒಂದು ಕಾಲದಲ್ಲಿ ಹೀಗಿತ್ತು…
ಮಾಗಡಿ ಕೆಂಪೇಗೌಡರು ಯೋಜನಾಬದ್ಧವಾಗಿ ನಿರ್ಮಿಸಿದ ಊರಿದು. ಸೂಕ್ಷ್ಮವಾಗಿ ಗಮನಿಸಿ ನೋಡಿ. ಬೆಂಗಳೂರಿನಲ್ಲಿ ಎಲ್ಲ ಕೆರೆಗಳೂ ತಗ್ಗು ಪ್ರದೇಶದಲ್ಲಿವೆ (ಎಷ್ಟೋ ಕಡೆ ಕೆರೆಗಳನ್ನು ಕಬಳಿಸಿ ಅಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿದೆ) ಹಿಂದೆಲ್ಲಾ ಕೆರೆಗಳಿಗೆ ಇಂಟರ್‌ಲಿಂಕ್‌ ಸಿಸ್ಟಂ ಇತ್ತು. ಅಂದರೆ, ಒಂದು ಕೆರೆ ತುಂಬಿದರೆ, ಅದು ಕೋಡಿ ಬಿದ್ದು, ಹೆಚ್ಚುವರಿ ಅನ್ನಿಸಿದ ನೀರು ಹರಿದು ಬಂದು ಮುಂದಿನ ಕೆರೆಯನ್ನು ಸೇರುತ್ತಿತ್ತು. ಆ ಕೆರೆಯಿಂದ ಮತ್ತೂಂದಕ್ಕೆ, ಅಲ್ಲಿಂದ ಇನ್ನೊಂದಕ್ಕೆ ನೀರು ಹರಿದು ಹೋಗುತ್ತಿತ್ತು. ಹಾಗಾಗಿ ಹಿಂದೆಲ್ಲಾ ಎಂಥ ಮಳೆ ಬಂದರೂ ಹೆದರುವ ಪರಿಸ್ಥಿತಿ ಇರಲಿಲ್ಲ. ಆದರೆ, ಈಗ ಕೆರೆಗಳು ಕಣ್ಮರೆಯಾಗಿವೆ. ಹಾಗಾಗಿ, ಮಳೆನೀರು ನೇರವಾಗಿ ರಸ್ತೆಗೆ, ಅಲ್ಲಿಂದ ಮನೆಗಳಿಗೆ ನುಗ್ಗುತ್ತಿದೆ. ಗಂಟೆಗಳ ಕಾಲ ನೀರು ನಿಲ್ಲುವುದರಿಂದ ಸಹಜವಾಗಿಯೇ ಹೆಜ್ಜೆಗೊಂದು ಗುಂಡಿ ನಿರ್ಮಾಣವಾಗುತ್ತಿದೆ. ಬೆಂಗಳೂರು “ಹೊಂಡಾ’ ಸಿಟಿ ಆಗುತ್ತಿದೆ!

ಟಾಪ್ ನ್ಯೂಸ್

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.