ಅರಣ್ಯದೊಳಗೆ ಅಕ್ಷರಮಾಲೆ


Team Udayavani, Sep 3, 2017, 6:50 AM IST

akshara-male.jpg

ಎಲ್ಲೂ ಇಲ್ಲದಂಥ ಈ ಒಂಟಿ ಲೈಬ್ರೆರಿಯನ್ನು ಎಪ್ಪತ್ತಮೂರು ವಯಸ್ಸಿನ ಪಿ. ವಿ. ಚಿನ್ನತಂಬಿ ನಡೆಸಿಕೊಂಡು ಹೋಗುತ್ತಿ¨ªಾರೆ. ಕೇರಳದ ಇಡುಕ್ಕಿ ಜಿÇÉೆಯ ದಟ್ಟಕಾನನದ ನಡುವೆ ಈ ಲೈಬ್ರೆರಿಯಲ್ಲಿರುವ ನೂರಾ ಅರುವತ್ತು ಪುಸ್ತಕಗಳೂ “ಕ್ಲಾಸಿಕ್‌’ ಎನಿಸಿಕೊಂಡಂಥವು ! ಸುತ್ತಲಿನ ಬಡಮುತ್ತವನ್‌ ಆದಿವಾಸಿಗಳು ನಿರಂತರವಾಗಿ ಇವುಗಳನ್ನು ಕೊಂಡೊಯ್ದು ಓದುತ್ತಾರೆ ಮತ್ತು ಹಿಂತಿರುಗಿಸುತ್ತಾರೆ.

ಮಣ್ಣಿನ ಗೋಡೆಯ ಪುಟ್ಟ ಟೀ ಅಂಗಡಿಯೆದುರು ಖಾಲಿ ಹಾಳೆಯ ಮೇಲೆ ಕೈಬರಹದಲ್ಲಿ ಬರೆದಿದೆ: ಅಕ್ಷರ ಆರ್ಟ್ಸ್ – ನ್ಪೋರ್ಟ್ಸ್ ಲೈಬ್ರೆರಿ, ಇರುಪ್ಪುಕಲ್ಲಕುಡಿ, ಎಡಮಲಕುಡಿ.

ಇÇÉೊಂದು ಲೈಬ್ರೆರಿಯೆ? ಇಡುಕ್ಕಿ ಜಿÇÉೆಯ ಈ ಗೊಂಡಾರಣ್ಯದ ನಡುವೆ? ಭಾರತದ ಅತಿ ಹೆಚ್ಚು ಸಾಕ್ಷರರಿರುವ ರಾಜ್ಯದ ಅತಿಕಡಿಮೆ ಸಾಕ್ಷರರಿರುವ ಜಿÇÉೆಯಿದು. ರಾಜ್ಯದÇÉೇ ಮೊದಲ ಬಾರಿಗೆ ಚುನಾಯಿತವಾಗಿ ರಚನೆಯಾದ ಬುಡಕಟ್ಟು ಗ್ರಾಮಸಭೆಯಿರುವ ಈ ಪುಟ್ಟಕೊಪ್ಪಲಿನಲ್ಲಿರುವುದು ಕೇವಲ 25 ಕುಟುಂಬಗಳು.

ಓದಬೇಕಾದವರು ಇಲ್ಲಿಂದ ಪುಸ್ತಕ ಒಯ್ಯಬೇಕೆಂದರೆ ಈ ದಟ್ಟ ಅರಣ್ಯದ ನಡುವೆ ಚಾರಣಮಾಡಿಕೊಂಡು ಬರಬೇಕು.

ನಿಜಕ್ಕೂ ಬರುತ್ತಾರಾ?
ಹೌದು, “ಬರ್ತಾರೆ’ ಅಂತಾರೆ- ಟೀ ಮಾರುತ್ತಲೇ ನ್ಪೋರ್ಟ್ಸ್ ಕ್ಲಬ್‌ ಆಯೋಜಿಸಿದ ಲೈಬ್ರೆರಿ ನಿರ್ವಹಿಸುತ್ತಿರುವ 73 ವರ್ಷದ ಪಿ. ವಿ. ಚಿನ್ನತಂಬಿ. ಎಡಮಲಕುಡಿ ಕಾಡಿನ ತಿರುವಿನಲ್ಲಿ ಕುಳಿತ ಇವರ ಚಹಾದಂಗಡಿಯಲ್ಲಿ ಚಹಾದ ಜತೆ ಮಿಕ್ಚರ್‌, ಬಿಸ್ಕತ್ತುಗಳ ಜತೆ ಒಂದಷ್ಟು ದಿನಸಿಯೂ ಲಭ್ಯ. ಇದು ಮುತ್ತವಾನ್‌ ಆದಿವಾಸಿಗಳ ಒಂದು ಗುಂಪಷ್ಟೇ ವಾಸವಾಗಿರುವ ಕೇರಳದ ಮೂಲೆಯಲ್ಲಿರುವ ಪಂಚಾಯತ್‌. ಮುನ್ನಾರ್‌ ಬಳಿಯ ಪೆಟ್ಟಿಮುಡಿಯಿಂದ 18 ಕಿ.ಮೀ. ಕಾಲ್ನಡಿಗೆಯ ದೂರ. ಚಿನ್ನತಂಬಿಯ ಚಹಾದಂಗಡಿ ಲೈಬ್ರೆರಿಗೆ ತಲುಪಲು ಇನ್ನೊಂದಷ್ಟು ದೂರ ನಡೆಯಬೇಕು. ನಾವು ಅವರ ಮನೆಯ ಕಡೆ ಹೋದಾಗ ಅವರ ಪತ್ನಿ ಕೆಲಸದ ನಿಮಿತ್ತ ಇನ್ನೆÇÉೋ ಹೋಗಿದ್ದರು.ಅಂದ ಹಾಗೆ ಅವರೂ ಮುತ್ತವಾನರೇ.

ಆಶ್ಚರ್ಯ ತಡೆಯಲಾಗದೆ ಕೇಳಿದೆ, “”ಚಿನ್ನತಂಬಿ, ಟೀ ಕುಡಿದಾಯ್ತು, ದಿನಸಿ ನೋಡಾಯ್ತು. ಎಲ್ಲಿ ನಿಮ್ಮ ಲೈಬ್ರೆರಿ?”
ತನ್ನ ಮಿಂಚು ನಗೆ ನಗುತ್ತ ನಮ್ಮನ್ನು ಒಳಗಿನ ಪುಟ್ಟ ಕಟ್ಟಡಕ್ಕೆ ಕರೆದು ಕತ್ತಲ ಮೂಲೆಯಿಂದ ಸುಮಾರು 25 ಕಿಲೋ ಅಥವಾ ಸ್ವಲ್ಪ ಹೆಚ್ಚು ಅಕ್ಕಿ ಹಿಡಿಸುವಂಥ ಎರಡು ದೊಡ್ಡ ಗೋಣಿಚೀಲಗಳನ್ನು ಹೊರತೆಗೆದರು. ಅವರ ಪೂರ್ಣ ದಾಸ್ತಾನು 160 ಪುಸ್ತಕಗಳು ಆ ಚೀಲಗಳಲ್ಲಿದ್ದವು ! ಪ್ರತಿದಿನ ಲೈಬ್ರೆರಿಯ ಸಮಯದಲ್ಲಿ ಅವಷ್ಟನ್ನೂ ತೆಗೆದು ಜೋಪಾನವಾಗಿ ಚಾಪೆಯ ಮೇಲೆ ಹರಡುತ್ತಾರೆ.

ನಮ್ಮ ಗುಂಪಿನ ಎಂಟೂ ಅಲೆಮಾರಿಗಳು ವಿಸ್ಮಯದಿಂದ ಪುಸ್ತಕ ಶೋಧನೆ ಶುರುಮಾಡಿ¨ªೆವು. ರಾಜಕೀಯವೂ ಸೇರಿದಂತೆ ಪ್ರತಿ ಪುಸ್ತಕವೂ ಸಾಹಿತ್ಯಲೋಕದ ಶ್ರೇಷ್ಠ ಕೃತಿಗಳಾಗಿದ್ದವು.ಒಂದೇ ಒಂದು ಥ್ರಿಲ್ಲರ್‌, ಬೆಸ್ಟ್‌ ಸೆಲ್ಲರ್‌ ಅಥವಾ ಶೋಪೀಸ್‌ಗಳಿರಲಿಲ್ಲ. ವೈಕಂ ಮಹಮ್ಮದ್‌ ಬಶೀರ್‌, ಎಂ. ಟಿ. ವಾಸುದೇವನ್‌ ನಾಯರ್‌, ಕಮಲಾದಾಸ್‌ ಮೊದಲಾದವರ ಪುಸ್ತಕಗಳು ! ಜತೆಗೆ ಮುಕುಂದನ್‌, ಲಲಿತಾಂಬಿಕಾ ಅಂತರ್ಜನಂ ಇವರವೂ ಇದ್ದವು.

ಮಹಾತ್ಮಾಗಾಂಧಿಯವರ ಬರಹಗಳ ಜತೆಗೆ ತೊಪ್ಪಿಲ್‌ಭಾಶಿಯವರ ಪ್ರಸಿದ್ಧ  “ನೀನು ನನ್ನನ್ನು ಕಮ್ಯುನಿಷ್ಟನನ್ನಾಗಿಸಿದೆ’ ಯಂಥ ಬರಹಗಳೂ ಇದ್ದವು.

ಹೊರ ಕುಳಿತು ಪ್ರಶ್ನಿಸಿ¨ªೆವು, “”ಚಿನ್ನತಂಬಿ, ಇಲ್ಲಿರೋ ಜನ ನಿಜಕ್ಕೂ ಇಂಥಾದ್ದನ್ನೆಲ್ಲ ಓದುತ್ತಾರಾ?” 
ಉಳಿದೆಲ್ಲ ಆದಿವಾಸಿಗಳಂತೆ ಮುತ್ತವಾನರೂ ಶಿಕ್ಷಣವಂಚಿತರು ಮತ್ತು ಇತರ ಭಾರತೀಯರಿಗಿಂತ ಹೆಚ್ಚು ಶಾಲಾ ಡ್ರಾಪ್‌-ಔಟ್‌ ಸಮಸ್ಯೆಯು ಳ್ಳವರು. ಉತ್ತರವಾಗಿ ಅವರು ತನ್ನ ಲೈಬ್ರೆರಿ ರಿಜಿಸ್ಟರ್‌ ತೆಗೆದಿಟ್ಟರು. ಪುಸ್ತಕ ಕೊಂಡೊಯ್ದ ಮತ್ತು ಹಿಂತಿರುಗಿಸಿದ ವಿವರಗಳನ್ನು ನಾಜೂಕಾಗಿ ದಾಖಲಿಸಿಡ ಲಾಗಿತ್ತು. ಕೇವಲ 25 ಕುಟುಂಬಗಳಿರುವ ಈ ಕಗ್ಗಾಡು ಪ್ರದೇಶದಲ್ಲಿ 2013ರಲ್ಲಿ 37 ಪುಸ್ತಕಗಳನ್ನು ಕೊಂಡೊಯ್ಯಲಾಗಿತ್ತು. ಇದು ಅವರ ಬಳಿಯಿದ್ದ ಒಟ್ಟು 160 ಪುಸ್ತಕಗಳ ಸುಮಾರು ನಾಲ್ಕನೆಯ ಒಂದರಷ್ಟು; ಅಂದರೆ ಒಳ್ಳೆಯ ಅನುಪಾತ.

ಲೈಬ್ರೆರಿಗೆ ರೂ. 25ರ ಒಂದು ಬಾರಿಯ ಸದಸ್ಯತ್ವ  ಶುಲ್ಕ ಮತ್ತು ತಿಂಗಳಿಗೆ ರೂ. 2ರಂತೆ ಮಾಸಿಕ ದರ. ಯಾವುದೇ ಪುಸ್ತಕ ಕೊಂಡೊಯ್ದರೂ ಪ್ರತ್ಯೇಕ ಶುಲ್ಕವಿಲ್ಲ. ಜನ ಬೆಟ್ಟದಿಂದ ಸುಸ್ತಾಗಿ ಬರ್ತಾರೆ. ಅದಕ್ಕೇ ಸಕ್ಕರೆ ರಹಿತ ಮತ್ತು ಹಾಲು ಹಾಕದ ಚಹಾ ಉಚಿತ. ಬಿಸ್ಕತ್ತು, ಮಿಕ್ಚರ್‌ ಅಥವಾ ಇನ್ನೇನಾದರೂ ಖರೀದಿಸಿದರಷ್ಟೇ ದುಡ್ಡು ಕೊಟ್ಟರಾಯ್ತು. ಭೇಟಿ ಮಾಡಿದವರಿಗೆ ಒಮ್ಮೊಮ್ಮೆ ಉಚಿತವಾಗಿ ಮನೆಯೂಟ ಸಿಗುವುದೂ ಉಂಟು.

ಕೊಂಡೊಯ್ದ ಮತ್ತು ಹಿಂದಿರುಗಿಸಿದ ದಿನಾಂಕ, ತೆಗೆದುಕೊಂಡವರ ಹೆಸರು ಎಲ್ಲವನ್ನು ಅಂದವಾಗಿ ಅವರ ದಾಖಲು ಪುಸ್ತಕದಲ್ಲಿ / ರಿಜಿಸ್ಟರ್‌ನಲ್ಲಿ ಬರೆದಿಡಲಾಗಿದೆ. ಇಳಂಗೋ ಅವರ ಶಿಲಪ್ಪದಿಕಾರಂ ಒಂದಕ್ಕಿಂತ ಹೆಚ್ಚು ಬಾರಿ ತೆಗೆದುಕೊಳ್ಳಲಾಗಿದೆ. ಈಗಾಗಲೇ ಇನ್ನೂ ಹೆಚ್ಚು ಪುಸ್ತಕಗಳನ್ನು ಈ ವರ್ಷ ಕೊಂಡೊಯ್ಯಲಾಗಿದೆ. ಅವಗಣನೆಗೆ ಒಳಗಾದ ಆದಿವಾಸಿಗಳ ಮೂಲಕ ಉತ್ಕೃಷ್ಟ ಸಾಹಿತ್ಯ ಹೀಗೆ ಮೆರೆಯುತ್ತಿರುವುದು ಗಂಭೀರವಾದ ವಿಷಯ. ಇದನ್ನು ನೋಡಿ ನಮ್ಮ ಗುಂಪಿನ ಕೆಲವರು ನಗರದ ವಾತಾವರಣದಲ್ಲಿದ್ದೂ ಓದಿನ ಅಭ್ಯಾಸ ಬೆಳೆಸಿಕೊಳ್ಳದ ತಮ್ಮ ಸ್ಥಿತಿಯ ಬಗ್ಗೆಯೇ ಮರುಗುತ್ತಿದ್ದರು ಅನಿಸಿತು.

ಬದುಕಿಗಾಗಿ ಬರೆಯುವುದನ್ನೇ ನೆಚ್ಚಿಕೊಂಡ ನಮ್ಮ ಗುಂಪಿನ ಬಹುತೇಕ ಸದಸ್ಯರು ತಮ್ಮ ಗರ್ವವನ್ನು ಮತ್ತಷ್ಟು ಇಳಿಸಿಕೊಳ್ಳಬೇಕಾಗಿತ್ತು. ನಮ್ಮ ಪ್ರಯಾಣಕ್ಕೆ ಜತೆಯಾದ ಕೇರಳ ಮಾಧ್ಯಮ ಅಕಾಡೆಮಿಯ ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬನಾದ ಯುವಕ ವಿಷ್ಣುವಿಗೆ ವಿಭಿನ್ನವಾದ ಪುಸ್ತಕವೊಂದು ಕಂಡಿತ್ತು, ಕೈಬರಹಗಳಿಂದ ತುಂಬಿದ್ದ ಒಂದು ನೋಟ್‌ಬುಕ್‌.

ಯಾವುದೇ ತಲೆಬರಹವಿಲ್ಲದಿದ್ದ ಅದರೊಳಗೆ ಚಿನ್ನತಂಬಿಯ ಆತ್ಮಕಥೆ! ಅದರಲ್ಲಿ ಹೆಚ್ಚೇನಿಲ್ಲ, ವಿನಮ್ರದನಿಯಲ್ಲವರು ಹೇಳಿದರು, “”ಇನ್ನೂ ಬರೆಯುತ್ತಿದ್ದೇನಷ್ಟೇ”

“”ಚಿನ್ನತಂಬಿ, ಒಂದಷ್ಟು ನಮಗೋಸ್ಕರ ಓದಿ” ಎಂದೆವು. ಅದು ತುಂಬ ಉದ್ದಕ್ಕಿರಲಿಲ್ಲ, ಅಪೂರ್ಣವಾಗಿತ್ತು; ಆದರೆ ಅಂದವಾಗಿ ನಿರೂಪಿಸಲಾಗಿತ್ತು. ಅವರ‌ ಸಾಮಾಜಿಕ ಮತ್ತು ರಾಜಕೀಯಪ್ರಜ್ಞೆಯ ಮೊದಮೊದಲ ಕಲಕುವಿಕೆಯನ್ನು ಅದು ಹಿಡಿದಿಟ್ಟಿತ್ತು. ಅವರು ಕೇವಲ ಒಂಬತ್ತು ವರ್ಷ ವಯಸ್ಸಿನವರಾಗಿ¨ªಾಗ ನಡೆದ ಮಹಾತ್ಮಾಗಾಂಧಿಯ ಹತ್ಯೆ ಮತ್ತು ಅದರಿಂದ ಅವರ ಮೇಲಾದ ಪರಿಣಾಮಗಳಿಂದ ಕಥೆ ಶುರುವಾಗಿತ್ತು.

“”ಎಡಮಲಕುಡಿಗೆ ವಾಪಸಾಗುವುದಕ್ಕೆ ಮತ್ತು ತನ್ನ ಲೈಬ್ರೆರಿಯನ್ನು ಶುರುಮಾಡುವುದಕ್ಕೆ ಮುರುಳಿ ಮಾಷ್ಟ್ರು ಸ್ಫೂ³ರ್ತಿ” ಎನ್ನುತ್ತಾರೆ ಚಿನ್ನತಂಬಿ. ಈ ಭಾಗಗಳಲ್ಲಿ ಮುರುಳಿ ಮೇಷ್ಟ್ರು ದಂತಕಥೆಯಂಥ ವ್ಯಕ್ತಿ ಮತ್ತು ಶಿಕ್ಷಕರು. ಅವರೂ ಇನ್ನೊಂದು ಪಂಗಡದ ಆದಿವಾಸಿಯೇ. ಈ ಪಂಚಾಯತ್‌ನ ಹೊರಗಿರುವ ಮನಕುಳಂನಲ್ಲಿ ಅವರ ವಾಸ. ತನ್ನ ಜೀವಿತದ ಬಹುಪಾಲನ್ನು ಮುತ್ತವಾನ್‌ಗಳ ಜತೆ ಕೆಲಸ ಮಾಡುವುದರಲ್ಲಿಯೇ ಕಳೆದವರು. “”ಅವರೇ ನನ್ನನ್ನು ಈ ಕೆಲಸಕ್ಕೆ ಹಚ್ಚಿದವರು. ತಾನು ಮಾಡಿದ ವಿಶಿಷ್ಟ ಕೆಲಸವನ್ನು ಏನೂ ಅಲ್ಲ ಎಂಬ ಧಾಟಿಯಲ್ಲಿ ಎಲ್ಲ ಶ್ರೇಯವನ್ನು ಮೇಷ್ಟರಿಗೇ ಕೊಡುತ್ತಾರೆ” ಚಿನ್ನತಂಬಿ.

ಎಡಮಲಕುಡಿ, ಕೇವಲ 28ರಲ್ಲಿ ಒಂದಾದ ಕುಗ್ರಾಮದಲ್ಲಿರುವುದು 2,500 ಮಂದಿಯಷ್ಟೇ. ಇದು ಬಹುತೇಕ ಇಡೀ ಜಗತ್ತಿನಲ್ಲಿರುವ ಮುತ್ತವಾನರ ಸಂಖ್ಯೆ. ಸುಮಾರು ನೂರು ಮಂದಿ ಇರುಪ್ಪುಕಲ್ಲಕುಡಿಯಲ್ಲಿ ವಾಸಿಸುತ್ತಿ¨ªಾರೆ. ನೂರು ಚದರ ಕಿ.ಮೀ. ಜಾಗದಲ್ಲಿ ವಿಸ್ತರಿಸಿರುವ ಎಡಮಲಕುಡಿ ರಾಜ್ಯದಲ್ಲಿಯೇ ಅತೀ ಕಡಿಮೆ ಅಂದರೆ ಸುಮಾರು 1,500 ಮತಗಳನ್ನಷ್ಟೇ ಹೊಂದಿರುವ ಸ್ಥಳ. ನಾವು ಅಲ್ಲಿಂದ ಹೊರಹೋಗಲು ಆಯ್ಕೆ ಮಾಡಿಕೊಂಡಿದ್ದ ದಾರಿಯನ್ನು ಮರೆತೇಬಿಡಬೇಕಿತ್ತು. ತಮಿಳುನಾಡಿನ ವಾಲ್ಪಾರೈಗೆ ಹೋಗುವ “ಅಡ್ಡದಾರಿ’ಯನ್ನು ಅದಾಗಲೇ ಕಾಡಾನೆಗಳು ಆಕ್ರಮಿಸಿಕೊಂಡಿದ್ದವು.

ಹೇಗೆ ನೋಡಿದರೂ ಒಂಟಿಯಂತೆನಿಸುವ ಈ ಲೈಬ್ರೆರಿ ನಡೆಸುತ್ತ ಅವಗಣನೆಗೆ ಒಳಗಾದ ತನ್ನ  ಗ್ರಾಹಕರ ಜ್ಞಾನದಾಹ ತಣಿಸುವ ಕಾರ್ಯವನ್ನು ಚಿನ್ನತಂಬಿ ಸದ್ದಿಲ್ಲದೇ ಮಾಡುತ್ತಿ¨ªಾರೆ. ಜತೆಗೆ ಚಹಾ, ಮಿಕ್ಚರ್‌ ಮತ್ತು ಬೆಂಕಿಪೆಟ್ಟಿಗೆ ಸರಬರಾಜು ಕೂಡ. ಸಾಧಾರಣವಾಗಿ ಸದ್ದುಗದ್ದಲದÇÉೇ ಇರುವ ನಮ್ಮ ಗುಂಪು ಈ ಹೃದಯಸ್ಪರ್ಶಿ ಮತ್ತು ಅಚ್ಚಳಿಯದ ಅನುಭವದಿಂದಾಗಿ ಮೌನಕ್ಕೆ ಶರಣಾಗಿತ್ತು. ನಮ್ಮ ಕಣ್ಣು ಮುಂದಿನ ದುರ್ಗಮ ದಾರಿಯೆಡೆಗೆ ನೋಡುತ್ತಿದ್ದರೆ ನಮ್ಮ ಮನಸ್ಸು  ಮಾತ್ರ ಪಿ. ವಿ. ಚಿನ್ನತಂಬಿಯ ಅಸಾಧಾರಣ ಲೈಬ್ರೆರಿಯೊಳಗಿತ್ತು.

– ಪಿ. ಸಾಯಿನಾಥ್‌

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.