ಕೇಂದ್ರ ಸಂಪುಟ ಪುನಾರಚನೆ, ಗುಟ್ಟು ಬಿಟ್ಟುಕೊಡದ ಮೋದಿ-ಶಾ ಜೋಡಿ
Team Udayavani, Sep 3, 2017, 6:00 AM IST
ಹೊಸದಿಲ್ಲಿ: ಎಲ್ಲರ ಊಹೆಗಳನ್ನು ಸುಳ್ಳು ಮಾಡಿ “ಸರ್‌ಪ್ರೈಸ್’ ಕೊಡುವುದರಲ್ಲಿ ನಿಷ್ಣಾತರಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿ ರವಿವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಒಂಬತ್ತು ಮಂದಿಯ ಹೆಸರನ್ನು ಅಂತಿಮಗೊಳಿಸಿದೆ.
ವಿಶೇಷವೆಂದರೆ, ಇದರಲ್ಲಿ ಕರ್ನಾಟಕದ ಉತ್ತರ ಕನ್ನಡ ಕ್ಷೇತ್ರದ ಅನಂತ್ ಕುಮಾರ್ ಹೆಗಡೆ ಹೆಸರೂ ಅಚ್ಚರಿ ರೂಪ ದಲ್ಲಿ ಸೇರ್ಪಡೆಯಾಗಿದೆ. ಶನಿವಾರ ರಾತ್ರಿ 9 ಗಂಟೆವರೆಗೂ ರಾಜ್ಯದಿಂದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ ಮತ್ತು ಸುರೇಶ್ ಅಂಗಡಿಯವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಇದನ್ನು ಸುಳ್ಳು ಮಾಡಿರುವ ಈ ಜೋಡಿ, ಅನಂತ್ ಕುಮಾರ್ ಹೆಗಡೆ ಹೆಸರನ್ನು ಆಯ್ಕೆ ಮಾಡಿದೆ ಎಂದು ಮೂಲಗಳು ಹೇಳಿವೆ.
ರವಿವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ಒಂಬತ್ತು ಮಂದಿ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ರಾಜ್ಯದ ಅನಂತ್ ಕುಮಾರ್ ಹೆಗಡೆ, ಉತ್ತರ ಪ್ರದೇಶದ ಶಿವ ಪ್ರತಾಪ್ ಶುಕ್ಲಾ , ಸತ್ಯ ಪಾಲ್ ಸಿಂಗ್, ಬಿಹಾರದ ಅಶ್ವಿನಿ ಕುಮಾರ್ ಚೌಬೆ, ರಾಜ್‌ಕುಮಾರ್ ಸಿಂಗ್, ಮಧ್ಯ ಪ್ರದೇಶದ ವೀರೇಂದ್ರ ಕುಮಾರ್, ರಾಜತಾಂತ್ರಿಕ ಹದೀìಪ್ ಸಿಂಗ್ ಪುರಿ, ರಾಜಸ್ಥಾನದ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಕೇರಳದ ಅಲೊ#àನ್ಸ್ ಕನ್ನಂದಾನಮ್ ಹೆಸರುಗಳು ಅಂತಿಮವಾಗಿವೆ ಎಂದು ಮೂಲಗಳು ಹೇಳಿವೆ.
ಉತ್ತರ ಕನ್ನಡ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತ್ ಕುಮಾರ್ ಹೆಗಡೆ ಹಲವು ಸಂಸದೀಯ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 28ನೇ ವಯಸ್ಸಲ್ಲೇ ಸಂಸತ್ ಪ್ರವೇಶಿಸಿದ ಕೀರ್ತಿ ಇವರದ್ದು. ಸದ್ಯ ಇವರು ವಿದೇಶಾಂಗ ವ್ಯವಹಾರ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತಂತೆ ಸಂಸದೀಯ ಸಮಿತಿಗಳ ಸದಸ್ಯರಾಗಿದ್ದಾರೆ. ಹೀಗಾಗಿ ಹೆಗಡೆ ಅವರನ್ನು ಮೋದಿ- ಶಾ ಜೋಡಿ ಆಯ್ಕೆ ಮಾಡಿರಬಹುದು ಎನ್ನಲಾಗಿದೆ.
ಶನಿವಾರ ಪೂರ್ತಿ ಬೆಳವಣಿಗೆ: ಸಚಿವ ಸಂಪುಟ ಪುನಾರಚನೆ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿ, ಎನ್‌ಡಿಎ ಅಂಗಪಕ್ಷಗಳಿಗೂ ಮಾಹಿತಿ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಯು ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ನಮಗೇನೂ ಮಾಹಿತಿ ಬಂದಿಲ್ಲ ಎಂದು ಹೇಳಿದ್ದರು. ಶಿವಸೇನೆ, ಟಿಡಿಪಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದವು. ಇವೆಲ್ಲದರ ನಡುವೆ ಎನ್‌ಡಿಎ ಸೇರುತ್ತದೆ ಎಂದು ಹೇಳಲಾಗುತ್ತಿದ್ದ ಎಐಎಡಿಎಂಕೆ ಕೂಡ ಹೊರಗೆ ಉಳಿಯಲಿದೆ.
ಟೀಂ 2019ನಲ್ಲಿ ಯಾರ್ಯಾರು?: ಪ್ರಮುಖವಾಗಿ 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಅವರು ತಮ್ಮ ಸಂಪುಟವನ್ನು ವಿಸ್ತರಿಸು ತ್ತಿದ್ದಾರೆ. ಜತೆಗೆ, ಯಾರ ಸಾಧನೆಯಿಂದ ತೃಪ್ತಿಯಾಗಿಲ್ಲವೋ ಅವರನ್ನು ಪಕ್ಕಕ್ಕಿಟ್ಟು ಹೊಸಬರಿಗೆ ಅವಕಾಶ ನೀಡುವುದೂ ಮೋದಿ ಅವರ ಉದ್ದೇಶ. ಅದರಂತೆ, ಶನಿವಾರ ರಾತ್ರಿ ಮೋದಿ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಅಂತಿಮ ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಮೆರಿಟ್ ಮತ್ತು ರಾಜಕೀಯ ಲೆಕ್ಕಾಚಾರ ಆಧರಿಸಿ ಅರ್ಧ ಡಜನ್‌ಗೂ ಹೆಚ್ಚು ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಕೇಂದ್ರ ಸಚಿವರಾದ ಕಲ್‌ರಾಜ್ ಮಿಶ್ರಾ, ಬಂಡಾರು ದತ್ತಾತ್ರೇಯ, ರಾಜೀವ್ ಪ್ರತಾಪ್ ರೂಢಿ, ಸಂಜೀವ್ ಕುಮಾರ್ ಬಲ್ಯಾನ್, ಫಗ್ಗನ್ ಸಿಂಗ್ ಕುಲಾಸ್ತೆ, ಮಹೇಂದ್ರನಾಥ್ ಪಾಂಡೆ ಅವರಿಂದ ಈಗಾಗಲೇ ರಾಜೀನಾಮೆ ಪಡೆಯಲಾಗಿದೆ.
ಏಕೀಕೃತ ಸಾರಿಗೆ ಸಚಿವಾಲಯ?
ಇನ್ನು ದೇಶದ ಸಾರಿಗೆ ಸಚಿವಾಲಯವನ್ನು ಏಕೀಕೃತ ಹಾಗೂ ಸಮಗ್ರ ಸಚಿವಾಲಯವನ್ನಾಗಿ ರೂಪಿಸುವ ಚಿಂತನೆಯೂ ಪ್ರಧಾನಿ ಮೋದಿ ಮುಂದಿದೆ ಎನ್ನಲಾಗುತ್ತಿದೆ. ಸತತ ಅವಘಡಗಳಿಂದ ಅವಮಾನಕ್ಕೀಡಾದ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಇತ್ತೀಚೆಗಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದು, ಅದಕ್ಕೆ ಮೋದಿ ಅವರು “ಸ್ವಲ್ಪ ತಡೆಯಿರಿ’ ಎಂದಿದ್ದೆಲ್ಲ ಗೊತ್ತೇ ಇದೆ. ಒಂದೆಡೆ, ಪ್ರಭು ಅವರು ರೈಲ್ವೇ ಹೊಣೆಯಿಂದ ಹೊರಗೆ ಕಾಲಿಡಲು ಮುಂದಾಗಿದ್ದರೆ, ಮತ್ತೂಂದೆಡೆ ಸಾರಿಗೆ ಸಚಿವರಾಗಿ ನಿತಿನ್ ಗಡ್ಕರಿ ಅವರು ಮಾಡಿರುವ ಸಾಧನೆ ಪ್ರಧಾನಿ ಮೋದಿ ಅವರ ಮನಗೆದ್ದಿದೆ. ಹೀಗಾಗಿ, ರಸ್ತೆ ಸಾರಿಗೆ ಹಾಗೂ ರೈಲ್ವೇ ಎರಡೂ ಸಚಿವಾಲಯಗಳ ಹೊಣೆಯನ್ನು ಗಡ್ಕರಿ ಅವರಿಗೆ ಹೊರಿಸುವ ಬಗ್ಗೆ ಮೋದಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇಂಥ ಪರಿಕಲ್ಪನೆಯೂ ದೇಶಕ್ಕೆ ಹೊಸದಲ್ಲ. ಇದೂ ರಾಜೀವ್ ಗಾಂಧಿ ಅವರ ಕಾಲದಲ್ಲಿ ಆಗಿ ಹೋಗಿದೆ. 1985ರಲ್ಲಿ “ಸೂಪರ್ ಸಾರಿಗೆ ಸಚಿವಾಲಯ’ ರಚಿಸಿದ ಹೆಗ್ಗಳಿಕೆ ರಾಜೀವ್‌ರದ್ದು. ಆಗ ಅದರ ಹೊಣೆಯನ್ನು ಹರಿಯಾಣದ ಬನ್ಸಿ ಲಾಲ್ ವಹಿಸಿದ್ದರು. ಲಾಲ್ ಅವರ ಕೆಳಗೆ ಸಹಾಯಕ ಸಚಿವರಾಗಿ ಜಗದೀಶ್ ಟೈಟ್ಲರ್ (ನಾಗರಿಕ ವಿಮಾನಯಾನ), ರಾಜೇಶ್ ಪೈಲಟ್ (ರಸ್ತೆ ಸಾರಿಗೆ) ಮತ್ತು ಮಾಧವ್ ರಾವ್ ಸಿಂಧಿಯಾ (ರೈಲ್ವೇ) ಕಾರ್ಯನಿರ್ವಹಿಸಿದ್ದರು.
ರಾಜೀವ್ ಗಾಂಧಿ ಹಾದಿಯಲ್ಲಿ ಮೋದಿ
ಅದು 1986ರ ಅಕ್ಟೋಬರ್ ತಿಂಗಳು. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಸಂಪುಟ ಪುನಾರಚನೆ ಮಾಡುವ ಸಿದ್ಧತೆಯಲ್ಲಿದ್ದಾರೆ ಎಂಬ ಗುಸು ಗುಸು ಹಬ್ಬಿತ್ತು. ಆದರೆ, ಯಾರು, ಏನು ಎತ್ತ ಎಂಬ ಮಾಹಿತಿ ಹೊರಬಿದ್ದಿರಲಿಲ್ಲ. ರಾಜೀವ್ ಅವರು ತನ್ನ ಚೇಂಬರ್‌ನಲ್ಲಿ ಕುಳಿತು, ಒಬ್ಬೊಬ್ಬರೇ ಸಚಿವರನ್ನು ಒಳಗೆ ಆಹ್ವಾನಿಸುತ್ತಿದ್ದರು. ಒಳಗೇನು ನಡೆಯುತ್ತಿದೆ ಎಂಬುದು ಹೊರಗಿನವರಿಗೆ ಗೊತ್ತಾಗುತ್ತಿರಲಿಲ್ಲ. ಒಳಗೆ ಬಂದ ಸಚಿವರಿಂದ ಖಾಲಿ ಹಾಳೆಯೊಂದರಲ್ಲಿ ರಾಜೀನಾಮೆ ಬರೆಯುವಂತೆ ರಾಜೀವ್ ಸೂಚಿಸುತ್ತಿದ್ದರು. ಅದರಂತೆ, ಸಚಿವರು ತ್ಯಾಗಪತ್ರ ಬರೆದು ಹೊರ ನಡೆಯುತ್ತಿದ್ದರು. ಅದು ರಾಜೀವ್ ಗಾಂಧಿ ಅವರು 1986ರಲ್ಲಿ ನಡೆಸಿದ 2ನೇ ಪ್ರಮುಖ ಸಂಪುಟ ಪುನಾರಚನೆಯಾಗಿತ್ತು. ಅದಾಗಿ ಈಗ 3 ದಶಕಗಳೇ ಕಳೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರೂ ಈಗ ರಾಜೀವ್ ಹಾದಿಯಲ್ಲೇ ಸಾಗುತ್ತಿರುವುದು ಕಾಣುತ್ತಿದೆ.
ಈ ಬಾರಿಯ ಸಂಪುಟ ವಿಸ್ತರಣೆಯ ಕಸರತ್ತಿನಲ್ಲಿ ಮೋದಿ “ರಾಜೀವ್ ಮಾದರಿ’ಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲೂ ಪ್ರಧಾನಿ ಮೋದಿ, ಒಬ್ಬೊಬ್ಬರೇ ಸಚಿವರಿಗೆ ಆಹ್ವಾನ ಕೊಟ್ಟು ರಾಜೀನಾಮೆ ಪಡೆದಿದ್ದಾರೆ. ರಾಜೀವ್ ಅವರಂತೆಯೇ ಮೋದಿ ಅವರೂ ಪ್ರತಿಯೊಬ್ಬ ಸಚಿವರ ಸಾಧನೆ, ಕಾರ್ಯಕ್ಷಮತೆ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಸಾಧನೆಯ ಆಧಾರದಲ್ಲಿ ಯಾರನ್ನು ಸಂಪುಟದಲ್ಲಿ ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬ ನಿರ್ಧಾರ ಕೈಗೊಂಡಿದ್ದಾರೆ.
ಅಂಗಪಕ್ಷಗಳು ಹೇಳ್ಳೋದೇನು?
ಜೆಡಿಯು: ನಮ್ಮ ಸಂಸದರೆಲ್ಲ ದಿಲ್ಲಿ ಯಲ್ಲಿದ್ದಾರೆ. ಎನ್‌ಡಿಎಯಲ್ಲಿ ಸಚಿವ ಸ್ಥಾನ ಪಡೆಯುವ ವಿಷಯ ಸಂಬಂಧ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಗಳು ಇಲ್ಲ. ಆದರೆ, ರವಿವಾರ ಬೆಳಗ್ಗೆ ಸಂಪುಟ ಪುನಾರಚನೆ ಆಗುತ್ತದೆ ಎಂದು ಹೇಳಲಾಗುತ್ತಿದ್ದರೂ ಇನ್ನೂ ನಮ್ಮೊಂದಿಗೆ ಕೇಂದ್ರ ಸರಕಾರ ಯಾವುದೇ ಮಾತುಕತೆ ನಡೆಸಿಲ್ಲ.
ಶಿವಸೇನೆ: ಸಂಪುಟ ವಿಸ್ತರಣೆ ವಿಚಾರ ನನಗೆ ಗೊತ್ತಾಗಿದ್ದೇ ಮಾಧ್ಯಮಗಳ ಮೂಲಕ. ನಾವೇನೂ ಕೇಂದ್ರ ನಾಯಕತ್ವ ದೊಂದಿಗೆ ಈ ಬಗ್ಗೆ ಪ್ರಶ್ನಿಸಲೂ ಹೋಗಿಲ್ಲ. ಕೇಂದ್ರ ಸರಕಾರವೂ ನಮ್ಮೊಂದಿಗೆ ಯಾವುದೇ ವಿಚಾರ ಪ್ರಸ್ತಾವಿಸಿಲ್ಲ. ಅಧಿಕಾರದ ಆಸೆಯೂ ನಮಗಿಲ್ಲ. ಕೇಂದ್ರದಲ್ಲಿ ಎಲ್ಲರೂ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿಯಾಗಿ ದ್ದಾರೆ. ಆದರೆ ನಾವು ಮಳೆಗೆ ಸಿಲುಕಿದ ಮುಂಬಯಿ ಜನತೆಯ ಆರೋಗ್ಯದ ಕಡೆ ಗಮನಹರಿಸುತ್ತಿದ್ದೇವೆ.
ಎಐಎಡಿಎಂಕೆ: ಪಕ್ಷದ ಆಂತರಿಕ ಬಿಕ್ಕಟ್ಟು ಮುಂದುವರಿದಿರುವ ಕಾರಣ, ಕೇಂದ್ರ ಸಂಪುಟ ಸೇರುವ ಕುರಿತು ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಆದರೆ ತಂಬಿದೊರೈ ಅವರು ಅಮಿತ್ ಶಾ ಅವರ ಜತೆ ಸಂಪರ್ಕ ದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹಣಕಾಸು ಅಕ್ರಮ: ಸಚಿವರೊಬ್ಬರಿಗೆ ಕೊಕ್
ಹಣಕಾಸು ಅಕ್ರಮದಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇರೆಗೆ ಓರ್ವ ಸಚಿವರನ್ನು ಕೈಬಿಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಆದರೆ, ಆ ಸಚಿವ ಯಾರು ಎಂಬ ವಿಚಾರ ಮಾತ್ರ ಬಹಿರಂಗಗೊಂಡಿಲ್ಲ. ಇತ್ತೀಚೆಗೆ ಸಿಬಿಐ ನಡೆಸಿದ ದಾಳಿಯೊಂದರಲ್ಲಿ ನಾಲ್ವರನ್ನು ಬಂಧಿಸ ಲಾಗಿತ್ತು. ಬಂಧಿತರು ವಿಚಾರಣೆ ವೇಳೆ ಸಚಿವರೊಬ್ಬರ ಲಿಂಕ್ ಬಗ್ಗೆ ಬಾಯಿಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಂಡಾ ಮಂಡಲರಾಗಿರುವ ಮೋದಿ, ಆ ಸಚಿವನನ್ನು ಕೈಬಿಡಲು ನಿರ್ಧರಿಸಿದ್ದಾರೆ. ಈಗಾಗಲೇ ಸಿಬಿಐ ಹಾಗೂ ಗುಪ್ತಚರ ಏಜೆನ್ಸಿಗಳು ಆ ಸಚಿವರ ಫೋನ್ ಕದ್ದಾಲಿಸಿ, ಅವರ ಹಣಕಾಸು ಅಕ್ರಮ ಕುರಿತು ಮಾಹಿತಿ ಕಲೆ ಹಾಕಿವೆ ಎಂದು ವರದಿ ಹೇಳಿದೆ. ಆದರೆ, ಫೋನ್ ಕದ್ದಾಲಿಕೆ ವಿಚಾರವನ್ನು ಸಿಬಿಐ ತಳ್ಳಿಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
GDP: ಈ ವರ್ಷ ಶೇ.6.4ರಷ್ಟು ಜಿಡಿಪಿ ಪ್ರಗತಿ ನಿರೀಕ್ಷೆ: 4 ವರ್ಷಗಳ ಕನಿಷ್ಠ
Car Crash: ಕಾರು ರೇಸ್ ತರಬೇತಿ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.