ಜೆಡಿಎಸ್‌ ನಿರ್ಣಾಯಕ ಆಟದಲ್ಲಿ ಕಾಂಗ್ರೆಸ್‌ಗೆ ಸಂಕಟ, ಬಿಜೆಪಿಗೆ ಆಸೆ


Team Udayavani, Sep 3, 2017, 10:54 AM IST

BBMP_1.jpg

ಬೆಂಗಳೂರು: ಸುಳ್ಳು ದಾಖಲೆ ನೀಡಿ ಟಿಎ-ಡಿಎ ಪಡೆದ ಪ್ರಕರಣದಲ್ಲಿ ಎಂಟು ವಿಧಾನಪರಿಷತ್‌ ಸದಸ್ಯರ ನೆತ್ತಿ ಮೇಲೆ ತೂಗು ಕತ್ತಿ ತೂಗುತ್ತಿರುವ ನಡುವೆಯೇ ಬಿಬಿಎಂಪಿ ನೂತನ
ಮೇಯರ್‌-ಉಪ ಮೇಯರ್‌ ಚುನಾವಣೆಯಲ್ಲಿ ಮತ್ತೂಮ್ಮೆ “ನಂಬರ್‌ಗೇಮ್‌’ ಪ್ರಾರಂಭವಾಗಿದೆ.

ಇದೇ ತಿಂಗಳು ಸೆ.25 ರಂದು ಹಾಲಿ ಮೇಯರ್‌-ಉಪಮೇಯರ್‌ ಅವಧಿ ಮುಗಿಯಲಿದ್ದು, ಕಿಂಗ್‌ ಮೇಕರ್‌ ಆಗಿರುವ ಜೆಡಿಎಸ್‌, ಮತ್ತೂಂದು ಅವಧಿಗೆ ಕಾಂಗ್ರೆಸ್‌ ಜತೆ ಮೈತ್ರಿ ಮುಂದು ವರಿಸುವುದೋ, ಬಿಜೆಪಿ ಜತೆ ಹೋಗುವುದೋ ಅಥವಾ ತಟಸ್ಥವಾಗಿ ಉಳಿವುದೋ ಎಂಬ ಜಿಜ್ಞಾಸೆಯಲ್ಲಿದೆ.

ಜೆಡಿಎಸ್‌ ತಟ ಸ್ಥವಾದರೆ ಅಧಿಕಾರ ಹಿಡಿಯುವ ದಾರಿ ಸುಲಭವಾಗುವುದರಿಂದ ಬಿಜೆಪಿಯಲ್ಲೂ ಆಸೆ ಚಿಗುರೊಡೆದಿದೆ. ಆದರೆ, ಪಕ್ಷೇತರರ ಬೆಂಬಲಇರುವುದ ರಿಂದ ಜೆಡಿಎಸ್‌ ಜತೆ ಮತ್ತೂಮ್ಮೆ ಸಂಬಂಧ ಕುದುರಿಸಿಕೊಳ್ಳಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ರಂಗ ಪ್ರವೇಶ ಮಾಡುವ ಸಾಧ್ಯತೆಗಳೂ ಇಲ್ಲದಿಲ್ಲ.

ಈ ಮಧ್ಯೆ, ಟಿಎ-ಡಿಎ ಪ್ರಕರಣದ ನಂತರ ಬೆಂಗಳೂರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದ ಡಾ.ಜಿ.ಪರಮೇಶ್ವರ್‌, ಬೋಸರಾಜ್‌, ಆರ್‌.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಂ.ಡಿ.ಲಕ್ಷ್ಮಿನಾರಾಯಣ್‌ ಮತ್ತೆ ವಿಳಾಸಬದಲಾಯಿಸಿ ಕೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನ ಬಲದಲ್ಲಿ ಇಳಿಮುಖವಾಗಿದೆ. ಆದರೆ, ಹೊಸದಾಗಿ ಸಿ.ಎಂ.ಇಬ್ರಾಹಿಂ, ಪಿ.ಆರ್‌.ರಮೇಶ್‌ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್‌ನಿಂದ ರಮೇಶ್‌ಬಾಬು ಸೇರಿದ್ದಾರೆ.

ಈಗಿನ ಲೆಕ್ಕಾಚಾರದ ಪ್ರಕಾರ ಬಿಬಿಎಂಪಿಯಲ್ಲಿ ಮೇಯರ್‌-ಉಪ ಮೇಯರ್‌ ಚುನಾವಣೆಗೆ ಪಾಲಿಕೆ ಸದಸ್ಯರು, ಶಾಸಕರು-ಸಂಸದರು ಸೇರಿ ಮತದಾನ ಮಾಡಲು 266 ಸದಸ್ಯರಿಗೆ ಹಕ್ಕು ಇದೆ. ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರರು ಸೇರಿ 140 ಸಂಖ್ಯಾ ಬಲ ಆಗಲಿದ್ದು, ಬಿಜೆಪಿ ಯದು 126 ಆಗಲಿದೆ.

ಈ ಮಧ್ಯೆ, ಹಾಲಿಮತದಾರರ ಪಟ್ಟಿಯಲ್ಲಿರುವವರವಿರುದ್ಧವೂ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿತಕರಾರು ತೆಗೆದು ಚುನಾವಣಾ ಆಯೋಗಕ್ಕೆ ಹೋಗಿರುವುದರಿಂದ ಮತದಾನ ದಿನದವರೆಗೂ ಲೆಕ್ಕಾಚಾರ ಏರು ಪೇರಾದರೂ ಆಶ್ಚರ್ಯವಿಲ್ಲ.

ಈ ನಡುವೆ “ಕಿಂಗ್‌ ಮೇಕರ್‌’ ಆಗಿರುವ ಜೆಡಿಎಸ್‌, ಕಾಂಗ್ರೆಸ್‌ ಜತೆ ಮತ್ತೆ ಹೋಗಬೇಕೇ, ಬಿಜೆಪಿಗೆ ಬೆಂಬಲ ಕೊಡಬೇಕೇ? ಇಲ್ಲವೇ ತಟಸ್ಥವಾಗಿರ ಬೇಕೇ ಎಂಬ ಜಿಜ್ಞಾಸೆಯಲ್ಲಿದೆ. ಈ ಬಾರಿ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರದೇ ಅಂತಿಮ ತೀರ್ಮಾನವಾದರೆ ತಟಸ್ಥವಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ದೇವೇಗೌಡರನ್ನು ಭೇಟಿ ಅಥವಾ ದೂರವಾಣಿ ಮೂಲಕ ಮಾತನಾಡಿ ಮಾತು ಕತೆ ನಡೆಸಿ ಮನವೊಲಿಸಿದರೆ ಮೂರನೇ ಬಾರಿ ಮೈತ್ರಿ ಮುಂದು ವರಿಯಲು ಸಾಧ್ಯ, ಆದರೆ, ಇತ್ತೀಚೆಗೆ ಗೌಡರು ನಾವೇನು ಕಾಂಗ್ರೆಸ್‌ಗೆ ಬಾಂಡ್‌ ಬರೆ ದುಕೊಟ್ಟಿಲ್ಲ ಎಂದು ಹೇಳಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ.

ನಗರದಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಅನಾಹುತ, ಸಂಚಾರ ದಟ್ಟಣೆ ಸಮಸ್ಯೆಗಳ ಬಗ್ಗೆ ನಾಗಕರಿಕರ ಆಕ್ರೋಶ ಹೆಚ್ಚಾಗಿರುವುದರಿಂದ ಕಾಂಗ್ರೆಸ್‌ ಜತೆ ಭಾಗಿಯಾಗುವುದು ಬೇಡ ಎಂಬುದು ಕುಮಾರಸ್ವಾಮಿಯವರ ಆಲೋಚನೆ ಎಂದು ಹೇಳಲಾಗಿದೆ.

ಚುನಾವಣೆ ವರ್ಷ ಇರುವ ಸಂದರ್ಭದಲ್ಲಿ ಪಾಲಿಕೆಯಲ್ಲಿ ಆಧಿಕಾರ ಹಿಡಿದು ರಾಜ್ಯ ಸರ್ಕಾರ ದಿಂದ ಯಾವುದೇ ಅನುದಾನ ದೊರಕದೆ ಸಮಸ್ಯೆಯಾದರೆ ಜನತೆ ಆಕ್ರೋಶ ತಮ್ಮ ಮೇಲೆ ತಿರುಗಬಹುದು ಎಂಬ ಆತಂಕ ಬಿಜೆಪಿಯದು. ಇಷ್ಟರ ನಡುವೆಯೂ ಜೆಡಿಎಸ್‌ ತಟಸ್ಥವಾಗಿದ್ದು ತಾನಾಗಿಯೇ ಅಧಿಕಾರ ಬರುವುದಾದರೆ ಬೇಡ ಎನ್ನುವ ಸ್ಥಿತಿ ಯಲ್ಲಿ ಬಿಜೆಪಿ ನಾಯಕರಂತೂ ಇಲ್ಲ.

ವಿಧಾನಸಭೆ ಚುನಾವಣೆ ಹತ್ತಿರ ಇರುವುದರಿಂದ ರಾಜಧಾನಿಯ ಮತದಾರರ ಓಲೈಸಿಕೊಳ್ಳುವುದು ಮೂರೂ ಪಕ್ಷಗಳಿಗೆ ಅನಿವಾರ್ಯ. ಹೀಗಾಗಿ, ಬಿಬಿಎಂಪಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ತೆರೆಮರೆಯಲ್ಲಿ ಸಾಕಷ್ಟು ಪುಯತ್ನಗಳು ನಡೆಯುತ್ತಿವೆ.

ಎಸ್‌. ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Bengaluru: ಸೆಂಟ್ರಿಂಗ್‌ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್‌ ವಶಕ್ಕೆ

Bengaluru: ಸೆಂಟ್ರಿಂಗ್‌ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್‌ ವಶಕ್ಕೆ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.