ಡೆಂಗ್ಯೂನಿಂದ ಬಚಾವಾಗಲು ಲೈಟ್ಗಳನ್ನು ಆಫ್ ಮಾಡಿ!
Team Udayavani, Sep 3, 2017, 11:05 AM IST
ಹೊಸದಿಲ್ಲಿ : ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಕಾಯಿಲೆಗಳನ್ನು ಹರಡುವ ಸೊಳ್ಳೆಗಳು ಹಗಲಿನಲ್ಲಿ ಮಾತ್ರ ಕಚ್ಚುತ್ತವೆ ಎಂಬ ನಂಬಿಕೆ ಇಷ್ಟು ದಿನ ನಮ್ಮಲ್ಲಿತ್ತು. ಆದರೆ ಅದು ಸುಳ್ಳು ಎಂಬುದು ಇದೀಗ ಸಾಬೀತಾಗಿದೆ. ಈ ಸೊಳ್ಳೆಗಳು ರಾತ್ರಿ ವೇಳೆಯೂ ಕಚ್ಚುತ್ತವೆ ಹಾಗೂ ಆಗಲೂ ಇವು ಸೋಂಕು ಹರಡುತ್ತವೆ ಎಂದು ದಿಲ್ಲಿಯ ಇಂಟರ್ನ್ಯಾಶನಲ್ ಸೆಂಟರ್ ಫಾರ್ ಜೆನೆಟಿಕಲ್ ಎಂಜಿನಿಯರಿಂಗ್ ಮತ್ತು ಬಯೋ ಟೆಕ್ನಾಲಜಿ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.
ಡೆಂಗ್ಯೂ ಹರಡುವ ಸೊಳ್ಳೆ ಸೂರ್ಯ ಉದಯಿಸಿದ 2 ಗಂಟೆಗಳ ತರುವಾಯ ಚಟುವಟಿಕೆ ಆರಂಭಿಸುತ್ತದೆ. ಸೂರ್ಯ ಮುಳುಗುವ ಹಿಂದಿನ ಕೆಲ ಗಂಟೆಗಳ ಕಾಲ ಇವು ಚಟುವಟಿಕೆಯಿಂದಿರುತ್ತವೆ. ಈ ಸಮಯದಲ್ಲಿ ಈ ಸೊಳ್ಳೆಗಳು ಕಚ್ಚುವ ಸಂಭವ ಹೆಚ್ಚಿರುತ್ತದೆ. ಆದರೆ ರಾತ್ರಿ ವೇಳೆ ಸಾಕಷ್ಟು ಬೆಳಕಿರುವ ಪ್ರದೇಶದಲ್ಲೂ ಈ ಸೊಳ್ಳೆಗಳು ಚಟುಟಿಕೆಯಿಂದ ಇದ್ದು, ಜನರಿಂದ ರಕ್ತ ಹೀರುತ್ತದೆ. ಡೆಂಗ್ಯೂ ಸೊಳ್ಳೆ ಹೆಚ್ಚಾಗಿ ನೆಲಮಟ್ಟದಿಂದ ಸ್ವಲ್ಪವೇ ಎತ್ತರದಲ್ಲಿ ಹಾರಾಡುತ್ತವೆ. ಇವು ಕಾಲಿನ ಮಂಡಿಯಿಂದ ಕೆಳಭಾಗವನ್ನು ಕಚ್ಚುತ್ತವೆ. ಮಲೇರಿಯಾ ಕಾರುವ ಏಡಿಸ್ ಈಜಿಪ್ಟಿ ಸೊಳ್ಳೆಗಳು ಹಗಲು ಮತ್ತು ರಾತ್ರಿ ಚಟುವಟಿಕೆಯಿಂದ ಇರುತ್ತವೆ. ಆದ್ದ ರಿಂದ ಇವು ಎಲ್ಲಾ ಸಮಯದಲ್ಲೂ ಆಹಾರ ಸೇವನೆ (ರಕ್ತ ಹೀರು ವಿಕೆ) ಮಾಡುತ್ತವೆ. ಆಹಾರ ಸೇವಿಸಿದ ಬಳಿಕ ಚಟುವಟಿಕೆ ನಿಲ್ಲಿಸಿ ಕತ್ತಲಿನಲ್ಲಿ ನಿಷ್ಕ್ರಿಯ ವಾಗಿ ಕುಳಿತುಬಿಡುತ್ತವೆ ಎಂದಿದೆ ವರದಿ.
ತಡೆಗಟ್ಟುವುದು ಹೇಗೆ?: ಸಾಧ್ಯವಾ ದಷ್ಟು ರಾತ್ರಿ ವೇಳೆ ಮನೆ ಅಥವಾ ಕಚೇರಿಯಲ್ಲಿ ಬೆಳಕು ಕಡಿಮೆಯಿರುವಂತೆ ನೋಡಿಕೊಳ್ಳುವುದು. ರಾತ್ರಿ ವೇಳೆ ಪ್ರಖರ ಬೆಳಕಿರುವ ಆಟದ ಮೈದಾನ, ರಸ್ತೆಗಳಲ್ಲಿ ಓಡಾಡುವಾಗ ಸೊಳ್ಳೆ ಕಡಿತದ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳುವುದು. ಆದಷ್ಟು ಸಡಿಲವಾದ ಪೈಜಾಮ ತೊಡುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.