200ಕ್ಕೂ ಹೆಚ್ಚು “ಬ್ರಾಂಡ್’ ರದ್ದತಿಗೆ ಮನವಿ
Team Udayavani, Sep 3, 2017, 12:40 PM IST
ಬೆಂಗಳೂರು: ಜಿಎಸ್‌ಟಿಯಡಿ ಬ್ರಾಂಡ್ ಹೊಂದಿರುವ ಆಹಾರ ಧಾನ್ಯ, ಪದಾರ್ಥಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿರುವ ಹಿನ್ನೆಲೆ ಯಲ್ಲಿ ರಾಜ್ಯದಲ್ಲಿ 50ಕ್ಕೂ ಹೆಚ್ಚು ಬ್ರಾಂಡ್ ನೋಂದಣಿದಾರರು ಹಾಗೂ 150ಕ್ಕೂ ಹೆಚ್ಚು ಬ್ರಾಂಡ್ ನೋಂದಣಿಗೆ ಅರ್ಜಿಸಲ್ಲಿಸಿದವರು ರದಟಛಿತಿ ಕೋರಿ ಪ್ರಸ್ತಾವ ಸಲ್ಲಿಸಿದ್ದಾರೆ.
ಬ್ರಾಂಡೆಡ್ ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿರುವುದರಿಂದ ರಾಜ್ಯದಲ್ಲಿ ಅಕ್ಕಿ ವಹಿವಾಟು ಶೇ.50ರಷ್ಟು ಇಳಿಕೆಯಾಗಿದೆ. ಇದರಿಂದಾಗಿ ಬ್ರಾಂಡ್ ಹೊಂದಿರುವ ಉತ್ಪಾದಕರು, ವಿತರಕರು ಬ್ರಾಂಡ್‌ರಹಿತವಾಗಿ ಅದೇ ಅಕ್ಕಿ ಮಾರಾಟ ಮಾಡಲಾರಂಭಿಸಿದ್ದು, ಸದ್ಯ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಬ್ರಾಂಡ್‌ರಹಿತ ಅಕ್ಕಿ
ಪ್ರಮಾಣ ಶೇ.90ಕ್ಕಿಂತಲೂ ಹೆಚ್ಚು ಇದೆ ಎಂದು ಅಕ್ಕಿ ಗಿರಣಿ ಮಾಲೀಕರು ತಿಳಿಸಿದ್ದಾರೆ.
ಜಿಎಸ್‌ಟಿ ಜಾರಿಯಾಗಿ ಎರಡು ತಿಂಗಳು ಕಳೆಯುತ್ತಿದ್ದು, ಅದರ ಪರಿಣಾಮಗಳ ವಿಶ್ಲೇಷಣೆ ನಡೆದಿದೆ. ಆಹಾರ ಉತ್ಪನ್ನ,
ಪದಾರ್ಥಗಳ ಮೇಲೆ ತೆರಿಗೆ ವಿಧಿಸಿದರೆ ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಬ್ರಾಂಡೆಡ್ ಪದಾರ್ಥಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿದೆ. ಇದರಿಂದ ಬ್ರಾಂಡೆಡ್ ಆಹಾರ ಪದಾರ್ಥಗಳ ವಹಿವಾಟು ಏರುಪೇರಾಗಿದೆ.
ಬ್ರಾಂಡ್ ರದಟಛಿತಿಗೆ ಪ್ರಸ್ತಾವ ಹೆಚ್ಚಳ: ಬ್ರಾಂಡೆಡ್ ಆಹಾರ ಪದಾರ್ಥಗಳಿಗೆ ಶೇ.5ರಷ್ಟು ತೆರಿಗೆ ವಿಧಿಸುತ್ತಿರುವುದರಿಂದ ಬ್ರಾಂಡ್ ನೋಂದಣಿ ರದಟಛಿತಿಗೆ ಸಾಕಷ್ಟು ಸಂಸ್ಥೆಗಳು ಪ್ರಸ್ತಾವ ಸಲ್ಲಿಸಲಾರಂಭಿಸಿವೆ. ಆ.28ರವರೆಗೆ ರಾಜ್ಯದಿಂದ 50ಕ್ಕೂ ಹೆಚ್ಚು ಬ್ರಾಂಡ್ ನೋಂದಾಯಿತ ಸಂಸ್ಥೆಗಳು ರದಟಛಿತಿಗೆ ಮನವಿ ಸಲ್ಲಿಸಿವೆ. ಅದೇರೀತಿ ಈ ಹಿಂದೆ ಬ್ರಾಂಡ್
ನೋಂದಣಿಗೆ ಅರ್ಜಿ ಸಲ್ಲಿಸಿ ಅನುಮೋದನೆ ನಿರೀಕ್ಷೆಯಲ್ಲಿದ್ದವರ ಪೈಕಿ 150 ಮಂದಿ ಪ್ರಸ್ತಾವ ಹಿಂಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
ಚೆನ್ನೈನಲ್ಲಿರುವ ಟ್ರೇಡ್ ಮಾರ್ಕ್ ನೋಂದಣಿ ಕಚೇರಿಗೆ ದಿನ ಕಳೆದಂತೆ ಟ್ರೇಡ್ ಮಾರ್ಕ್ ನೋಂದಣಿ ರದಟಛಿತಿ ಮನವಿಗಳು ಹೆಚ್ಚಾಗುತ್ತಿವೆ. ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಿಂದ ಆ.28ರವರೆಗೆ ಒಟ್ಟು 176 ಸಂಸ್ಥೆಗಳು ಬ್ರಾಂಡ್ ನೋಂದಣಿ ರದಟಛಿತಿಗೆ ಮನವಿ ಸಲ್ಲಿಸಿವೆ. ಹಾಗೆಯೇ 740 ಸಂಸ್ಥೆಗಳು ಬ್ರಾಂಡ್ ನೋಂದಣಿಗೆ ಸಲ್ಲಿಸಿದ ಪ್ರಸ್ತಾವ ಕೈಬಿಡುವಂತೆ ಕೋರಿವೆ.
ಸೆ. 9ರ ಸಭೆ ನಿರ್ಣಾಯಕ: ಬ್ರಾಂಡ್ ಹೊಂದಿರುವ ಆಹಾರ ಧಾನ್ಯ, ಪದಾರ್ಥಗಳಿಗೆ ಜಿಎಸ್‌ಟಿಯಡಿ ಶೇ.5ರಷ್ಟು
ತೆರಿಗೆ ವಿಧಿಸಿರುವುದರಿಂದ ವಹಿವಾಟಿನಲ್ಲಿ ವ್ಯತ್ಯಯವಾಗಿದೆ. ಈ ಸಂಬಂಧ ಸಾಕಷ್ಟು ಉದ್ದಿಮೆದಾರರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸೆ.9ರ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸ್ಪಂದನೆಯ ನಿರೀಕ್ಷೆಯಲ್ಲಿದ್ದಾರೆ. ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಕಚೇರಿಯೂ ರದಟಛಿತಿ ಕೋರಿ ಎಷ್ಟೇ ಮನವಿ ಬಂದರೂ ತರಾತುರಿಯಲ್ಲಿ ಅನುಮೋದಿಸುವ ಬದಲಿಗೆ
ಸೆ.9ರ ಸಭೆ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ.
ಶೇ.50 ಕುಸಿತ: ಟ್ರೇಡ್ ಮಾರ್ಕ್ ನೋಂದಣಿಯಾಗಿರುವ ಆಹಾರ ಧಾನ್ಯ, ಪದಾರ್ಥಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಿರುವುದರಿಂದ ಅಕ್ಕಿ ಸೇರಿ ಇತರೆ ಆಹಾರ ಪದಾರ್ಥದ ವಹಿವಾಟಿ ನಲ್ಲಿ ಭಾರಿ ಕುಸಿತ ಉಂಟಾಗಿದೆ ಎಂದು
ಉತ್ಪಾದಕರು ಅಳಲು ತೋಡಿಕೊಂಡಿದ್ದಾರೆ. ಅಕ್ಕಿ ವಹಿವಾಟಿನಲ್ಲಿ ಶೇ.50ರಷ್ಟು ಕುಸಿತವಾಗಿದೆ ಎಂದು ಅಕ್ಕಿ ಗಿರಣಿ ಮಾಲೀಕರು ತಿಳಿಸಿದ್ದಾರೆ. ರಾಜ್ಯದಲ್ಲಿ 400ಕ್ಕೂ ಹೆಚ್ಚು ಬ್ರಾಂಡಿನ ಅಕ್ಕಿಗಳಿದ್ದು, ಜಿಎಸ್‌ಟಿಯಿಂದಾಗಿ ಉದ್ಯಮಕ್ಕೆ
ಹೊಡೆತ ಬಿದ್ದಿದೆ. ಇದರಿಂದ ಶೇ.90ಕ್ಕಿಂತ ಹೆಚ್ಚು ಉತ್ಪಾದಕರು, ವಿತರಕರು ಬ್ರಾಂಡ್‌ರಹಿತವಾಗಿ ಅಕ್ಕಿ ಮಾರಾಟ ಮಾಡಲಾರಂಭಿಸಿದ್ದಾರೆ. ಬ್ರಾಂಡ್‌ರಹಿತವಾಗಿ ಅದೇ ಗುಣಮಟ್ಟದ ಅಕ್ಕಿ ನೀಡಿದರೂ ಗ್ರಾಹಕರು ಅನುಮಾನದಿಂದ
ನೋಡುತ್ತಿದ್ದಾರೆ. ಬ್ರಾಂಡ್ ನೋಂದಣಿ ರದಟಛಿತಿ ಕೋರಿದ್ದರೂ ಅನುಮತಿ ಸಿಗುತ್ತಿಲ್ಲ ಎಂದು ಅಕ್ಕಿ ಗಿರಣಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.