ವಾಹನಗಳ ಢಿಕ್ಕಿ: ಓರ್ವ ಸಾವು
Team Udayavani, Sep 4, 2017, 9:00 AM IST
ಉಪ್ಪಿನಂಗಡಿ :, ಸೆ.3: ಇಲ್ಲಿಗೆ ಸಮೀಪದ ಕಣಿಯೂರು ಗ್ರಾಮದ ಪಿಲಿಗೂಡುವಿನಲ್ಲಿ ರವಿವಾರ ಸಂಜೆ ದ್ವಿ ಚಕ್ರ ವಾಹನ ಹಾಗೂ ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆಕ್ಟೀವಾ ಸವಾರ ಮೃತಪಟ್ಟಿದ್ದು ಸಹಸವಾರೆ ಗಾಯಗೊಂಡಿದ್ದಾರೆ.
ಕಾರ್ಕಳ ತಾಲೂಕು ಮೂಜೂರು ಗ್ರಾಮದ ಮಂಗಳ ಕಲ್ಲು ನಿವಾಸಿ ಶ್ರೀಧರ ಮೂಲ್ಯ (60) ಮೃತಪಟಟÌರು. ಅವರ ಸಹೋದರ ಶ್ರೀನಿವಾಸ್ ಅವರ ಪುತ್ರಿ ಶ್ರೀರಕ್ಷಾ (19) ಗಾಯಗೊಂಡವರು. ಶ್ರೀಧರ ಮೂಲ್ಯ ಶ್ರೀರûಾ ಅವರ ಜತೆಯಾಗಿರಿಸಿ ಉಪ್ಪಿನಂಗಡಿಯಲ್ಲಿನ ಸಂಬಂಧಿಕರ ಮನೆಯಲ್ಲಿ ಮದರಂಗಿ ಶಾಸ್ತ್ರಕ್ಕೆಂದು ಹೊಂಡಾ ಆಕ್ಟೀವಾದಲ್ಲಿ ಸಂಚರಿಸುತ್ತಿದ್ದರು. ಇನ್ನೇನು ಉಪ್ಪಿನಂಗಡಿಗೆ ಸಮೀಪಿಸಬೇಕೆನ್ನುವಷ್ಠರಲ್ಲಿ ಪಿಲಿಗೂಡುವಿನಲ್ಲಿ ವೇಗವಾಗಿ ಬಂದ ಪಿಕಪ್ ವಾಹನ ಇವರಿದ್ದ ಆಕ್ಟೀವಾಕ್ಕೆ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕೆ ಆಕ್ಟೀವಾ ಛಿದ್ರಗೊಂಡು ಅದರಲ್ಲಿದ್ದ ಶ್ರೀಧರ ಮೂಲ್ಯ ತಲೆಗೆ ಗಂಭೀರ ಸ್ವರೂಪದ ಗಾಯ ಪಡೆದು ಸ್ಥಳದಲ್ಲೇ ಸಾವನ್ನಪ್ಪಿದರು. ಹಿಂಬದಿ ಸವಾರೆ ಶ್ರೀರûಾ ಕಾಲಿನ ಮೂಳೆ ಮುರಿತಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮದುವೆ ಮನೆಯಲ್ಲಿ ಶೋಕ ಸಾಗರ
ಉಪ್ಪಿನಂಗಡಿಯ ಕಾಳಿಕಾಂಬಾ ಭಜನಾ ಮಂಡಳಿಯ ಕಾರ್ಯದರ್ಶಿ, ಪುಷ್ಪ ಉದ್ಯಮಿ ಶರತ್ ಕೋಟೆ ಅವರ ವಿವಾಹವು ಮಾಳದ ಯುವತಿಯ ಜತೆ ಸೋಮವಾರ ನಡೆಯಲಿತ್ತು. ರವಿವಾರ ರಾತ್ರಿ ಮದರಂಗಿ ಶಾಸ್ತ್ರ ಯೋಜಿಸಲ್ಪಟ್ಟಿತ್ತು. ಮದುಮಗನ ತಾಯಿಯ ಸಹೋದರ ನಾಗಿದ್ದ ಶ್ರೀಧರ ಮೂಲ್ಯ ಅವರು ಕಾರ್ಯಕ್ರಮಕ್ಕೆ ಬರುತ್ತಿದ್ದಾಗ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ಕಾಗಿ ಸಂಭ್ರಮದಲ್ಲಿದ್ದ ಮನೆ ಶೋಕ ಸಾಗರದಲ್ಲಿ ಮುಳುಗುವಂತಾಯಿತು. ಇದೇ ಕಾರಣಕ್ಕೆ ಸೋಮವಾರ ನಡೆಯಬೇಕಾದ ವಿವಾಹ ಕಾರ್ಯಕ್ರಮವನ್ನು ಮುಂದೂಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.