ಸಮಾಧಾನವೇ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ
Team Udayavani, Sep 4, 2017, 10:34 AM IST
ಕಲಬುರಗಿ: ಆರಂಭದಲ್ಲಿ ರಂಗ ಕಲೆಯಲ್ಲಿ ಆಸಕ್ತಿ ಹೊಂದಿ ನಾಟಕ ಕ್ಷೇತ್ರದಲ್ಲಿ, ನಂತರ ರಾಜಕೀಯ, ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಜತೆಜತೆಗೆ ಕೈಲಾದ ಮಟ್ಟಿಗೆ ಸಾಧನೆ ಮಾಡಲು ಸಮಾಧಾನದ ಮನೋಧೋರಣೆಯೇ
ಕಾರಣವಾಯಿತು ಎಂದು ಹಿರಿಯ ಪತ್ರಕರ್ತ, ಕಸಾಪ ಹಿಂದಿನ ಅಧ್ಯಕ್ಷ ಪಂಚಪ್ಪ ಮಲ್ಲಪ್ಪ ಮಣ್ಣೂರ ಹೇಳಿದರು.
ರವಿವಾರ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲವನ್ನು ಸಮಾಧಾನ ಚಿತ್ತದಿಂದ ಆಲಿಸುವುದಲ್ಲದೇ ಯಾವುದಕ್ಕೂ ದ್ವೇಷ ಹಾಗೂ ಸಿಟ್ಟಿನ ಭಾವನೆಯಿಂದ ಉತ್ತರಿಸದೆ ಮುನ್ನಡೆದು ಬಂದಿದ್ದರಿಂದ ಸಾಧ್ಯವಾದ ಮಟ್ಟಿಗೆ ಈ ನಾಲ್ಕು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಮನದ ಇಂಗಿತ ವ್ಯಕ್ತಪಡಿಸಿದರು.
ನಾಟಕ ಕಲೆ ಮೈಗೂಢಿಸಿಕೊಳ್ಳುವುದು ಹಾಗೂ ನಾಟಕ ಆಡಿಸುವುದು ಎಷ್ಟು ಕಷ್ಟ ಎನ್ನುವುದು ಅನುಭವಿಸುವರಿಗೇ
ಗೊತ್ತು. ನಾಟಕ ಪ್ರದರ್ಶನ ನಡೆಯುವಾಗ ಒಮ್ಮೆ ಕಹಿ ಅನುಭವ ಆಗಿದ್ದರಿಂದ ಬಿಟ್ಟು ಕಲಬುರಗಿಗೆ ಓಡಿ ಬಂದು ಪತ್ರಿಕೋದ್ಯಮ ಕ್ಷೇತ್ರಕ್ಕೆ ಧುಮುಕಿದೆ. ಇದರ ಜತೆಗೆ ಸಾಹಿತ್ಯ, ರಾಜಕೀಯ ಸೇವೆ ಆರಂಭಿಸಿದೆ. ಸಣ್ಣ ಪತ್ರಿಕೆಗಳ ಕಾಲದ ಅವಧಿಯಲ್ಲಿ ಸಾಮಾಜಿಕವಾದ ಪರಿಣಾಮಕಾರಿ ವರದಿಗಳನ್ನು ಮಾಡಿದೆ. ಒಮ್ಮೆ ಮಹಾತ್ಮಾಬಸವೇಶ್ವರ ಕಾಲೋನಿಯಿಂದ ಪಾಲಿಕೆ ಸದಸ್ಯನಾಗಿ ಸೇವೆ ಸಲ್ಲಿಸಿದೆ ಎಂದು ವಿವರಿಸಿದರು.
ಪಾಲಿಕೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದಾಗ ಕಾಂಗ್ರೆಸ್ ಪಕ್ಷದಿಂದ ಡಾ|ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ತಮ್ಮ ವಿರುದ್ಧ ಪ್ರಚಾರ ಮಾಡಲು ವಾರ್ಡ್‌ಗೆ ಬಂದಿರಲಿಲ್ಲ. ಇದನ್ನು ಗಮನಿಸಿದಾಗ ರಾಜಕೀಯಕ್ಕೆ ಪಕ್ಷಕ್ಕಿಂತ ವ್ಯಕ್ತಿತ್ವ ಮುಖ್ಯ ಎನ್ನುವುದು ಅರ್ಥವಾಗುತ್ತದೆ. ಅದೇ ರೀತಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದು ಹೇಳಿದರು.
ಎರಡೆರಡು: ತಮ್ಮದು ಜೀವನ ಕನ್ನಡಿ ಇದ್ದಂತೆ. ತಮ್ಮ ವ್ಯಕ್ತಿತ್ವ ಎಲ್ಲರಿಗೂ ತಿಳಿದ ವಿಷಯ. ನನಗೆ ಇಬ್ಬರು ಹೆಂಡತಿಯರು, ಎರಡು ಪೆನ್ನು, ಎರಡು ಪ್ರಸ್, ಎರಡು ಮನೆ ಇದಕ್ಕಿಂತ ವಿಭಿನ್ನ ಎನ್ನುವಂತೆ ನಾಲ್ಕು ಕ್ಷೇತ್ರದಲ್ಲಿ
ಕೈಲಾದ ಮಟ್ಟಿಗೆ ಸೇವೆ ಮಾಡಿದ್ದೇನೆ. ಎರಡು ಮನೆಗಳಿದ್ದರೂ ಒಮ್ಮೆಯೂ ಜಗಳವಾಗಿಲ್ಲ. ಸ್ವಲ್ಪ ಭಿನ್ನಾಭಿಪ್ರಾಯ ಎದುರಾಗಿದ್ದರೂ ಅದಕ್ಕೆ ಉತ್ತರ ನೀಡದೆ ಮೌನ ವಹಿಸುತ್ತಿದ್ದೆ. ಒಟ್ಟಾರೆ ತಮಗೆ ಎಲ್ಲ ಕಾರ್ಯ ತಮಗೆ ತೃಪ್ತಿ ತಂದಿದೆ
ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿದರು. ದೌಲತರಾವ್ ಪಾಟೀಲ ನಿರೂಪಿಸಿದರು. ಅರ್ಜುನ ಜಮಾದಾರ ವಂದಿಸಿದರು. ಡಾ|ಎಸ್.ಎಸ್.ಗುಬ್ಬಿ, ಬಸವರಾಜ ಪಾರಾ, ಸೂಗಯ್ಯ ಹಿರೇಮಠ, ಸುಬ್ರಾವ್ ಕುಲಕರ್ಣಿ, ಗವೀಶ ಹಿರೇಮಠ, ಶಂಕ್ರಯ್ಯ ಘಂಟಿ, ಡಾ| ವಾಸುದೇವ ಸೇಡಂ, ಸಿ.ಎಸ್. ಮಾಲಿಪಾಟೀಲ, ಡಾ| ವಿಜಯಕುಮಾರ ಪರೂತೆ, ಶಂಕರ ಬಿರಾದಾರ, ಆನಂದ ಮಣ್ಣೂರ ಮುಂತಾದವರಿದ್ದರು.
ಸಮಾಜದ ಸ್ವಾಸ್ಥ್ಯ ಕೆಡಲು ಕಾರಣರಾಗಬೇಡಿ ಈ ಹಿಂದೆ ಪತ್ರಿಕೆ ನಡೆಸುವುದು ಬಲು ಕಷ್ಟದಾಯಕವಾಗಿತ್ತು. ಸುದ್ದಿ ಸಂಗ್ರಹಿಸಿವುದು, ಮಳೆ ಜೋಡಿಸುವುದು, ಪತ್ರಿಕೆ ಮುದ್ರಿಸುವುದು ಹೆರಿಗೆ ಆದ ಅನುಭವದಂತೆ ಇರುತ್ತಿತ್ತು. ಆದರಿಂದು ಕ್ಷಣಾರ್ಧದಲ್ಲಿ ಎಲ್ಲ ಮಾಹಿತಿ ಸಿಗುತ್ತದೆ. ಮುದ್ರಿಸುವುದು ಸುಲಭ. ಹಿಂದೆ ಪತ್ರಿಕೋದ್ಯಮ ಸಮಾಜ ಸೇವೆ ಎಂಬುದಾಗಿದ್ದರೆ, ಇಂದು ಉದ್ಯಮವಾಗಿದೆ. ಕೆಲಸ ಎನ್ನುವುದು ನೌಕರಿ ಆಗಿದೆ. ವಿದ್ಯುನ್ಮಾನ ಬಂದ ನಂತರವಂತೂ ಸುದ್ದಿ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಸಮಾಜ ಸ್ವಾಸ್ಥ ಕೆಡಲು ಪತ್ರಕರ್ತರು ಕಾರಣರಾಗಬಾರದು.
ಪಿ.ಎಂ. ಮಣ್ಣೂರ, ಹಿರಿಯ ಪತ್ರಕರ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.