ಕಟ್ಟರ್ ಹಿಂದು ತ್ವವಾದಿ ಅನಂತಕುಮಾರ್
Team Udayavani, Sep 4, 2017, 11:56 AM IST
ಬೆಂಗಳೂರು: ಕಟ್ಟರ್ ಹಿಂದುತ್ವವಾದಿ, ಆರ್ ಎಸ್‌ಎಸ್‌ನ ಸಕ್ರಿಯ ಸದಸ್ಯ, ವಿವಾದಾತ್ಮಕ ವ್ಯಕ್ತಿ, ಯಾರನ್ನೂ ಲೆಕ್ಕಿಸದೆ ನಿಷ್ಠುರ ನಿಲುವುಗಳನ್ನು ವ್ಯಕ್ತಪಡಿಸುವ ವ್ಯಕ್ತಿ… ಇದು ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಭಾನುವಾರ ಸೇರ್ಪಡೆಯಾಗಿ ಕೌಶಲ್ಯಾಭಿವೃದ್ಧಿ ಖಾತೆಯನ್ನು ಪಡೆದಿರುವ ಅನಂತಕುಮಾರ್ ಹೆಗಡೆ ಬಗ್ಗೆ ರಾಜಕೀಯ ವಲಯದಲ್ಲಿ ಕೇಳಿಬರುವ ಮಾತುಗಳು.
1968ರ ಮೇ 20ರಂದು ಉತ್ತರ ಕನ್ನಡ ಜಿಲ್ಲೆ ಶಿರಸಿಯ ದತ್ತಾತ್ರೇಯ ಹೆಗಡೆ-ಲಲಿತಾ ಹೆಗಡೆ ದಂಪತಿಯ ಪುತ್ರನಾಗಿ ಜನಿಸಿದ ಅನಂತಕುಮಾರ್ ಹೆಗಡೆ, ಶಿರಸಿಯಲ್ಲಿ ಇಂಟರ್‌ಮೀಡಿಯೇಟ್ ಶಿಕ್ಷಣ ಪಡೆದರು. ಆರಂಭದಿಂದಲೂ ಆರ್‌ಎಸ್ ಎಸ್‌ನ ಕಟ್ಟಾ ಅನುಯಾಯಿಯಾಗಿದ್ದ ಅವರು 1996ರಲ್ಲಿ ಮೊದಲ ಬಾರಿ ತಮ್ಮ 28ನೇ ವಯಸ್ಸಿಗೆ ಉತ್ತರ ಕನ್ನಡ (ಆಗಿನ ಕೆನರಾ) ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿ ಸ್ವಾಂತಂತ್ರಾéನಂತರ ಮೊದಲ ಬಾರಿ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ಬರುವಂತೆ ನೋಡಿಕೊಂಡರು. ಲೋಕಸಭೆಯ ಮೊದಲ ಪ್ರವೇಶದಲ್ಲೇ ಅವರು ಹಣಕಾಸು ಸಲಹಾ ಸಮಿತಿ ಹಾಗೂ ವಿದೇಶಾಂಗ ವ್ಯವಹಾರಗಳ ಸಮಿತಿ ಸದಸ್ಯರಾಗಿ ನೇಮಕಗೊಂಡರು. ನಂತರ 1998-99ರಲ್ಲಿ ಪುನರಾಯ್ಕೆಯಾದ ಅವರು ಗೃಹ ವ್ಯವಹಾರಗಳ ಸಮಿತಿ ಮತ್ತು ಅದರ ಸಹ ಸಮಿತಿ ನ್ಯಾಯಾಂಗ ಸುಧಾರಣಾ ಸಮಿತಿಗೆ, ನಂತರದಲ್ಲಿ ಪರಿಸರ ಮತ್ತು ಅರಣ್ಯ ಸಲಹಾ ಸಮಿತಿ, ರಕ್ಷಣಾ ಸಮಿತಿ ಸದಸ್ಯರಾಗಿ ನೇಮಕವಾಗಿದ್ದರು. 2004 ಮತ್ತು 2009ರಲ್ಲೂ ಮರು ಆಯ್ಕೆಯಾಗಿದ್ದ ಅವರು ಲೋಕಸಭೆಯ ಅನೇಕ ಸಮಿತಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು.
2014ರ ಲೋಕಸಭೆ ಚುನಾವಣೆ ವೇಳೆ ಅನಂತಕುಮಾರ್ ಹೆಗಡೆ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡದಂತೆ ಸಾಕಷ್ಟು ಒತ್ತಾಯ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಆಂದೋಲನ ನಡೆದಿತ್ತು. ಇದರ ನಡುವೆಯೂ ಅವರು ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿ ಚುನಾವಣೆಯಲ್ಲಿ ಗೆದ್ದು ತಮ್ಮ ಟೀಕಾಕಾರರಿಗೆ ಉತ್ತರ ನೀಡಿದರು.
ಕೊರಿಯನ್ ಮಾರ್ಷಲ್ ಆರ್ಟ್ ಪ್ರವೀಣ: ಸದ್ಯ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಅನಂತಕುಮಾರ್ ಹೆಗಡೆ ಕೊರಿಯನ್ ಮಾರ್ಷಲ್ ಆರ್ಟ್ ಪ್ರವೀಣ. ಗ್ರಾಮೀಣ ಭಾರತವನ್ನು ಪ್ರತಿಪಾದಿಸುತ್ತಿದ್ದ ಅನಂತ್ ಕುಮಾರ್ ಹೆಗಡೆ, ಗ್ರಾಮೀಣಾಭಿವೃದ್ಧಿ, ಅಲ್ಲಿನ ಜನರ ಆರೋಗ್ಯ, ಗ್ರಾಮೀಣ
ಪ್ರದೇಶದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಕದಂಬ ಎಂಬ ಸ್ವಯಂಸೇವಾ ಸಂಸ್ಥೆಯೊಂದನ್ನು ಹುಟ್ಟುಹಾಕಿದರು. ಈಗಲೂ ಆ ಸಂಸ್ಥೆ ಸಕ್ರಿಯವಾಗಿದೆ.
ವಿವಾದಿತ ವ್ಯಕ್ತಿ: ಆಕ್ರಮಣಕಾರಿ ವ್ಯಕ್ತಿತ್ವದ ಅನಂತಕುಮಾರ್ ಹೆಗಡೆ ಅದರಿಂದಾಗಿಯೇ ವಿವಾದಕ್ಕೂ ಸಿಲುಕಿಕೊಂಡಿದ್ದರು. ಕಟ್ಟರ್ ಹಿಂದುತ್ವ ಪ್ರತಿಪಾದಿಸುತ್ತಿದ್ದ ಅವರ ಭಾಷಣ ಗಳು ವಿವಾದಗಳಿಗೆ ಕಾರಣವಾಗಿವೆ. ಹಿಂದೂಗಳ ಮೇಲೆ ದೌರ್ಜನ್ಯ ನಡೆದಾಗ ಏಕಾಂಗಿಯಾಗಿ ಅದರ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಿದ್ದರು. ಈ ಕಾರಣದಿಂದಲೇ ಅವರು ಸ್ವಜಾತಿಯವರಿಗಿಂತ ಇತರರಿಗೆ ಹೆಚ್ಚು ಪ್ರೀತಿಪಾತ್ರರಾದರು. ಆದರೂ ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.