ಹಿರಿಯರ ಸಲಹೆಯಂತೆ ದಸರಾ ಆಚರಣೆ: ಗಣಪತಿ
Team Udayavani, Sep 5, 2017, 7:40 AM IST
ಗೋಣಿಕೊಪ್ಪ: ಜಾತಿ ಧರ್ಮ ಬಿಟ್ಟು ರಾಜಕೀಯ ರಹಿತವಾಗಿ ಹಿರಿಯರ ಸಲಹೆ ಯೊಂದಿಗೆ 39ನೇ ವರ್ಷದ ದಸರಾ ಆಚರಣೆಗೆ ಮುಂದಾಗುತ್ತೇವೆ ಎಂದು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಭರವಸೆಯ ಮಾತುಗಳನ್ನಾಡಿದ್ದಾರೆ.
ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ಪೂರ್ವ ಭಾವಿ ಹಾಗೂ ಹಿರಿಯರ ಸಲಹಾ ಸಭೆಯಲ್ಲಿ ಮಾತನಾಡಿದರು. ಹಿರಿಯರು ಹಾಕಿಕೊಟ್ಟ ದಸರಾ ಆಚರಣೆಯ ಹಾದಿಯಲ್ಲಿ ಈ ಬಾರಿ ವಿಭಿನ್ನ ಆಚರಣೆಯೊಂದಿಗೆ ಜನರಿಗೆ ಮನರಂಜನೆ ನೀಡಲಿದ್ದೇವೆ. ಸರಕಾರದ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಆಚರಣೆಗೆ ವೇದಿಕೆ ನಿರ್ಮಿಸುತ್ತೇವೆ ಎಂದು ಅವರು ಹೇಳಿದರು.
ಸರಕಾರದಿಂದ ಹೆಚ್ಚಿನ ಅನುದಾನ ತರುವ ಮೂಲಕ ದಸರಾ ಆಚರಣೆ ನಡೆಸುತ್ತೇವೆ. ದುಂದು ವೆಚ್ಚಗಳಿಗೆ ಅವಕಾಶ ಕೊಡದೆ ಸಮಿತಿಯ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಆಚರಣೆಗೆ ಮುಂದಾಗಿದ್ದೇವೆ ಎಂದರು.
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಜನರ ಮನರಂಜನೆಗಾಗಿ ಹೊರ ಜಿಲ್ಲೆಗಳ ಕಲಾವಿದರ ತಂಡಗಳನ್ನು ಈ ವೇದಿಕೆಯಲ್ಲಿ ಅನಾವರಣಗೊಳಿಸಲಾಗುತ್ತದೆ ಎಂದು ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ತಿಳಿಸಿದರು.
ಹೊಸ ಹುರುಪು
ಹೊಸ ಹುರುಪಿನೊಂದಿಗೆ ದಸರಾ ಆಚರಣೆಗೆ ಮುಂದಾಗಿರುವುದು ಶ್ಲಾಘನೀಯ. ಜನರ ಭರವ ಸೆಗೆ ತಕ್ಕಂತೆ ಆಚರಣೆಗೆ ಕ್ರಮ ಕೈಗೊಳ್ಳಬೇಕೆಂದು ನಿಕಟ ಪೂರ್ವ ಅಧ್ಯಕ್ಷ ಬಿ.ಡಿ., ಮುಕುಂದ ತಿಳಿಸಿದರು.
ಮನಸ್ಸುಗಳನ್ನು ಒಂದುಗೂಡಿಸುವ ಸದರಾ ಆಚ ರಣೆಯಲ್ಲಿ ಹಿರಿಯರ ಮಾರ್ಗದರ್ಶನ ಪಡೆದು 39ನೇ ವರ್ಷದ ದಸರಾ ಆಚರಣೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸುವ ಆಚರಿಸಬೇಕು ಎಂದು ಚಡ್‌ಖಾನ್ ರಫೀಕ್ ಸಲಹೆ ನೀಡಿದರು.ತಾಲೂಕಿನ ಸರಕಾರಿ ಇಲಾಖೆಗಳನ್ನು ಹಾಗೂ ವಿವಿಧ ಸಂಘಸಂಸ್ಥೆಗಳನ್ನು ಗಣನೇಗೆ ತೆಗೆದುಕೊಂಡು ಶಾಸಕರ ಸಲಹೆ ಸೂಚನೆಯಂತೆ ಆಚರಣೆಗೆ ಮುಂದಾಗಿ ಏಂದು ಹಿರಿಯರಾದ ಹೆಚ್.ಕೆ. ಜಗದೀಶ್ ಸಲಹೆ ನೀಡಿದರು.ದುಂದು ವೆಚ್ಚ ಮಾಡದೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಿರಿಕಿರಿ ಉಂಟುಮಾಡುವ ವಾತಾವರಣ ಸೃಷ್ಟಿಸದೆ ಆಚರಣೆಗೆ ಮುಂದಾಗಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ತಿಳಿಸಿದರು.
ಬಾಲಕೃಷ್ಣ ರೈ,ಸುಮಿ ಸುಬ್ಬಯ್ಯ, ಕುಪ್ಪಂಡ ಗಣೇಶ್ ಸಲಹೆಗಳನ್ನು ನೀಡಿದರು.ಈ ಸಂಧರ್ಭ ನಿರ್ಗಮಿತ ಕಾಯಾಧ್ಯಕ್ಷ, ಕುಲ್ಲಚಂಡ ಬೋಪಣ್ಣ, ಹಿರಿಯರಾದ ರಾಮಾಚಾರ್, ಶ್ರೀ ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಖಜಾಂಜಿ ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಯುವ ದಸರಾ ಸಮಿತಿ ಅಧ್ಯಕ್ಷ ಜಮ್ಮಡ ಸೋಮಣ್ಣ, ಸಮಿತಿ ಪಧಾದಿಕಾರಿಗಳಾದ ಮುರುಗ, ಸತೀಶ್ ಸಿಂಗಿ, ರತಿ ಅಚ್ಚಪ್ಪ, ಸುರೇಶ್ ರೈ ಸೇರಿದಂತೆ ಹಲವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.