ಬುಸ್ಟ, ಆ್ಯಂಡರ್ಸನ್, ಕ್ವೆರ್ರಿ ಗೆಲುವಿನ ಪಯಣ ಜಾರಿ
Team Udayavani, Sep 5, 2017, 7:35 AM IST
ನ್ಯೂಯಾರ್ಕ್: ಕರೆನೊ ಬುಸ್ಟ, ಸ್ಯಾಮ್ ಕ್ವೆರ್ರಿ, ಕೆವಿನ್ ಆ್ಯಂಡರ್ಸನ್ ಮತ್ತು ಡೀಗೊ ಶಾರ್ಟ್ಸ್ಮ್ಯಾನ್ ಯುಎಸ್ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಸತತ ಮಳೆಯಿಮದ ರವಿವಾರ ರಾತ್ರಿಯ ಬಹುತೇಕ ಪಂದ್ಯಗಳು ಮುಚ್ಚಿದ ಚಾವಣಿಯಡಿಯಲ್ಲಿ ನಡೆದವು. ಇಂಥ ಒಂದು ಜಿದ್ದಾಜಿದ್ದಿ ಮೇಲಾಟದಲ್ಲಿ ಸ್ಪೇನಿನ 12ನೇ ಶ್ರೇಯಾಂಕದ ಪಾಬ್ಲೊ ಕರೆನೊ ಬುಸ್ಟ ಕೆನಡಾದ 18ರ ಹರೆಯದ ಆಟಗಾರ ಡೆನ್ನಿಸ್ ಶಪೊವಲೋವ್ ಅವರನ್ನು 3 ಸೆಟ್‌ಗಳ ಟೈ-ಬ್ರೇಕರ್‌ನಲ್ಲಿ ಮಣಿಸುವಲ್ಲಿ ಯಶಸ್ವಿಯಾದರು. ಬುಸ್ಟ ಗೆಲುವಿನ ಅಂತರ 7-6 (2), 7-6 (4), 7-6 (3). ಇದು ಬುಸ್ಟ ಅವರ 2ನೇ ಕ್ವಾರ್ಟರ್ ಫೈನಲ್. ಫ್ರೆಂಚ್ ಓಪನ್‌ನಲ್ಲೂ ಅವರು ಕ್ವಾರ್ಟರ್ ಫೈನಲ್ ತನಕ ಬಂದಿದ್ದರು.
“ಇದು ನನ್ನ ಪಾಲಿನ ಆತ್ಯಂತ ಕಠಿನ ಪಂದ್ಯವಾಗಿತ್ತು. ಆದರೆ ಟೈ-ಬ್ರೇಕರ್‌ನಲ್ಲಿ ಪರಿಪೂರ್ಣ ಆಟವಾಡಿದೆ, ಆಕ್ರಮಣಕಾರಿ ಪ್ರದರ್ಶನ ನೀಡಿದೆ. ಹೀಗಾಗಿ ಗೆಲುವು ಕೈ ಹಿಡಿಯಿತು’ ಎಂಬುದು ಬುಸ್ಟ ಪ್ರತಿಕ್ರಿಯೆ. ಸುದೀರ್ಘ ರ್ಯಾಲಿಗಳ ಮೂಲಕ ಬುಸ್ಟ ಗಮನ ಸೆಳೆದರು.
ಬುಸ್ಟ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮ್ಯಾನ್. ಇನ್ನೊಂದು ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಲುಕಾಸ್ ಪೌಲಿ ವಿರುದ್ಧ 7-6 (7-3), 7-5, 2-5, 6-2 ಅಂತರದ ಗೆಲುವು ಸಾಧಿಸಿದರು. ಶಾರ್ಟ್ಸ್ಮ್ಯಾನ್‌ಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್.
ಆ್ಯಂಡರ್ಸನ್-ಕ್ವೆರ್ರಿ
ಅಮೆರಿಕದ 17ನೇ ಶ್ರೇಯಾಂಕದ ಸ್ಯಾಮ್ ಕ್ವೆರ್ರಿ ಅವರದು ಸುಲಭ ಗೆಲುವು. ಜರ್ಮನಿಯ 23ನೇ ಶ್ರೇಯಾಂಕದ ಮಿಶಾ ಜ್ವೆರೇವ್ ವಿರುದ್ಧ ಕ್ವೆರ್ರಿ 6-2, 6-2, 6-1 ಅಂತರದ ಜಯ ಸಾಧಿಸಿದರು. ಕಳೆದೆರಡು ವರ್ಷ ಮೊದಲ ಸುತ್ತಿನ ಗಡಿ ದಾಟದೇ ಹೋಗಿದ್ದ ಕ್ವೆರ್ರಿ ಇದೇ ಮೊದಲ ಬಾರಿಗೆ ತವರಿನ ಗ್ರ್ಯಾಸ್ಲಾಮ್‌ನಲ್ಲಿ ಕ್ವಾರ್ಟರ್ ಫೈನಲ್ ಕಾಣುತ್ತಿದ್ದಾರೆ.
ಸ್ಯಾಮ್ ಕ್ವೆರ್ರಿ ಅವರ ಕ್ವಾರ್ಟರ್ ಫೈನಲ್ ಸ್ಪರ್ಧಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್. ಅವರು 6-4, 6-3, 6-7 (4-7), 6-4 ಅಂತರದಿಂದ ಇಟಲಿಯ ಪೌಲೊ ಲೊರೆಂಜಿ ವಿರುದ್ಧ ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.