ಚಿತ್ತಗಾಂಗ್ ಟೆಸ್ಟ್ : ಬಾಂಗ್ಲಾಕ್ಕೆ ರಹೀಂ-ರೆಹಮಾನ್ ರಕ್ಷಣೆ
Team Udayavani, Sep 5, 2017, 7:45 AM IST
ಚಿತ್ತಗಾಂಗ್: ಸ್ಪಿನ್ನರ್ ನಥನ್ ಲಿಯೋನ್ ಅವರ ಘಾತಕ ದಾಳಿಯ ಹೊರತಾಗಿಯೂ ಚಿತ್ತಗಾಂಗ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಬಾಂಗ್ಲಾ ಸ್ಕೋರ್ 6 ವಿಕೆಟಿಗೆ 253 ರನ್.
ಪ್ಯಾಟ್ ಕಮಿನ್ಸ್ ಜತೆ ಬೌಲಿಂಗ್ ಆರಂಭಿಸಿದ ನಥನ್ ಲಿಯೋನ್ 77 ರನ್ನಿತ್ತು 5 ವಿಕೆಟ್ ಉಡಾಯಿಸಿದರು. ಹೀಗಾಗಿ ಒಂದು ಹಂತದಲ್ಲಿ ಬಾಂಗ್ಲಾ 117 ರನ್ನಿಗೆ 5 ವಿಕೆಟ್ ಉರುಳಿಸಿಕೊಂಡು ಸಂಕಟಕ್ಕೆ ಸಿಲುಕಿತ್ತು. ಆದರೆ 6ನೇ ವಿಕೆಟಿಗೆ ಜತೆಗೂಡಿದ ನಾಯಕ ಮುಶ್ಫಿಕರ್ ರಹೀಂ ಮತ್ತು ಶಬ್ಬೀರ್ ರೆಹಮಾನ್ 105 ರನ್ ಒಟ್ಟುಗೂಡಿಸಿ ಆಸೀಸ್ ಮೇಲುಗೈಗೆ ತಡೆಯೊಡ್ಡಿದರು. ರಹೀಂ 149 ಎಸೆತಗಳಿಂದ ಅಜೇಯ 62 ರನ್ ಮಾಡಿದ್ದು, ಇವರೊಂದಿಗೆ 19 ರನ್ ಗಳಿಸಿರುವ ನಾಸಿರ್ ಹೊಸೇನ್ ಕ್ರೀಸಿನಲ್ಲಿದ್ದಾರೆ. ಶಬ್ಬೀರ್ ರೆಹಮಾನ್ 66 ರನ್ ಹೊಡೆದರು.
ಆರಂಭಕಾರ ಸೌಮ್ಯ ಸರ್ಕಾರ್ (33), ಮೊಮಿನುಲ್ ಹಕ್ (31) ಮೂವತ್ತರ ಗಡಿ ದಾಟಿದರು. ಶಕಿಬ್ ಗಳಿಕೆ 24 ರನ್.
ಲಿಯೋನ್ ಮೊದಲ 4 ಬ್ಯಾಟ್ಸ್‌ಮನ್‌ಗಳನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಟೆಸ್ಟ್ ಇತಿಹಾಸದಲ್ಲಿ ಒಬ್ಬನೇ ಬೌಲರ್ ಅಗ್ರ ಕ್ರಮಾಂಕದ ನಾಲ್ವರನ್ನು ಎಲ್‌ಬಿಡಬ್ಲ್ಯು ರೂಪದಲ್ಲಿ ಔಟ್ ಮಾಡಿದ ಮೊದಲ ದೃಷ್ಟಾಂತ ಇದಾಗಿದೆ. ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ನಿಂದ ಬೌಲಿಂಗ್ ಆರಂಭಿಸಿದ್ದು 1938ರ ಬಳಿಕ ಇದೇ ಮೊದಲು. ಅಂದು ಇಂಗ್ಲೆಂಡ್ ಎದುರಿನ ನಾಟಿಂಗಂ ಟೆಸ್ಟ್‌ನಲ್ಲಿ ಬಿಲ್ ಓ’ರಿಲೇ ಆಸೀಸ್ ದಾಳಿ ಆರಂಭಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು
Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.