ನಿಹಲಾನಿ ಸೈದ್ಧಾಂತಿಕ ಯೂಟರ್ನ್
Team Udayavani, Sep 5, 2017, 8:55 AM IST
ಮುಂಬೈ: ಸೆನ್ಸಾರ್ ಮಂಡಳಿ ಮಾಜಿ ಅಧ್ಯಕ್ಷ ಪಹಲಾಜ್ ನಿಹಲಾನಿ ಮತ್ತೂಮ್ಮೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಗೆ ಕತ್ತರಿ ಪ್ರಯೋಗ ಮಾಡಿ ಸಿನಿಪ್ರಿಯರ ಹಾಗೂ ಹಲವು ನಿರ್ದೇಶಕರ ಆಕ್ರೋಶಕ್ಕೆ ಗುರಿಯಾಗಿದ್ದ ನಿಹಲಾನಿ ಅವರು ಇದೀಗ ಸೆನ್ಸಾರ್ ಮಂಡಳಿಯಿಂದ ವಜಾಗೊಂಡ ಬೆನ್ನಲ್ಲೇ ಹೊಸ ಸಿನಿಮಾವೊಂದರ ವಿತರಕರಾಗಿ ಗುರುತಿಸಿ ಕೊಂಡಿದ್ದಾರೆ. ಅದು ಯಾವ ಸಿನಿಮಾ ಗೊತ್ತೇ? ಲೈಂಗಿಕ- ಥ್ರಿಲ್ಲರ್ “ಜೂಲಿ-2′!
“ಸ್ಪೆಕ್ಟರ್’ ಸಿನಿಮಾದ ಚುಂಬನ ದೃಶ್ಯಗಳಿಗೆ, “ಉಡ್ತಾ ಪಂಜಾಬ್’ನ ಪಂಜಾಬ್ ಎಂಬ ಹೆಸರಿಗೆ, ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ ಸಿನಿಮಾಗೆ, ಜಬ್ ಹ್ಯಾರಿ ಮೆಟ್ ಸೇಜಲ್ನಲ್ಲಿನ “ಇಂಟರ್ಕೋರ್ಸ್’ ಎಂಬ ಪದಕ್ಕೆ ಕತ್ತರಿ ಹಾಕಿ ಆಕ್ಷೇಪಕ್ಕೆ ಗುರಿಯಾಗಿದ್ದ ನಿಹಲಾನಿ ಅವರು ಇದೀಗ ಜೂಲಿ-2 ಚಿತ್ರದ ಪರ ಪ್ರಚಾರ ಮಾಡುತ್ತಿರುವುದನ್ನು ನೋಡಿ ಟ್ವೀಟಿಗರು ಲೇವಡಿ ಮಾಡಿದ್ದಾರೆ. ದಿಢೀರನೆ ಸೈದ್ಧಾಂತಿಕ ಯೂಟರ್ನ್ ಪಡೆದಿರುವ ನಿಹಲಾನಿ ಅವರು, “ಜೂಲಿ-2 ವಯಸ್ಕರ ಚಿತ್ರವಾಗಿದ್ದು, ಅದಕ್ಕೆ ಯಾವುದೇ ಕತ್ತರಿ ಪ್ರಯೋಗ ಮಾಡದೇ “ಎ’ ಸರ್ಟಿಫಿಕೇಟ್ ನೀಡಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ. ಜತೆಗೆ, ತಾವು ಯಾವಾಗಲೂ ಸಂಸ್ಕಾರಿಯಾಗಿಯೇ ಇರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಪಹಲಾಜ್ ನಿಹಲಾನಿ ಅವರ ಯೂಟರ್ನ್ ಬಗ್ಗೆ ಬಹುತೇಕ ಮಂದಿ ವ್ಯಂಗ್ಯವಾಡಿದ್ದು, ಟ್ವಿಟರ್ನಲ್ಲಿ “ಜೂಲಿ2′ ಹ್ಯಾಷ್ಟ್ಯಾಗ್ ಕೂಡ ಟ್ರೆಂಡಿಂಗ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
OTP ನಿಯಮದಿಂದ ಅಗತ್ಯ ಸೇವೆಗೆ ತೊಂದರೆ ಆಗದು: ಟ್ರಾಯ್
Election;ವಿಶ್ವಾಸಾರ್ಹತೆಗೆ ಧಕ್ಕೆ: ಕಾಂಗ್ರೆಸ್ ಆಂದೋಲನ
Bangladesh; ಅಲ್ಪಸಂಖ್ಯಾಕರ ರಕ್ಷಣೆಗೆ ಕ್ರಮ ಕೈಗೊಳ್ಳಿ: ಭಾರತ ಮತ್ತೆ ಆಗ್ರಹ
Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Kundapura: ತ್ರಾಸಿ – ಮರವಂತೆ ಬೀಚ್ನಲ್ಲಿ ಗಗನದೂಟ!
Australia; ಮಂಗಳೂರಿಗನ ಸಲೂನ್ನಲ್ಲಿ ಕೊಹ್ಲಿ ರಿಲ್ಯಾಕ್ಸ್: ವಿರಾಟ್ ನಡೆಗೆ ಕಿರಣ್ ಫಿದಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.