ಕೆಪಿಎಲ್: ಮೈಸೂರು ಸ್ಪರ್ಧಾತ್ಮಕ ಮೊತ್ತ
Team Udayavani, Sep 5, 2017, 7:20 AM IST
ಮೈಸೂರು: ಅಜುನ್ ಹೋಯ್ಸಳ,ಜಗದೀಶ್ ಸುಚಿತ್ ಬ್ಯಾಟಿಂಗ್ ನೆರವಿನಿಂದ ಮೈಸೂರು ವಾರಿಯರ್ ಕೆಪಿಎಲ್‌ನಲ್ಲಿ
ಬಿಜಾಪುರ್ ಬುಲ್ಸ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಬುಲ್ಸ್ ಪರ ರೋನಿತ್ ಮೋರೆ 4 ವಿಕೆಟ್ ಪಡೆದು ಮಿಂಚಿದ್ದಾರೆ. ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ 19.5 ಓವರ್‌ಗೆ 150 ರನ್ ಬಾರಿಸಿ ಆಲೌಟ್ ಆಯಿತು.
ಆರಂಭಿಕರಾಗಿ ಕಣಕ್ಕೆ ಇಳಿದ ಅರ್ಜುನ್ ಹೋಯ್ಸಳ ಮತ್ತು ನಾಯಕ ಕರುಣ್ ನಾಯರ್ ಜೋಡಿ 31 ರನ್ ಜತೆಯಾಟ
ನೀಡಿತು. ಈ ಹಂತದಲ್ಲಿ ನಾಯಕ ಕರುಣ್ ನಾಯರ್ ಮೋರೆಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿನಿತ್ ಯಾದವ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ವಲ್ಪ ಸಮಯದಲ್ಲಿಯೇ ಅರ್ಜುನ್ ಕೂಡ ಔಟ್ ಆದರು. ಅರ್ಜುನ್ 31 ಎಸೆತದಲ್ಲಿ 4 ಬೌಂಡರಿ ಸೇರಿದಂತೆ 32 ರನ್ ಬಾರಿಸಿದರು. ನಂತರ ರೋನಿತ್ ಮೋರೆ ಮಾರಕ ದಾಳಿಯಿಂದಾಗಿ ಮೈಸೂರು ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಆದರೂ ಈ ಹಂತದಲ್ಲಿ ಸ್ವಲ್ಪ ಮಟ್ಟಿಗೆ ಬುಲ್ಸ್ ದಾಳಿಯನ್ನು ಚೆಂಡಾಡಿದವರು ಎಂದರೇ ಸುನೀಲ್ ರಾಜು ಮತ್ತು ಜಗದೀಶ್ ಸುಚಿತ್. ಸುನಿಲ್ ರಾಜು 17 ಎಸೆತದಲ್ಲಿ 1 ಬೌಂಡರಿ, 1 ಸಿಕ್ಸರ್ ಸೇರಿದಂತೆ 22 ರನ್ ಬಾರಿಸಿದಾಗ ಮೋರೆಗೆ ವಿಕೆಟ್ ಒಪ್ಪಿಸಿದರು.
ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಜಗದೀಶ್ 24 ಎಸೆತದಲ್ಲಿ 1 ಬೌಂಡರಿ ಸೇರಿದಂತೆ 27 ರನ್ ಬಾರಿಸಿದರು. ಜಗದೀಶ್ ಕೂಡ ಮೋರೆಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬುಲ್ಸ್ ಪರ ಚುರುಕಿನ ದಾಳಿ ನಡೆಸಿದ ರೋನಿತ್ ಮೋರೆ 25 ರನ್‌ಗೆ 4 ವಿಕೆಟ್ ಪಡೆದರು. ಅಭಿಮನ್ಯು ಮಿಥುನ್ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ 19.5 ಓವರ್‌ಗೆ 150/10 ( ಅರ್ಜುನ್ ಹೊಯ್ಸಳ 32, ಜಗದೀಶ್ 27, ರೋನಿತ್ ಮೋರೆ 25ಕ್ಕೆ 4).
ಮೈಸೂರು ಚರಣಕ್ಕೆ ಪ್ರಮೋದಾದೇವಿ
ಒಡೆಯರ್ ಚಾಲನೆ
ಮೈಸೂರಿನ ನರಸಿಂಹರಾಜ್ ಒಡೆಯರ್ ಅಂಗಳದಲ್ಲಿ ಆರಂ¸ಗೊಂಡ ಕೆಪಿಎಲ್ 2ನೇ ಚರಣಕ್ಕೆ ರಾಜವಂಶಸ್ಥೆ
ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮೈದಾನದಲ್ಲಿ ನಡೆದ
ವರ್ಣರಂಜಿತ ಸಮಾರಂಭದಲ್ಲಿ ಪ್ರಮೋದಾದೇವಿ ಒಡೆಯರ್ ಅವರು ರಾಜವಂಶಸ್ಥ ದಿ. ಶ್ರೀಕಂಠದತ್ತ ಒಡೆಯರ್
ಅವರ ಭಾವಚಿತ್ರ ಅನಾವರಣಗೊಳಿಸಿದರು. ಜತೆಗೆ ಉಭಯತಂಡಗಳ ಆಟಗಾರರನ್ನು ಪರಿಚಯ ಮಾಡಿಕೊಂಡು, ಶುಭಹಾರೈಸಿದರು.
ಅರಮನೆಗೆ ಭೇಟಿ ನೀಡಿದ ಆಸೀಸ್
ಮಾಜಿ ವೇಗಿ ಬ್ರೆಟ್ ಲೀ
ಕೆಪಿಎಲ್ ವೀಕ್ಷಕ ವಿವರಣೆಗಾಗಿ ಮೈಸೂರಿಗೆ ಆಗಮಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಇಲ್ಲಿನ ವಿಶ್ವವಿಖ್ಯಾತ ಅರಮನೆಗೆ ಭೇಟಿ ನೀಡಿ ಕೆಲವು ಸಮಯ ಕಳೆದಿದ್ದಾರೆ. ಬ್ರೆಟ್ ಲೀ ಆನೆ ಸವಾರಿ ಮಾಡುವ
ಜತೆಗೆ ಅರಮನೆಯಲ್ಲಿರುವ ಮೈಸೂರು ಅರಸರ ಕಾಲದ ಪಿಯಾನೋ ನುಡಿಸಿ ತಮ್ಮ ಬದುಕಿನ ಕೆಲವು ಅಪರೂಪದ ಕ್ಷಣಗಳನ್ನು ಕಳೆದರು. ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿರುವ ಕಲ್ಲಿನ ಸಿಂಹಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್ ಜತೆ ಅರಮನೆಯ ಬಗ್ಗೆ ಮಾಹಿತಿ ಪಡೆದರು.
– ಸಿ.ದಿನೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.