ಇಸ್ರೇಲ್‌ನ “ಸಣ್ಣ ಜಿರಳೆ’ಗೆಸಿಕ್ಕ ಐಡೆಂಟಿಟಿ


Team Udayavani, Sep 5, 2017, 11:45 AM IST

05-JOSH-12.jpg

ನನ್ನ ಬಳಿ ಬಹಳಷ್ಟು ಮಂದಿ ನೃತ್ಯ ಕಲಿತಿದ್ದಾರೆ, ಕಲಿಯುತ್ತಿದ್ದಾರೆ. ಎಲ್ಲರೂ ಅತ್ಯಂತ ಪ್ರೀತಿಪಾತ್ರರೇ. ಆದರೆ, ಇಸ್ರೇಲ್‌ನ ಈ ಹುಡುಗಿ ಯೇಲ್‌ ಟಾಲ್‌ ಇದ್ದಾಳಲ್ಲ, ಅವಳು ಯಾವ ಜನ್ಮದಲ್ಲಿ ನನಗೆ ಮಗಳಾಗಿದ್ದಳ್ಳೋ ಗೊತ್ತಿಲ್ಲ.  ಇಸ್ರೇಲಿನಿಂದ ಬಂದು ನನ್ನ ಬಳಿ ನೃತ್ಯ ಕಲಿತು, ಈಗ ಅಲ್ಲಿ ಭಾರತೀಯ ನೃತ್ಯದ ಜತೆಗೆ ಇಲ್ಲಿನ ಸಂಸ್ಕೃತಿಯನ್ನೂ ಪಸರಿಸುತ್ತಿದ್ದಾಳೆ.

ಯೇಲ್‌, ಭಾರತಕ್ಕೆ ಬರುವಾಗಲೇ ವೆಸ್ಟರ್ನ್ ಡ್ಯಾನ್ಸ್‌ನಲ್ಲಿ ಡಿಗ್ರಿ ಪಡೆದಿದ್ದಳು. ಕೇವಲ 15 ದಿನಗಳಲ್ಲಿ ಭಾರತೀಯ ನೃತ್ಯ ಕಲಿಯುತ್ತೇನೆಂದು ಬಂದಿದ್ದಳು. ಆಮೇಲೆ ನೃತ್ಯದ ಅಗಾಧತೆ ಅರ್ಥವಾಗಿ, ಅದನ್ನು ಕಲಿತೇ ತೀರುತ್ತೇನೆ ಎಂದು ಉಳಿದುಕೊಂಡಳು. 4 ವರ್ಷ ನನ್ನ ಮನೆಯಲ್ಲೇ ಇದ್ದು ನೃತ್ಯ ಕಲಿತಳು. ಬರೀ ನೃತ್ಯವನ್ನಷ್ಟೇ ಅಲ್ಲ, ನನ್ನ ಜೀವನಶೈಲಿ, ಊಟ, ಡ್ರೆಸ್‌, ಭಾರತೀಯ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಕಲಿತಳು. 

ವಾಪಸಾದ ಮೇಲೆ ನನಗೊಂದು ಪತ್ರ ಬರೆದಿದ್ದಳು- “ಇಸ್ರೇಲ್‌ನಲ್ಲಿ ಒಂದು ಸಣ್ಣ ಜಿರಳೆಯಂತಿದ್ದ ನನಗೊಂದು ಐಡೆಂಟಿಟಿ ಕೊಟ್ಟವರು ನೀವು. ಈಗ ಇಲ್ಲಿ ಜನ ನನ್ನನ್ನು ಭಾರತೀಯ ನೃತ್ಯಗಾರ್ತಿ ಅಂತ ಗುರುತಿಸುತ್ತಾರೆ’ ಅಂತ. ಅದೊಂದು ಸಾರ್ಥಕ ಕ್ಷಣ.  ಕೆಲ ವರ್ಷಗಳ ಹಿಂದೆ ಇಸ್ರೇಲ್‌ನಲ್ಲಿ ನನ್ನ ಮತ್ತು ಅವಳ ನೃತ್ಯ ಪ್ರದರ್ಶನ ಏರ್ಪಡಿಸಿದ್ದರು. ಅವಳವತ್ತು ಏನೇನೂ ಚೆನ್ನಾಗಿ ಡ್ಯಾನ್ಸ್‌ ಮಾಡಲಿಲ್ಲ. ನನಗೆ ಒಂದು ಕ್ಷಣಕ್ಕೆ ಬಹಳ ಬೇಜಾರಾಯ್ತು. ಆಮೇಲೆ ಅವಳೇ ಹೇಳಿದಳು- “ಮೇಡಂ, ಇಲ್ಲಿ ನನ್ನನ್ನು ತಿದ್ದುವವರು ಯಾರೂ ಇಲ್ಲ. ಪ್ರಾಕ್ಟೀಸ್‌ ಬೇರೆ ಬಿಟ್ಟು ಹೋಗಿದೆ. ನಾನು ಕೆಟ್ಟದಾಗಿ ಪರ್ಫಾಮ್‌ ಮಾಡಿದ್ದೇನೆಂದು ಗೊತ್ತು. ಆದರೆ ತಪ್ಪು ಮಾಡಿಯೇ ಅಲ್ಲವಾ ಎಲ್ಲರೂ ಕಲಿಯುವುದು? ನಾನೂ ಕಲಿಯುತ್ತೇನೆ’ ಅಂದಳು. ಹೌದಲ್ವಾ? ತಪ್ಪು ಮಾಡಿಯೇ ತಾನೇ ಎಲ್ಲರೂ ಕಲಿಯುವುದು. ನಾನೂ ಮೊದಲು ತಪ್ಪು ಮಾಡಿದವಳೇ ತಾನೇ ಅಂತ ಅನ್ನಿಸಿತು.

ಈಗಲೂ ಅವಳ ನೃತ್ಯ ಪ್ರದರ್ಶನದ ವಿಡಿಯೋ ಅಥವಾ ವರದಿಯನ್ನು ಇ- ಮೇಲ್‌ ಮಾಡುತ್ತಾಳೆ. ತಪ್ಪಿದ್ದರೆ ತಿದ್ದುವಂತೆ ಹೇಳುತ್ತಾಳೆ. “ಇಸ್ರೇಲ್‌ನವರಿಗೆ ಬಾಲಿವುಡ್‌ ಡ್ಯಾನ್ಸ್‌ ಮೇಲೆ ಕ್ರೇಝ್ ಜಾಸ್ತಿ. ಹಾಗಾಗಿ, ಬೇರೆಯವರಿಗೆ ಅದನ್ನು ಕಲಿಸುತ್ತೇನೆ. ಆದರೆ, ನಾನು ಮಾತ್ರ ನೀವು ಕಲಿಸಿದ್ದನ್ನೇ ಪ್ರದರ್ಶನ ಕೊಡುತ್ತೇನೆ.’ ಅಂತ ಕೇಳಿದ್ದಳು. “ಐ ಫಾಲೋ ಮೈ ಗುರು. ಈವನ್‌ ಇನ್‌ ಮೈ ಲೈಫ್ಸ್ಟೈಲ್‌’ ಅನ್ನುತ್ತಾಳೆ ಆಕೆ. ಅದಕ್ಕೇ ಹೇಳುವುದು “ಗುರು’ ಅನ್ನೋದು ವೃತ್ತಿಯಷ್ಟೇ ಅಲ್ಲ, ಅದೊಂದು ಗುರುತರ ಜವಾಬ್ದಾರಿ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲಿಗೆ
ಹೋಗಿದ್ದಾಗ ಅಲ್ಲಿನ ರಾಯಭಾರ ಕಚೇರಿ ಆಕೆಯ ನೃತ್ಯ ಪ್ರದರ್ಶನವನ್ನು ಏರ್ಪಡಿಸಿತ್ತು ಅನ್ನೋದು ಇನ್ನೊಂದು ಹೆಮ್ಮೆಯ ವಿಷಯ.

ವೈಜಯಂತಿ ಕಾಶಿ, ನೃತ್ಯ ಕಲಾವಿದೆ
 

ಟಾಪ್ ನ್ಯೂಸ್

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.