“ಪ್ರಪಂಚವೇ ಭಾರತೀಯ ಸನಾನತಾ ಧರ್ಮ ಒಪ್ಪಿಕೊಂಡಿದೆ’
Team Udayavani, Sep 5, 2017, 1:29 PM IST
ಆನೇಕಲ್: ಸನಾತನ ಧರ್ಮದ ಆಚರಣೆ, ಸಂಸ್ಕೃತಿಯನ್ನು ನೋಡಿ ಪ್ರಪಂಚವೇ ಭಾರತವನ್ನು ಅಪ್ಪಿಕೊಂಡಿದೆ ಎಂದು ಹಂಪಿಯ ಹೇಮಕೂಟದ ಗಾಯತ್ರಿ ಪೀಠದ ದೇವಾಂಗ ದಯಾನಂದ ಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಸಮೀಪದ ಕಾವಲಹೊಸಹಳ್ಳಿ ಅರಿವಿನ ಮಂದಿರದಲ್ಲಿ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವೇದಾದ್ರಿ ಮಹರ್ಷಿ ಅವರ ಧರ್ಮಪತ್ನಿ ಮಾತೆ ಲೋಗಾಂಬಾಳ್ ಅವರ 103ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಪತ್ನಿ ಪ್ರಶಂಸಾ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾತೃ ಋಣ ತೀರಿಸುವ ಕೆಲಸವಾಗಲಿ: ಭಾರತದ ಸಪ್ತನದಿಗಳು ಮಾತೃ ಹೆಸರಿನಲಿದ್ದು, ಮಾತೃ ಋಣ ತೀರಿಸುವ ಕೆಲಸವಾಗಬೇಕು. ಹೆಣ್ಣು, ತಾಯಿಯಾಗಿ, ಪತ್ನಿಯಾಗಿ ತನ್ನದೇ ನಿಟ್ಟಿನಲ್ಲಿ ಸಂಸ್ಕಾರ ನೀಡುವಂತವರು. ಹೀಗಾಗಿ ವೇದಾದ್ರಿ ಅವರು ಮಾಡಿರುವ ಚಿಂತನೆಯಿಂದ ಪತ್ನಿಯನ್ನು ಪ್ರಶಂಸಿಸುವ ನಿಟ್ಟಿನಲ್ಲಿ ಸೇರಿರುವುದು ಮೆಚ್ಚುವಂತಹ ಕೆಲಸ ಎಂದು ತಿಳಿಸಿದರು.
ಮನೆ ಸ್ವರ್ಗವಾಗಲಿ: ಧಾರ್ಮಿಕ ಚಿಂತಕಿ ವಿಜಯಾ ಮಾತನಾಡಿ, ಮನಸ್ಸಿನಲ್ಲಿರುವ ಪ್ರೀತಿ ವ್ಯಕ್ತಪಡಿಸುವ ಒಂದು ಭೂಮಿಕೆ ಇದಾಗಿದ್ದು, ಒಲವೇ ಜೀವನ ಸಾತ್ಕಾರದಂತೆ ಇರಬೇಕು. ಮನೆ ನರಕವಾಗದೇ ಸದಾ ಸ್ವರ್ಗ ಕಾಣುವಂತೆಯಾಗಬೇಕು ಮಾಡಬೇಕು ಎಂದು ತಿಳಿಸಿದರು.
ಇದರಿಂದ ಧಾರ್ಮಿಕ ಶಕ್ತಿ ವೃದ್ಧಿಗೊಂಡು ಮನಬಿಚ್ಚಿ ಮಾತನಾಡುವುದು ಒಳಗಡೆ ಮನಸ್ಸು ಪ್ರೀತಿ ತುಂಬಿರುರುತ್ತೇ ಹೇಳಿಕೊಳ್ಳಲು ಸಾಧ್ಯವಿರುವುದಿಲ್ಲ. ಧ್ಯಾನವು ಅಂತಹ ಶಕ್ತಿ ನೀಡಿ ಚೇತನಗೊಳಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್‌ನ ಉಪಾಧ್ಯಕ್ಷ ಉಮಾಪತಿ ಮಾತನಾಡಿ, ನಾವು ಸುಮಾರು 15 ವರ್ಷಗಳಿಂದ “ಪತ್ನಿ ಪ್ರಶಂಸಾ ದಿನದಚರಣೆಮಾಡಿಕೊಂಡು ಬಂದಿದ್ದೇವೆ. ತಾಯಿ ದಿನ, ಮಕ್ಕಳ ದಿನ, ತಂದೆ ದಿನ, ಪರಿಸರ ದಿನ ಹೀಗೆ ಹಲುವು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ವೇದಾದ್ರಿ ಮಹರ್ಷಿ ಅವರ ಚಿಂತನೆಯ ಪತ್ನಿ ಪ್ರಶಂಸೆ ದಿನ ವಿಶೇಷವಾದದ್ದು, ಇದರಿಂದ ದಾಂಪತ್ಯ ಜೀವನದಲ್ಲಿ ಮನೋಬಲ ವೃದ್ಧಿಯಾಗಿ ಸಂಸ್ಕಾರ, ಧಾರ್ಮಿಕ ವಿಚಾರಧಾರೆಗಳಡಿಯಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದರು.
ಸಮಾರಂಭದಲ್ಲಿ ಪುರಸಭಾ ಸದಸ್ಯ ಶಂಕರ್ ಕುಮಾರ್, ಕಸಾಪ ಅಧ್ಯಕ್ಷ ನವೀನ್ ಕುಮಾರ್ (ಬಾಬು), ವಿಜಯಾ, ತನುಜಾ ವಿಶೇಷ ಆಹ್ವಾನಿತ ದಂಪತಿಗಳಾಗಿ ಗವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಪ್ರೋ.ಎಂ.ಗೋವಿಂದರಾಜು, ಪೊ›.ಕೆ.ನರಸಿಂಹಯ್ಯ, ಪನ್ನೀರ್ ಸೆಲ್ವಂ, ಭ್ರಮರಾಂಭ, ಕೃಪಾನಿಧಿ, ಟಿ.ನಾಗಾರಾಜು ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.