ವಡಾಲ ಶ್ರೀರಾಮ ಮಂದಿರಕ್ಕೆ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ
Team Udayavani, Sep 5, 2017, 3:55 PM IST
ಮುಂಬಯಿ: ಶಕತ್‌ಪುರಂ ಶ್ರೀ ವಿದ್ಯಾಪೀಠಮ್ ಅಲ್ಲಿನ ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಸಂಸ್ಥಾನಂನ ಪೀಠಾಧಿಪತಿ ಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮೀಜಿ ಅವರು ಸೆ. 1ರಂದು ಸಂಜೆ ವಡಾಲ ಶ್ರೀ ರಾಮಮಂದಿರದ ದ್ವಾರಕಾನಾಥ ಭವನಕ್ಕೆ ಆಗಮಿಸಿ ಶ್ರೀ ರಾಮಚಂದ್ರ ದೇವರ ಮತ್ತು ಪ್ರತಿಷ್ಠಾಪಿತ ಮಹಾಗಣಪತಿಯ ದರ್ಶನ ಪಡೆದರು.
ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿ ವಿಶ್ವಸ್ತ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್ ಮತ್ತು ಪದಾಧಿಕಾರಿಗಳು ಶ್ರೀಗಳಿಗೆ ಚೆಂಡೆವಾದ್ಯಗಳ ನೀನಾದ, ಕುಂಭ ಸ್ವಾಗತ ದೊಂದಿಗೆ ಸುಖಾಗಮನ ಬಯಸಿದರು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಗೋವಾ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಹಾಗೂ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರ ಆಶೀರ್ವಚನ ಮತ್ತು ಮಾರ್ಗದರ್ಶನಗಳೊಂದಿಗೆ ಜಿಎಸ್‌ಬಿ ಸಾರ್ವ ಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಈ ಬಾರಿ 63ನೇ ವಾರ್ಷಿಕ ಸಾರ್ವಜನಿಕ ಗಣೇಶೋ ತ್ಸವ ನಡೆಸಲಾಗುತ್ತಿರುವ ಬಗ್ಗೆ ಪಾಲ್ ಮಾಹಿತಿ ನೀಡಿ, ಶ್ರೀಗಳಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿ ದರು.
ಅನಂತರ ಕೃಷ್ಣಾನಂದರು ನೆರೆದ ಸದ್ಭಕ್ತರನ್ನು ಉದ್ದೇಶಿಸಿ ಮಾತನಾಡಿ ಅನುಗ್ರಹಿಸಿದರು. ಈ ಶುಭಾವಸರದಲ್ಲಿ ಜಿಎಸ್‌ಬಿ ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್, ಮುಖ್ಯ ಸಂಚಾಲಕ ಗೋವಿಂದ್ ಎಸ್.ಭಟ್, ಸುಭಾಷ್ ಪೈ, ಅಕ್ಷಯ್ ಎಂ. ಪೈ, ಸುನೀಲ್ ಪೈ, ಕಮಲಾಕ್ಷ ಜಿ.ಸರಾಫ್ ಸೇರಿದಂತೆ ನೂರಾರು ಸೇವಾಕರ್ತರು, ಭಕ್ತರು ಉಪಸ್ಥಿತರಿದ್ದರು.
ಈ ಬಾರಿಯ ವಾರ್ಷಿಕ ಗಣೇಶೋತ್ಸವವು ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈವಿಧ್ಯತೆಗಳೊಂದಿಗೆ ಸೆ. 5ರಂದು ಅನಂತ ಚತುದìಶಿ ದಿನ ಸಮಾಪ್ತಿ ಕಾಣಲಿದೆ ಎಂದು ಎನ್.ಎನ್ ಪಾಲ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.