ಜಿಲ್ಲಾದ್ಯಂತ ಹದ ಮಳೆ, ಬಿತ್ತನೆ ಚುರುಕು
Team Udayavani, Sep 5, 2017, 4:02 PM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ 34.5 ಮಿ.ಮೀ. ಮಳೆ ದಾಖಲಾಗಿದ್ದು, ಮಂದಗತಿಯಲ್ಲಿ ಸಾಗಿದ್ದ ಬಿತ್ತನೆ ಕಾರ್ಯ ಜಿಲ್ಲೆಯಲ್ಲಿ ಚುರುಕಗೊಂಡಿದೆ.
ಯಾವ ತಾಲೂಕಿನಲ್ಲಿ ಎಷ್ಟು ಮಳೆ?: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಸೆ.4 ರವರೆಗೂ ಒಟ್ಟು 41.8 ಮಿ.ಮೀ. ಮಳೆ ಆಗಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 27.2 ಮಿ.ಮೀ., ಚಿಂತಾಮಣಿ ತಾಲೂಕಿನಲ್ಲಿ 48.5 ಮಿ.ಮೀ., ಗೌರಿಬಿದನೂರು ತಾಲೂಕಿನಾದ್ಯಂತ 26.5 ಮಿ.ಮೀ., ಗುಡಿಬಂಡೆ ತಾಲೂಕಿನಲ್ಲಿ 25.4 ಮಿ.ಮೀ. ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 29.8 ಮಿ.ಮೀ. ಮಳೆ ದಾಖಲಾಗಿ ಒಟ್ಟಾರೆ ಜಿಲ್ಲಾದ್ಯಂತ 34.5 ಮಿ.ಮೀ. ಮಳೆ ಆಗಿದೆ. ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲೂಕಿನಲ್ಲಿ ನಾಲ್ಕು ದಿನಗಳಲ್ಲಿ ಅತಿ ಹೆಚ್ಚು ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ಒಟ್ಟು ಸಂಚಿತ
ಮಳೆ ಸೆ.4 ಅಂತ್ಯಕ್ಕೆ ವಾಡಿಕೆ ಮಳೆ 358.9 ಮಿ.ಮೀ. ಮಳೆ ಆಗಬೇಕಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ
340.3 ಮಿ.ಮೀ. ಮಳೆಯಾಗಿದೆ.
ಶೇ.5 ರಷ್ಟು ಮಳೆ ಕೊರತೆ: ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯದವರೆಗೂ ಶೇ.5 ರಷ್ಟು ಮಳೆ ಪ್ರಮಾಣ ಕೊರತೆಯಾಗಿದೆ. ಕಳೆದ ವರ್ಷಕ್ಕೆ ಹೊಲಿಕೊಂಡರೆ ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ 17 ಮಿ.ಮೀ., ಚಿಕ್ಕಬಳ್ಳಾಪುರ 4, ಗುಡಿಬಂಡೆ 19 ಹಾಗೂ ಶಿಡ್ಲಘಟ್ಟದಲ್ಲಿ 5 ಮಿ.ಮೀ. ಮಳೆ ಕೊರತೆ ಕಂಡಿದೆ.
ಬಿತ್ತನೆಯಲ್ಲಿ ಗುಡಿಬಂಡೆ ಫಸ್ಟ್: ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯಕ್ಕೆ ಶೇ.84 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಬಿತ್ತನೆಯ ಗುರಿ ಹೊಂದಿರುವ 1.54 ಲಕ್ಷ ಹೆಕ್ಟೇರ್ ಪೈಕಿ ಆಗಸ್ಟ್ ಅಂತ್ಯಕ್ಕೆ ಜಿಲ್ಲೆಯಲ್ಲಿ 1,29,866 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಕೆ. ಮಲ್ಲಿಕಾರ್ಜು ಮಾಹಿತಿ ನೀಡಿದ್ದಾರೆ. ಬಿತ್ತನೆ ಕಾರ್ಯದಲ್ಲಿ ಶೇ.92 ರಷ್ಟು ಪ್ರಗತಿ ಸಾಧಿಸಿ ಗುಡಿಬಂಡೆ ಮೊದಲ ಸ್ಥಾನದಲ್ಲಿದ್ದರೆ ಶೇ.94 ರಷ್ಟು
ಗುರಿ ಸಾಧಿಸಿ ಶಿಡ್ಲಘಟ್ಟ ಎರಡನೇ ಸ್ಥಾನದಲ್ಲಿದ್ದು, ಬಾಗೇಪಲ್ಲಿ ಶೇ.85, ಚಿಕ್ಕಬಳ್ಳಾಪುರ ಶೇ.82,
ಚಿಂತಾಮಣಿ ಶೇ.80, ಗೌರಿಬಿದನೂರು ಶೇ.81 ಬಿತ್ತನೆಯ ಗುರಿ ಸಾಧಿಸಿದೆ.
ಶೇ.84 ರಷ್ಟು ಬಿತ್ತನೆ ಪೂರ್ಣ: ಬಾಗೇಪಲ್ಲಿ ತಾಲೂಕಿನಲ್ಲಿ 31,899 ಹೆಕ್ಟೇರ್ ಪೈಕಿ 27,185 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 17,579 ಹೆಕ್ಟೇರ್ ಪೈಕಿ 14,354 ಹೆಕ್ಟೇರ್, ಚಿಂತಾಮಣಿ ತಾಲೂಕಿನಲ್ಲಿ 35,918 ಹೆಕ್ಟೇರ್ ಪೈಕಿ 28,735, ಗೌರಿಬಿದನೂರು ತಾಲೂಕಿನಲ್ಲಿ 39,445 ಹೆಕ್ಟೇರ್ ಪೈಕಿ 32,092
ಹೆಕ್ಟೇರ್, ಗುಡಿಬಂಡೆ ತಾಲೂಕಿನಲ್ಲಿ 11,886 ಹೆಕ್ಟೇರ್ ಪೈಕಿ 11,261 ಹೆಕ್ಟೇರ್ ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 17,273 ಹೆಕ್ಟೇರ್ ಪೈಕಿ 16,239 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಕೆರೆಕಟ್ಟೆಗೆ ನೀರು: ನಾಲ್ಕೈದು ದಿನಗಳಿಂದ ಬೀಳುತ್ತಿರುವ ಧಾರಾಕಾರ ಮಳೆ ಜೂನ್, ಜುಲೈ ತಿಂಗಳಲ್ಲಿ ಬಿದಿದ್ದರೆ ಉತ್ತಮ ಬಿತ್ತನೆ ಕಾರ್ಯ ನಡೆಯುತ್ತಿತ್ತು. ಈಗಾಗಲೇ ನೆಲಗಡಲೆಗೆ ಬಿತ್ತನೆಗೆ ಅವಧಿ ಮುಗಿದೆ. ಆದ್ದರಿಂದ ಈಗ
ಬೀಳುತ್ತಿರುವ ಮಳೆ ರಾಗಿ, ಮುಸುಕಿನ ಜೋಳ ಹಾಗೂ ಹುರುಳಿ ಬಿತ್ತನೆಗೆ ಅನುಕೂಲವಾಗಲಿದೆ. ಮುಸುಕಿನ ಜೋಳಕ್ಕೆ ಅವಕಾಶ ಇರುವುದರಿಂದ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಸಮಸ್ಯೆ ನಿವಾರಣೆಯಾಗಲಿದೆ. ಕೆರೆ, ಕುಂಟೆಗಳಿಗೆ ನೀರು ಹರಿದು ಬಂದಿರುವುದರಿಂದ ಕುಡಿವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಲಿದೆ
ಎನ್ನುತ್ತಾರೆ ಅಣಕನೂರು ರೈತ ಬಚ್ಚನ್ನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.