ಮಲ್ಪೆ : ಟ್ರಾಫಿಕ್‌ ಜಾಮ್‌ ನಗರಿಯಾಗಿ ಪರಿವರ್ತನೆಗೊಳ್ಳುತ್ತಿದೆ…!


Team Udayavani, Sep 6, 2017, 8:20 AM IST

traffic.jpg

ಮಲ್ಪೆ: ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಮಲ್ಪೆಯಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿದ್ದರಿಂದ ವಾಹನಗಳ ಓಡಾಟ ಹೆಚ್ಚಾಗಿ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಎಲ್ಲೆಂದರಲ್ಲಿ ರಸ್ತೆ ಮೇಲೆ ವಾಹನಗಳ ನಿಲುಗಡೆ, ಅದರ ಮಧ್ಯೆಯೇ ನುಸುಳುತ್ತ ವಾಹನ ಚಲಾಯಿಸುವ ಅನಿವಾರ್ಯತೆ, ಇಲ್ಲಿ ರಸ್ತೆ ದಾಟುವುದಕ್ಕೆ ಪಾದಾಚಾರಿಗಳಿಗೆ ಗೊಂದಲ, ಫಜೀತಿಯಾಗುತ್ತಿದೆ.

ಕಿರಿದಾದ ಹೆದ್ದಾರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ವಾಹನದಿಂದಾಗಿ ಟ್ರಾಫಿಕ್‌ ಜಾಮ್‌ ಪ್ರತಿನಿತ್ಯದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಮಲ್ಪೆಯ ಸರ್ಕಲಿನಿಂದ ಹಿಡಿದು ಕಲ್ಮಾಡಿವರೆಗೂ ಸುಮಾರು ಎರಡೂ ಕಿ.ಮೀ. ಉದ್ದಕ್ಕೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು, ಅಡ್ಡಾದಿಡ್ಡಿ ವಾಹನವನ್ನು ನುಗ್ಗಿಸುವ ಚಾಲಕರಂತೂ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾರೆ.

ಇಲ್ಲಿನ ಮೀನುಗಾರಿಕಾ ಬಂದರಿನಿಂದಾಗಿ ನಿತ್ಯ ಸಂಚಾರದ ಬಸ್ಸುಗಳಲ್ಲದೆ ಸಾವಿರಾರು ಸಂಖ್ಯೆಯಲ್ಲಿ  ಮೀನು ಸಾಗಾಟ, ಮಂಜುಗಡ್ಡೆ ಸಾಗಾಟದ ಲಾರಿಗಳು, ಟೆಂಪೋ, ರಿಕ್ಷಾಗಳು ನಿತ್ಯಾ ಓಡಾಟ ನಡೆಸುತ್ತವೆ. ಮೀನುಗಾರಿಕೆಗೆ ಸಂಬಂಧಿಸಿ ಕೆಲಸಕ್ಕೆ ಸಾವಿರಾರು ಮಂದಿ ಇಲ್ಲಿಗೆ ಬರುವುದರಿಂದ ಅಷೇr ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ರಸ್ತೆಗಿಳಿಯುತ್ತವೆ. ಮಾತ್ರ ವಲ್ಲದೆ ಪ್ರವಾಸಿ ತಾಣವಾದ ಮಲ್ಪೆ ಸೈಂಟ್‌ಮೇರಿಸ್‌ ಮತ್ತು ಮಲ್ಪೆ ಬೀಚ್‌ಗೆ ಬರುವ ಹೊರರಾಜ್ಯ ಮತ್ತು ಹೊರಜಿಲ್ಲೆಯ ಸಾವಿರಾರು ಪ್ರವಾಸಿಗರ ಇದೇ ಮಾರ್ಗದಲ್ಲಿ  ಸಂಚರಿಸುವುದರಿಂದ ವಾಹನ ದಟ್ಟಣೆ ಸಮಸ್ಯೆ ಬಿಗಡಾಯಿಸಿದೆ.

ಮೂರು ರಸ್ತೆ ಕೂಡುವಲ್ಲಿ
ಮುಖ್ಯ ರಸ್ತೆಯ ಮೂರು ರಸ್ತೆ ಕೂಡುವಲ್ಲಿ ವಾಹನ ದಟ್ಟಣೆಯಾಗಿ ಸಂಚಾರದ ಅವ್ಯವಸ್ಥೆಯಿಂದ ಗಂಟೆಗಟ್ಟೆಲೆ ಕಾಯುವ ಸ್ಥಿತಿ ಇದೆ. ಮೀನುಗಾರಿಕಾ ಬಂದರಿನಿಂದ ಹೊರಹೋಗುವ ಮತ್ತು ಬಂದರಿನಡೆಗೆ ಬರುವ ವಾಹನಗಳು ಜತೆಗೆ ತೊಟ್ಟಂ, ಕೊಡವೂರು ಮಾರ್ಗದಿಂದ ಮಲ್ಪೆಗಾಗಿ ಮುಂದೆ ಸಾಗುವ ವಾಹನಗಳು ಇವು ಮೂರು ರಸ್ತೆ ಸೇರುವಲ್ಲಿ ಒಂದಾದಾಗ ಸಮಸ್ಯೆ ಉಂಟಾಗುತ್ತದೆ. ಸಿಟಿಬಸ್ಸುಗಳು ಪ್ರಯಾಣಿಕರನ್ನು ಈ ಮೂರು ರಸ್ತೆ ಕೂಡುವಲ್ಲಿ ನಿಲುಗಡೆಗೊಳಿಸಿ ಹತ್ತಿಸಿಕೊಳ್ಳುವುದರಿಂದಲೂ ಸಮಸ್ಯೆಯನ್ನು ಸೃಷ್ಟಿಸುತ್ತಾರೆ ಎಂದು ನಾಗರಿಕರು ಆರೋಪಿಸುತ್ತಾರೆ.

ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಮೀನಿನ ಲಾರಿ ಸೇರಿದಂತೆ ಎಲ್ಲಾ ಘನ ವಾಹನಗಳು ಮುಖ್ಯ ಪೇಟೆಯನ್ನು ಪ್ರವೇಶಿಸಿದೆ. ಕೊಡವೂರು ಲಕ್ಷ್ಮೀನಗರ ಮಾರ್ಗವಾಗಿ ತೆರಳುವುದನ್ನು ಕಡ್ಡಾಯ ಗೊಳಿಸಿದರೆ ಮುಖ್ಯ ರಸ್ತೆಯ ಸಂಚಾರ ದಟ್ಟಣೆಯಲ್ಲಿ ಕಡಿಮೆ ಮಾಡಬಹುದಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರದು.

ಅದೇ ಇಕ್ಕಟ್ಟಾದ ರಸ್ತೆ
ಮಲ್ಪೆ ಪ್ರಮುಖ ಮೀನುಗಾರಿಕಾ ಬಂದರು ಆಗಿ ಅಭಿವೃದ್ದಿಯನ್ನು ಹೊಂದುತ್ತಿದ್ದು ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದಕ್ಕೆ ಪೂರಕದ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ದಿ ಅಗುತ್ತಿಲ್ಲ. 60-70 ವರ್ಷಗಳ ಹಿಂದೆ ಇದ್ದ ಇಕ್ಕಟ್ಟಾಗಿರುವ ರಸ್ತೆ ಈಗಲೂ ಅದೇ ರೀತಿ ಇದೆ. ರಸ್ತೆ ಅಗಲೀಕರಣ ಆಗುತ್ತದೆ ಎಂಬ ಮಾತು ಕಳೆದ 40 ವರ್ಷದಿಂದ ಕೇಳಿ ಬರುತ್ತಲೇ ಇದೆ. ರಾಜ್ಯ ಹೆದ್ದಾರಿ ಈಗ ರಾಷೀrÅಯ ಹೆದ್ದಾರಿಯಾಗಿ ಗುರುತಿಸಿ ಕೊಂಡಿದೆ. ಅಗಲೀಕರಣ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ ಎನ್ನಲಾಗಿದೆ.

ಏಕಮುಖ ಸಂಚಾರ
ಬಂದರಿನಿಂದ ಮೀನು ಸಾಗಾಟದ ವಾಹನಗಳನ್ನು ಕೊಳ- ಕೊರೆನೆಟ್‌-ಕೊಡವೂರು ಮಾರ್ಗವಾಗಿ ಹೊರಹೋಗುವ ವ್ಯವಸ್ಥೆಯನ್ನು ಮಾಡಬೇಕು. ಮುಂದೆ ಲಘ ವಾಹನಗಳು ಮೂಡುಬೆಟ್ಟು ಆದಿವುಡುಪಿ ಮಾರ್ಗವಾಗಿಯೂ, ಘನ ವಾಹನಗಳನ್ನು ಲಕೀÒ$¾ನಗರ ಸಂತೆಕಟ್ಟೆ ಮಾರ್ಗವಾಗಿ ಸಂಚರಿಸುವ ವ್ಯವಸ್ಥೆ ಮಾಡಿದರೆ ಮುಖ್ಯ ರಸ್ತೆಯಲ್ಲಿ ಸ್ವಲ್ಪ ಮಟ್ಟಿಗೆ ಟ್ರಾಫಿಕ್‌ಜಾಮ್‌ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ.
– ಶರತ್‌ ಕರ್ಕೇರ ಕೊಳ, ಮತೊÕéàದ್ಯಮಿ ಮಲ್ಪೆ

ಹೆಚ್ಚುವರಿ ಪೊಲೀಸರು ಬೇಕು
ವಾಹನ ಸವಾರರು ಕಂಡ ಕಂಡಲ್ಲಿ ರಸ್ತೆ ಬದಿ ವಾಹನ ಪಾರ್ಕ್‌ ಮಾಡಿ ಸಮಸ್ಯೆ ತಂದೊಡ್ಡುತ್ತಾರೆ. ಇಲ್ಲಿ ಒಂದೆರಡು ಮಹಿಳಾ ಪೊಲೀಸರು ಇದ್ದರೂ ಅವರಿಂದ ವಾಹನ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು. ಪೊಲೀಸರು ಕೇವಲ ಹೆಲ್ಮೆಟ್‌ ಹಾಕದ ಬೈಕ್‌ ಸವಾರನನ್ನು, ದಾಖಲೆ ಸರಿಯಿಲ್ಲದ ವಾಹನಗಳನ್ನು ತಡೆದು ನಿಲ್ಲಿಸಿ ದಂಡ ವಿಧಿಸುವುದರಲ್ಲಿ ಮಾತ್ರ ಆಸಕ್ತಿ ತೋರುವುದಲ್ಲ. ಸುಗಮ ಸಂಚಾರ ವ್ಯವಸ್ಥೆಯ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಬೇಕು.
– ವಿವೇಕ್‌ ಸುವರ್ಣ ಕೊಡವೂರು

ಟಾಪ್ ನ್ಯೂಸ್

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

2(7

Udupi; ಎಂಜಿಎಂ ಅಮೃತೋತ್ಸವ: ಕಣ್ಮನ ಸೆಳೆದ ವಸ್ತು ಪ್ರದರ್ಶನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.