ಸಾಧನೆಯನ್ನು ತಿಳಿಸುವಲ್ಲಿ ವಿಫಲವಾದೆ: ಆರ್.ಪಿ. ರೂಡಿ
Team Udayavani, Sep 6, 2017, 9:00 AM IST
ಪಾಟ್ನಾ: ಕೇಂದ್ರ ಸಂಪುಟ ಪುನಾರಚನೆ ಮುಗಿದು ಹೊಸ ಸಚಿವರು ಪ್ರಮಾಣ ಸ್ವೀಕರಿಸಿದ ಮೇಲೂ ಸಚಿವ ಸ್ಥಾನ ಕಳೆದುಕೊಂಡವರಲ್ಲಿನ ಅಸಮಾಧಾನದ ಹೊಗೆ ಆರಿಲ್ಲ. ಕರ್ನಾಟಕದ ಸಂಸದ ಸುರೇಶ್ ಅಂಗಡಿ ಅವರು ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಮಾಜಿ ಸಚಿವ ರಾಜೀವ್ ಪ್ರತಾಪ್ ರೂಡಿ ಅವರೂ ಈ ಕುರಿತು ಮಾತನಾಡಿದ್ದಾರೆ. “ಕೌಶಲಾಭಿವೃದ್ಧಿ ಸಚಿವನಾಗಿ ನನ್ನ ಸಾಧನೆಯನ್ನು ಪ್ರಧಾನಿ ಮೋದಿ ಹಾಗೂ ದೇಶದ ಜನತೆಗೆ ತಿಳಿಸುವಲ್ಲಿ ನಾನು ವಿಫಲನಾದೆ,’ ಎಂದು ರೂಡಿ ಮಂಗಳವಾರ ಹೇಳಿದ್ದಾರೆ.
ಅಷ್ಟೇ ಅಲ್ಲ, ನಾನು ನನ್ನಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇನೆ. ಎಲ್ಲರಿಗೂ ಎದ್ದು ಕಾಣುವಂಥ ಕೆಲಸಗಳನ್ನು ಮಾಡಲು ನನ್ನ ಉತ್ತರಾಧಿಕಾರಿಗೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದಿದ್ದಾರೆ. ಪುನಾರಚನೆಗೆ 2 ದಿನವಿದ್ದಾಗ ರೂಡಿ ಅವರಿಂದ ಪ್ರಧಾನಿ ಮೋದಿ ರಾಜೀನಾಮೆ ಪಡೆದಿದ್ದರು. ನಂತರ ಆ ಖಾತೆಯನ್ನು ಸಚಿವ ಧರ್ಮೇಂದ್ರ ಪ್ರಧಾನ್ರಿಗೆ ಹೆಚ್ಚುವರಿಯಾಗಿ ವಹಿಸಲಾಗಿತ್ತು. “ದೇಶಾದ್ಯಂತ ತರಬೇತಿ ಕೇಂದ್ರಗಳನ್ನು ನಾನು ಸ್ಥಾಪಿಸಿದ್ದೇನೆ. ಮಾರ್ಗಸೂಚಿ ಕೂಡ ಸಿದ್ಧವಿದೆ. ಇಷ್ಟೆಲ್ಲ ಕೆಲಸಗಳನ್ನು ಕಡಿಮೆ ಅವಧಿಯಲ್ಲಿ ಮುಗಿಸಿದ್ದೇನೆ,’ ಎಂದಿದ್ದಾರೆ ರೂಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.