ಬೆಲ್ಜಿಯಂ ಪುರುಷರ ತಂಡದ ವಿರುದ್ಧ ವನಿತೆಯರ ಹಾಕಿ !
Team Udayavani, Sep 6, 2017, 8:37 AM IST
ಹೊಸದಿಲ್ಲಿ: ಏಶ್ಯ ಕಪ್ ಕೂಟಕ್ಕೂ ಮೊದಲು ಭಾರತೀಯ ಮಹಿಳಾ ಹಾಕಿ ತಂಡ ಯುರೋಪ್ ಪ್ರವಾಸಕ್ಕೆ ಸಜ್ಜಾಗಿದೆ. ಈ ವೇಳೆ ಬೆಲ್ಜಿಯಂ ಪುರುಷರ ತಂಡದ ವಿರುದ್ಧವೂ ವನಿತೆಯರು ಆಡಲಿದ್ದಾರೆ ಎಂಬು ದೊಂದು ವಿಶೇಷ! ಹಾಲೆಂಡ್ನಲ್ಲಿ ಸೆ. 8ರಿಂದ 15ರ ವರೆಗೆ ಕೂಟ ನಡೆಯಲಿದ್ದು, ಲೆಡೀಸ್ ಡೆನ್ ಬಾಶ್ ತಂಡದ ವಿರುದ್ಧ ಭಾರತ ವನಿತೆಯರು ಪಂದ್ಯವಾಡಲಿದ್ದಾರೆ.
ಬಳಿಕ ಭಾರತೀಯ ಆಟಗಾರ್ತಿಯರು ಬೆಲ್ಜಿಯಂ ಕಿರಿಯರ ಪುರುಷರ ತಂಡದ ವಿರುದ್ಧ ಆಡಲಿದ್ದಾರೆ. “ಇದೇ ಮೊದಲ ಬಾರಿಗೆ ಇಂಥದೊಂದು ಸವಾಲನ್ನು ಎದುರಿಸುತ್ತಿದ್ದೇವೆ. ಆದರೆ ನಮ್ಮ ರಾಷ್ಟ್ರೀಯ ಕ್ಯಾಂಪ್ನಲ್ಲಿ ಭಾರತದ ಕಿರಿಯರ ಪುರುಷರ ತಂಡದೊಂದಿಗೆ ಆಡಿದ ಅನುಭವ ಇದೆ. ಹೀಗಾಗಿ ನಮ್ಮ ದೊಡ್ಡ ಸವಾಲು ಎದುರಾಗಲಾರದು’ ಎಂದು ನಾಯಕಿ ರಾಣಿ ರಾಮ್ಪಾಲ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.