ಮಿಂಚಿತು ಆಸೀಸ್ ಬ್ಯಾಟಿಂಗ್
Team Udayavani, Sep 6, 2017, 8:48 AM IST
ಚಿತ್ತಗಾಂಗ್: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಬ್ಯಾಟಿಂಗ್ ಮಿಂಚತೊಡಗಿದೆ. ಬಾಂಗ್ಲಾ ದೇಶದ 305 ರನ್ನುಗಳ ಪ್ರಥಮ ಇನ್ನಿಂಗ್ಸಿಗೆ ಜವಾಬು ನೀಡುತ್ತಿರುವ ಪ್ರವಾಸಿ ಕಾಂಗರೂ ಪಡೆ 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟಿಗೆ 225 ರನ್ ಗಳಿಸಿದೆ.
ಆರಂಭಕಾರ ಮ್ಯಾಟ್ ರೆನ್‌ಶಾ (4) ಅವರನ್ನು ಆಸ್ಟ್ರೇಲಿಯ ಬಹಳ ಬೇಗ ಕಳೆದುಕೊಂಡಿತು. ಆದರೆ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ಅವರ ಅರ್ಧ ಶತಕದಿಂದ ಕಾಂಗರೂ ಚೇತರಿಸತೊಡಗಿತು. ವಾರ್ನರ್ 88 ರನ್ ಹೊಡೆದು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರೊಂದಿಗೆ 69 ರನ್ ಮಾಡಿರುವ ಹ್ಯಾಂಡ್ಸ್‌ಕಾಂಬ್ ಕ್ರೀಸಿನಲ್ಲಿದ್ದಾರೆ. ಇವರಿಬ್ಬರ 3ನೇ ವಿಕೆಟ್ ಜತೆಯಾಟದಲ್ಲಿ ಈಗಾಗಲೇ 127 ರನ್ ಒಟ್ಟುಗೂಡಿದೆ. ನಾಯಕ ಸ್ಮಿತ್ 58 ರನ್ ಮಾಡಿ ಔಟಾದರು. ವಾರ್ನರ್-ಸ್ಮಿತ್ ಜೋಡಿಯ 2ನೇ ವಿಕೆಟ್ ಜತೆಯಾಟದಲ್ಲಿ 93 ರನ್ ಒಟ್ಟುಗೂಡಿತು.
ಬಾಂಗ್ಲಾದೇಶ 6ಕ್ಕೆ 253 ರನ್ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. 62ರಲ್ಲಿದ್ದ ನಾಯಕ ಮುಶ್ಫಿಕರ್ ರಹೀಂ 68 ರನ್ ಮಾಡಿ ನಿರ್ಗಮಿಸಿದರೆ, 19 ರನ್ ಮಾಡಿ ಆಡುತ್ತಿದ್ದ ನಾಸಿರ್ ಹೊಸೇನ್ 45ರ ತನಕ ಸಾಗಿದರು. ನಥನ್ ಲಿಯೋನ್ 94 ರನ್ನಿಗೆ 7 ವಿಕೆಟ್ ಉಡಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.