ಎಸ್‌ಬಿಐ ಫುಟ್ಬಾಲ್ ಆಟಗಾರ ಹರೀಶ್ ಪೂಜಾರಿ ನಿವೃತ್ತಿ
Team Udayavani, Sep 6, 2017, 11:50 AM IST
ಮುಂಬಯಿ: ದಕ್ಷಿಣ ಮುಂಬಯಿಯ ಹಾರ್ನಿಮನ್ ಸರ್ಕಲ್ ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದ ಫುಟ್ಬಾಲ್ ಆಟಗಾರನಾಗಿ 35 ವರ್ಷಗಳ ಹಿಂದೆ ಭರ್ತಿಗೊಂಡ ಮಲಾಡ್ ಪೂರ್ವದ ಹರೀಶ್ ಪೂಜಾರಿ ಅವರು ಆ. 31ರಂದು ಸ್ವಯಂನಿವೃತ್ತಿ ಹೊಂದಿದರು.
ಮೂಲತಃ ಉಡುಪಿಯ ಕಟಪಾಡಿ ನಿವಾಸಿಯಾದ ಇವರು 1982ರಲ್ಲಿ ಎಸ್‌ಬಿಐನ ಫುಟ್ಬಾಲ್ ಆಟಗಾರನಾಗಿ ಭರ್ತಿಗೊಂಡು ಸುಮಾರು 35 ವರ್ಷಗಳ ಕಾಲ ಬ್ಯಾಂಕಿನ ಪರವಾಗಿ ಆಡಿ ಬ್ಯಾಂಕ್‌ಗೆ ಹಲವಾರು ಪ್ರಶಸ್ತಿ ಗಳಿಸಿಕೊಟ್ಟವರಲ್ಲಿ ಪ್ರಮುಖರಾಗಿರುತ್ತಾರೆ.
ಸಂತೋಷ್ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದಲ್ಲಿ ಆಡಿದಲ್ಲದೆ, ಅಂತರ್ ಬ್ಯಾಂಕ್ ಟೂರಿ°ಯಲ್ಲಿ ಆಡಿ ಭಾರತ ಫುಟ್ಬಾಲ್ ತಂಡದ ದಿಗ್ಗಜರಾದ ಸುರ್ಜಿತ್ ಸೇನ್ ಗುಪ್ತಾ, ಭಾಸ್ಕರ ಗಂಗೂಲಿ,ಪ್ರಸುನ್ ಬ್ಯಾನರ್ಜಿ, ಪ್ರಶಾಂತೊ ಬ್ಯಾನರ್ಜಿ, ಸ್ಯಾಮುಲ್ ಬ್ಯಾನರ್ಜಿ, ಸುಭ್ರತೊ ಭಟ್ಟಾಚಾರ್ಯ ಅವರಂತಹ ಹಲವಾರು ಅನುಭವಿ ಆಟಗಾರರೊಂದಿಗೆ ಆಡಿದ ಹರೀಶ್ ಅವರನ್ನು ಬ್ಯಾಂಕಿನ ಸಿಬಂದಿಗಳು ಹಾಗೂ ಬ್ಯಾಂಕಿನ ಮಹಾ ಪ್ರಬಂಧಕ ಪತಿತ ಪಾವನನಂದ ಹಾಗೂ ದಯಾಳ್ ಮತ್ತು ವಿಶಾಖಾ ಭಟ್ ಅವರು ಶಾಲು ಹೊದಿಸಿ, ಪ್ರಮಾಣ ಪತ್ರ ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು. ಮುಂಬರುವ ದಿನಗಳಲ್ಲಿ ಇವರು ಕರ್ನಾಟಕ ನ್ಪೋರ್ಟ್ಸ್ ಅಸೋಸಿಯೇಶನ್‌ನಲ್ಲಿ ಫುಟ್ಬಾಲ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.